ADVERTISEMENT

ಅನೀತಿ, ಅಧರ್ಮ ವಿರುದ್ಧ ಹೋರಾಡಿ

ಗೋಮಂಗಲ ಯಾತ್ರೆಯಲ್ಲಿ ರಾಘವೇಶ್ವರ ಭಾರತಿ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 8:56 IST
Last Updated 12 ಜನವರಿ 2017, 8:56 IST
ಗೋಮಂಗಲ ಯಾತ್ರೆಯ ಪ್ರಯುಕ್ತ ಮುಂಡರಗಿಯಲ್ಲಿ ಡಾ.ಅನ್ನದಾನೀಶ್ವರ ಸ್ವಾಮೀಜಿ ಹಾಗೂ ರಾಘವೇಶ್ವರ ಭಾರತಿ ಸ್ವಾಮೀಜಿ ಅವರನ್ನು ಸಾರೋಟಿನಲ್ಲಿ ಮೆರವಣಿಗೆ ಮಾಡಲಾಯಿತು
ಗೋಮಂಗಲ ಯಾತ್ರೆಯ ಪ್ರಯುಕ್ತ ಮುಂಡರಗಿಯಲ್ಲಿ ಡಾ.ಅನ್ನದಾನೀಶ್ವರ ಸ್ವಾಮೀಜಿ ಹಾಗೂ ರಾಘವೇಶ್ವರ ಭಾರತಿ ಸ್ವಾಮೀಜಿ ಅವರನ್ನು ಸಾರೋಟಿನಲ್ಲಿ ಮೆರವಣಿಗೆ ಮಾಡಲಾಯಿತು   
ಮುಂಡರಗಿ: ನಮ್ಮ ನೆಲ, ಜಲ, ಸಂಸ್ಕೃತಿ, ಪರಂಪರೆ ಮೊದಲಾದವು ಗಳನ್ನು ರಕ್ಷಿಸಿಕೊಳ್ಳಬೇಕಾಗಿರುವುದು ನಮ್ಮೆಲ್ಲರ ಕತ್ಯವ್ಯವಾಗಿದೆ. ದೇಶದಲ್ಲಿ ಅನೀತಿ, ಅಧರ್ಮಗಳು ಮುಂಚೂಣಿ ಯಲ್ಲಿ ಬಂದಾಗ ಅವುಗಳ ವಿರುದ್ಧ ಎಲ್ಲರೂ ಒಂದಾಗಿ ಹೋರಾಡಬೇಕು ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
 
ಸ್ಥಳೀಯ ಮಂತ್ರಾಲಯ ರಾಘವೇಂದ್ರ ಮಠದಲ್ಲಿ ಏರ್ಪಡಿಸಿದ್ದ ಗೋ ಮಂಗಲ ಯಾತ್ರೆಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
 
ಆಕಳು ನಮ್ಮ ಸಂಸ್ಕೃತಿಯ ಅವಿ ಭಾಜ್ಯ ಅಂಗವಾಗಿದ್ದು, ಗೋವನ್ನು ನಾವೆಲ್ಲ ದೇವರೆಂದು ಪೂಜಿಸುತ್ತೇವೆ. ಹಲವು ಕಾರಣಗಳಿಂದ ಇಂದು ದೇಶಿ ತಳಿಯ ಗೋವುಗಳು ಕಣ್ಮರೆಯಾಗು ತ್ತಿವೆ. ಅವುಗಳನ್ನು ಸಂರಕ್ಷಿಸಬೇಕಾಗಿರು ವುದು ನಮ್ಮ ಕರ್ತವ್ಯವಾಗಿದೆ ಎಂದು ತಿಳಿಸಿದರು.
 
