ADVERTISEMENT

‘ಉ.ಕ. ರೈತರಿಗೆ ಸರ್ಕಾರಗಳಿಂದ ಮೋಸ’

​ಪ್ರಜಾವಾಣಿ ವಾರ್ತೆ
Published 13 ಮೇ 2017, 9:26 IST
Last Updated 13 ಮೇ 2017, 9:26 IST

ನರಗುಂದ: ‘ಮಹಾದಾಯಿ, ಕಳಸಾ ಬಂಡೂರಿ ಸೇರಿದಂತೆ ಉತ್ತರ ಕರ್ನಾಟಕದ ರೈತರ ಹೋರಾಟಗಳ ಬಗ್ಗೆ ಯಾವ ಸರ್ಕಾರಗಳೂ ಗಮನ ಹರಿಸುತ್ತಿಲ್ಲ’ ಎಂದು ಮಹಾದಾಯಿ ಹೋರಾಟ ಸಮಿತಿ ಸದಸ್ಯ ಚಂದ್ರಗೌಡ ಪಾಟೀಲ ದೂರಿದರು.ಪಟ್ಟಣದಲ್ಲಿ ನಡೆಯುತ್ತಿರುವ ಮಹಾದಾಯಿ ಧರಣಿಯ 667ನೇ ದಿನ ಶುಕ್ರವಾರ ಮಾತನಾಡಿದರು.

‘ಪ್ರಮುಖ ರಾಜಕೀಯ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ತಮ್ಮ ಪ್ರಣಾಳಿಕೆಯಲ್ಲಿ ಮಹಾದಾಯಿ ಈಡೇರಿಸಿಯೇ ತೀರುತ್ತೇವೆ ಎಂದು ಹೇಳುತ್ತಾರೆ. ಆದರೆ ಅಧಿಕಾರಕ್ಕೆ ಬಂದ ಮೇಲೆ  ಸರ್ಕಾರಗಳು ಅದರತ್ತ ತಲೆ ಹಾಕುವುದಿಲ್ಲ. ಇದನ್ನು ನೋಡಿದಾಗ ಉತ್ತರ ಕರ್ನಾಟಕದ ರೈತರಿಗೆ ಎಲ್ಲ ಸರ್ಕಾರಗಳಿಂದ ಮೋಸವಾಗಿದೆ ಎನಿಸಿದೆ ಇರುತ್ತದಯೇ’ ಎಂದು ಪ್ರಶ್ನಿಸಿದರು.

‘ಹಿಂದೆ  ಬಿಜೆಪಿ–ಜೆಡಿಎಸ್‌ ಸಮ್ಮಿಶ್ರ ಸರ್ಕಾರವಿದ್ದಾಗ ಕಳಸಾ ಬಂಡೂರಿಯ ಒಂದಿಷ್ಟು ಕಾಮಗಾರಿ ನಡೆದದ್ದು ಬಿಟ್ಟರೆ ಯಾವುದೇ ಗಂಭೀರ ಪ್ರಯತ್ನಗಳು ನಡೆಯಲಿಲ್ಲ. ಏನೇ ಕೇಳಿದರೂ ನ್ಯಾಯಮಂಡಳಿ ನೆಪ ಹೇಳುತ್ತಾ ರೈತರನ್ನು ವಂಚಿಸಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಪ್ರಧಾನಿಗಳು ಮಧ್ಯ ಪ್ರವೇಶಿಸಬೇಕೆಂದು ಎಲ್ಲರೂ ಹೇಳುತ್ತಾರೆ. ಆದರೆ ಅವರಲ್ಲಿ ಇದನ್ನು ಬಲವಾಗಿ ಪ್ರತಿಪಾದಿಸುವರಾರು ಎಂಬ ಪ್ರಶ್ನೆ ಕಾಡುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
ಹೋರಾಟ ಸಮಿತಿ ಸದಸ್ಯ ಚನ್ನಪ್ಪಗೌಡ ಪಾಟೀಲ ಮಾತನಾಡಿದರು. ಧರಣಿಯಲ್ಲಿ  ಎಸ್‌.ಕೆ.ಗಿರಿಯಣ್ಣವರ, ಯಲ್ಲಪ್ಪ ಚಲುವಣ್ಣವರ, ಈರಣ್ಣ ಗಡಗಿಶೆಟ್ಟರ,  ವೀರಣ್ಣ ಸೊಪ್ಪಿನ, ಕಾಡಪ್ಪ ಕಾಕನೂರು, , ವಾಸು ಚವ್ಹಾಣ,ಎಲ್‌.ಬಿ.ಮುನೇನಕೊಪ್ಪ, ಎಸ್.ಬಿ.ಕೊಣ್ಣೂರು ಸೇರಿದಂತೆ  ಮತ್ತಿರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.