ADVERTISEMENT

‘ಎಪಿಎಂಸಿ ಚುನಾವಣೆ: ಎರಡೂ ಪಕ್ಷಕ್ಕೆ ಪ್ರತಿಷ್ಠೆ ಕಣ’

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 9:06 IST
Last Updated 9 ಜನವರಿ 2017, 9:06 IST
ಗಜೇಂದ್ರಗಡ: ದಿನದಿಂದ ದಿನಕ್ಕೆ ಕಾವೇರುತ್ತಿರುವ ಎಪಿಎಂಸಿ ಚುಣಾವಣೆ ಕಾಂಗ್ರೆಸ್‌ ಮತ್ತು ಬಿಜೆಪಿಯವರಿಗೆ ಈಗ ಪ್ರತಿಷ್ಠೆಯ ಕಣವಾಗಿದೆ. ಕಾರಣ ಶಾಸಕರು ಮತ್ತು ಮಾಜಿ ಸಚಿವರು ಪ್ರಚಾರ ಕಾರ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಈಗ ತೊಡಗಿಕೊಂಡಿದ್ದಾರೆ ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು.
 
ಕೊಡಗಾನೂರ ಗ್ರಾಮದಲ್ಲಿ ಬಿಜೆಪಿ ಪ್ರಚಾರ ಸಮೀಪದ ಕೊಡಗಾನೂರ ಗ್ರಾಮದಲ್ಲಿ ಉಣಚಗೇರಿ ರೈತ ಮತಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುವರ್ಣಾ ನಂದಿಹಾಳರ ಪರವಾಗಿ ಮಾಜಿ ಸಚಿವರಾದ ಕಳಕಪ್ಪ ಬಂಡಿಯವರು ಶನಿವಾರ ದುರ್ಗಾದೇವಿ ಮಂದಿರದ ಆವರಣದಲ್ಲಿ ಪ್ರಚಾರ ಭಾಷಣ ಮಾಡಿದರು.
 
ಮತದಾರರಿಗೆ ಯಾರಿಗೆ ಗೆಲುವು ಆಗುವದೆಂಬುದು ಯಕ್ಷ ಪ್ರಶ್ನೆಯಾಗುತ್ತದೆ. ಕೇವಲ ವರ್ತಕರು ಮತ್ತು ಜಮೀನನ್ನು ಹೊಂದಿದ ರೈತರ ಸೀಮಿತ ಮತಗಳ ಮೇಲೆ ಅಭ್ಯರ್ಥಿಗಳ ಗೆಲುವು ನಿಂತಿದೆ. 
 
ಯಾರನ್ನೆ ಕೇಳಿದರೂ ತಾವೇ ಗೆದ್ದು ಬರುವುದಾಗಿ ಎರಡೂ ಪಕ್ಷದ ಮುಖಂಡರು ಹೇಳುತ್ತಿದ್ದಾರೆ. ಆದರೆ ಮತದಾರರು ಮಾತ್ರ ಜಾಣರಿದ್ದು, ಎಲ್ಲರಿಗೂ ಮತ ಹಾಕುವ ಭರವಸೆಯನ್ನೆ ನೀಡುತ್ತಿದ್ದಾರೆ. 
 
ಮೊದಲು ಸಭೆಗಳನ್ನು ನಡೆಸುತ್ತಿದ್ದ ಪ್ರಚಾರಕರು ಈಗ ಮತದಾರರ ಮನೆಗಳಿಗೆ ತೆರಳಿ ಮತ ಯಾಚಿಸುತ್ತಿದ್ದಾರೆ. ಬಿಡುವಿಲ್ಲದ ಚಟುವಟಿಕೆಗಳ ಮಧ್ಯದಲ್ಲಿಯೂ ತೆರೆಯ ಮರೆಯಲ್ಲಿ ಮತದಾರರ ಉಪಚಾರಗಳು ಎಗ್ಗಿಲ್ಲದೇ ನಡೆಯುತ್ತಿವೆ. ಭರವಸೆ, ಆಸೆ ಆಮಿಷಗಳ ವರಸೆಗಳನ್ನು ಅಭ್ಯರ್ಥಿಗಳು ಗುಟ್ಟಾಗಿ ಹೇಳುತ್ತಿದ್ದಾರೆ. ಪ್ರಚಾರದಲ್ಲಿ ಮಹಿಳೆಯರು ಸಾಕಷ್ಟು ಪ್ರಮಾಣದಲ್ಲಿ ತೊಡಗಿದ್ದಾರೆ. 
 
 ಸಭೆಯಲ್ಲಿ ಕೊಡಗಾನೂರ ಗ್ರಾಮದ ಚಂದ್ರಶೇಖರ ಶಾಸ್ತ್ರಿಗಳು, ಬಿ.ಎಂ.ಸಜ್ಜನ ವಕೀಲರು, ಪುರಸಭೆಯ ಉಪಾಧ್ಯಕ್ಷ, ಬಿಜೆಪಿ ಸದಸ್ಯ  ಬುಡ್ಡಪ್ಪ ಮೂಲಿಮನಿ, ಶರಣಪ್ಪ ರೇವಡಿ, ಅಶೋಕ ವನ್ನಾಲ, ಮಂಜುನಾಥ ಬಡಿಗೇರ, ರವಿ ಕಲಾಲ,  ಕವಿತಾ ಜಾಲೀಹಾಳ,  ಸುಮಿತ್ರಾ ತೊಂಡಿಹಾಳ, ಅಕ್ಕಮ್ಮ ಜಾನಾಯಿ, ವಿಜಯಲಕ್ಷ್ಮೀ ಚಟ್ಟೇರ  ಹಾಗೂ ಮಹಾಂತೇಶ ಮಳಗಿ, ವಿರೇಶ ನಂದಿಹಾಳ ಇತರರು ಇದ್ದರು.          
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.