 ಈ ಭಾಗದಲ್ಲಿರುವ ಕಪ್ಪತ್ತಗುಡ್ಡದಲ್ಲಿ ಅಪರೂಪದ ಔಷಧ ಸಸ್ಯಗಳ ಜೊತೆಗೆ ಬಂಗಾರದ ಖನಿಜವಿದೆ. ಬಂಗಾರದ ಆಸೆಗಾಗಿ ಹಲವಾರು ಕಂಪನಿಗಳು ಕಪ್ಪತ ಗುಡ್ಡವನ್ನು ನಾಶ ಮಾಡಲು ಹೊಂಚು ಹಾಕುತ್ತಿದ್ದು, ಅವುಗಳಿಗೆ ಅವಕಾಶ ನೀಡಬಾರದು. ಕಪ್ಪತಗುಡ್ಡದ ಉಳಿವಿ ಗಾಗಿ ಈ ಭಾಗದ ಸ್ವಾಮೀಜಿಗಳು ನಡೆಸು ತ್ತಿರುವ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲಿವಿದೆ ಎಂದು ತಿಳಿಸಿದರು.
 
 ಡಾ.ಅನ್ನದಾನೀಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ಗೋ ರಕ್ಷಣೆಗಾಗಿ ನಾಡಿನಾದ್ಯಂತ ಗೋ ಮಂಗಲ ಯಾತ್ರೆಯನ್ನು ಪ್ರಾರಂಭಿಸಿರುವ ರಾಘವೇಶ್ವರ ಭಾರತಿ ಶ್ರೀಗಳ ಕಾರ್ಯ ಶ್ಲಾಘನೀಯ ಎಂದು ಹರ್ಷ ವ್ಯಕ್ತಪಡಿಸಿದರು. 
 
 ಶಿರಹಟ್ಟಿಯ ಫಕ್ಕೀರ ಸಿದ್ಧರಾಮ ಸ್ವಾಮೀಜಿ ಆಶೀವಚನ ನೀಡಿದರು. ಬನ್ನಿಕೊಪ್ಪದ ಡಾ.ಸುಜ್ಞಾನದೇವ ಶಿವಾ ಚಾರ್ಯ ಸ್ವಾಮೀಜಿ, ಕಲಕೇರಿ ವಿರುಪಾ ಪುರದ ಮುಧುಕೇಶ್ವರ ಶಿವಾಚಾರ್ಯ ಸ್ವಾಮೀಜಿ, ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ, ಹಾಲ ಸೋಮೇಶ್ವರ ಸ್ವಾಮೀಜಿ ಇತರರು ಇದ್ದರು. 
 
ಸಂತ ಸೇವಕ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ನಾರಾಯಣ ಇಲ್ಲೂರ ಸ್ವಾಗತಿಸಿ ಸನ್ಮಾನಿಸಿದರು. ವೈ.ಎನ್.ಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು. 
 
ಜಿಲ್ಲಾ ಪಂಚಾಯ್ತ ಅಧ್ಯಕ್ಷ ವಾಸಣ್ಣ ಕುರುಡಗಿ, ಅಂದಪ್ಪ ಬೆಲ್ಲದ, ವಿ.ಎಲ್. ನಾಡಗೌಡ್ರ, ಈಶ್ವರಪ್ಪ ಹಂಚಿನಾಳ, ಷಡಕ್ಷರಪ್ಪ ಕೊಪ್ಪಳ, ಕರಬಸಪ್ಪ ಹಂಚಿನಾಳ, ದಿಲೀಪಕುಮಾರ ಜೋಶಿ, ನಾಗಪ್ಪ ಶೇಡದ ಮೊದಲಾದವರು ಇದ್ದರು. ಪ್ರಾಚಾರ್ಯ ಸಿ.ಎಸ್.ಅರಸನಾಳ ನಿರೂಪಿಸಿದರು.
 
***
ಜಗತ್ತಿನಲ್ಲಿ ನಮಗೆಲ್ಲ ಮೂವರು ತಾಯಂದಿರಿದ್ದಾರೆ. ಹಡೆದ ತಾಯಿ, ಭೂತಾಯಿ ಹಾಗೂ ಗೋ ತಾಯಿ.  ಗೋಮಾತೆ ನಾವು ಜೀವಂತ ವಾಗಿರುವವರೆಗೂ ಹಾಲುಣಿಸುತ್ತಾಳೆ
-ಡಾ.ಅನ್ನದಾನೀಶ್ವರ ಸ್ವಾಮೀಜಿ,
ಜಗದ್ಗುರು ಅನ್ನದಾನೀಶ್ವರ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.