ADVERTISEMENT

ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 6:09 IST
Last Updated 24 ಮಾರ್ಚ್ 2017, 6:09 IST

ರೋಣ: ವಿದ್ಯಾರ್ಥಿಗಳು ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಬೇಕು. ಆತ್ಮ ವಿಶ್ವಾಸ ಕಳೆದುಕೊಳ್ಳದೇ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಪ್ರತಿಯೊಬ್ಬರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಬೇಕು ಎಂದು ನಿವೃತ್ತ ಡಿಡಿಪಿಐ ಎಸ್.ಎನ್.ಖಾಜಿ ಹೇಳಿದರು.

ಅವರು ಮಂಗಳವಾರ ಪಟ್ಟಣದ ಅಂಜುಮನ್ ಪ್ರೌಢಶಾಲೆಯಲ್ಲಿ ಅಖಿಲ ಭಾರತ ಆದರ್ಶ ಶಿಕ್ಷಕರ ಸಂಘ ಗದಗ ಇವರ ವತಿಯಿಂದ ನಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷಾ ಪೂರ್ವಸಿದ್ಧತೆ ಕಾರ್ಯಾಗಾರದಲ್ಲಿ  ಮಾತನಾಡಿದರು.

ಮುಖ್ಯಶಿಕ್ಷಕರಾದ ಎ.ಐ. ಶೇಖ್ ಮಾತನಾಡಿ, ಜೀವನದಲ್ಲಿ ಅಸಾಧ್ಯ ವಾದದು ಯಾವುದೂ ಇಲ್ಲ. ಸಾಧಿಸಲು ಗುರಿ, ಕಠಿಣ ಪರಿಶ್ರಮ ಹಾಗೂ ಆತ್ಮ ವಿಶ್ವಾಸ ಎಂಬ ಅಸ್ತ್ರಗಳು ಪ್ರಮುಖವಾಗಿ ಪ್ರತಿಯೊಬ್ಬರಲ್ಲಿಯೂ ಇರಬೇಕು. ಸತತ ಪ್ರಯತ್ನಗಳಿಂದ ಎಲ್ಲವನ್ನು ಸಾಧಿಸಲು ಸಾದ್ಯ ಎಂದರು.

ಪರೀಕ್ಷೆಯನ್ನು ವಿದ್ಯಾರ್ಥಿಗಳು ಗಮನದಲ್ಲಿಟ್ಟುಕೊಂಡು ಹಿಂದಿನ ಹಲ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿ ಕೊಳ್ಳಬೇಕು. ಪರೀಕ್ಷೆಯಲ್ಲಿ  ಸಮಯಕ್ಕೆ ಹೆಚ್ಚಿನ ಪ್ರಾಶ್ಯಸ್ತ್ಯವನ್ನು ನೀಡಬೇಕು ಸಮಯವನ್ನು ವ್ಯರ್ಥ ಮಾಡದೇ ಪ್ರತಿಯೊಂದು ಪ್ರಶ್ನೆಗಳಿಗೊ ಉತ್ತರಿಸ ಬೇಕು ಎಂದರು. ಕಾರ್ಯಾಗಾರದಲ್ಲಿ ಎ.ಐ.ಸರಕ ವಾಸ್, ಜುನೇದ್ ಉಮಚಗಿ, ಮಕಾನ ದಾರ್, ಎ.ಎ.ಮುಲ್ಲಾ, ಎನ್.ಐ.ನಾಯಕ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.