ADVERTISEMENT

ಕಾಮಗಾರಿ ಪರಿಶೀಲನೆೆ: ಅಸಮಾಧಾನ

ಕೆರೆ ಹೂಳೆತ್ತುವ ಕೆಲಸ ಅವೈಜ್ಞಾನಿಕ, ಸ್ಥಳೀಯರಿಂದ ಆರೋಪ, ಸ್ಥಳದಲ್ಲಿದ್ದ ಅಧಿಕಾರಿಗಳ ತರಾಟೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 9:06 IST
Last Updated 8 ಫೆಬ್ರುವರಿ 2017, 9:06 IST
ರೋಣ ತಾಲ್ಲೂಕಿನ ಕೊತಬಾಳ ಗ್ರಾಮದಲ್ಲಿ  ಉದ್ಯೋಗ ಖಾತ್ರಿ ಯೋಜನೆಯಡಿ ವಿವಿಧೆಡೆ ನಡೆಯುತ್ತಿರುವ ಕೆರೆ ಹೂಳು ತೆಗೆಯುವ ಕಾಮಗಾರಿಯನ್ನು ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಮಂಜುನಾಥ ಚವ್ಹಾಣ ಪರಿಶೀಲಿಸಿದರು
ರೋಣ ತಾಲ್ಲೂಕಿನ ಕೊತಬಾಳ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ವಿವಿಧೆಡೆ ನಡೆಯುತ್ತಿರುವ ಕೆರೆ ಹೂಳು ತೆಗೆಯುವ ಕಾಮಗಾರಿಯನ್ನು ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಮಂಜುನಾಥ ಚವ್ಹಾಣ ಪರಿಶೀಲಿಸಿದರು   

ರೋಣ: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿ ನಡೆಯುತ್ತಿರುವ ಕೆರೆ ಹೂಳು ತೆಗೆಯುವ ಕಾರ್ಯ ಸೇರಿ ವಿವಿಧ ಕಾಮಗಾರಿಗಳನ್ನು ಗದಗ ಜಿಲ್ಲಾ ಪಂಚಾಯ್ತಿ  ಕಾರ್ಯ­ನಿರ್ವಾಹ­ಣಾಧಿ­ಕಾರಿ ಮಂಜುನಾಥ ಚವ್ಹಾಣ ಮಂಗಳ­ವಾರ ಪರಿಶೀಲಿಸಿದರು.

ತಾಲ್ಲೂಕಿನ ಸವಡಿ, ಕುರಹಟ್ಟಿ, ಕೊತಬಾಳ, ಮಾಡಲಗೇರಿ, ಹಿರೇಹಾಳ ಗ್ರಾಮಗಳ ವಿವಿದಡೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಅಡಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ನರೇಗಾ ಯೋಜನೆ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ವರದಾನ­ವಾಗಿದ್ದು, ಜನಸಾಮಾನ್ಯರು ಯೋಜ­ನೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳುವ ಅವ­ಶ್ಯಕತೆ ಇದೆ.

ಯೋಜನೆ ಯಶಸ್ವಿ­ಯಾಗ­ಬೇಕಾದರೆ ಪ್ರತಿಯೊಬ್ಬರು ಯೋಜನೆಯ ಮಾಹಿತಿ ತಿಳಿದು ಪ್ರಾಮಾ­ಣಿಕವಾಗಿ ಕೆಲಸ ಮಾಡಬೇಕು. ಕೂಲಿ ಕಾರ್ಮಿಕರು ಬರ ಸ್ಥಿತಿಯ ನಿರ್ವಹಣೆ ಬಗ್ಗೆ ಚಿಂತಿಸುವ ಅವಶ್ಯಕತೆ ಇಲ್ಲ. ಬರ ನಿರ್ವಹಣೆಗಾಗಿ ಸರ್ಕಾರ ಎಲ್ಲ ರೀತಿಯ ನೆರವು ನೀಡುತ್ತಿದೆ. ಅದರಲ್ಲಿ ನರೇಗಾ ಯೋಜನೆ ಪ್ರಮುಖವಾಗಿದ್ದು, ಮಹಿಳೆ, ಪುರುಷ ಎಂಭ ಭೇದವಿಲ್ಲದೆ ಎಲ್ಲರಿಗೂ ಸಮಾನ ವೇತನವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾ­ಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಕೊತಬಾಳ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯರು ಕಾಮಗಾರಿಯ ಬಗ್ಗೆ ಅಸ­ಮಾ­ಧಾನ ವ್ಯಕ್ತಪಡಿಸಿದರು. ಸ್ಥಳೀ­ಯರಾದ ಜಗದೀಶ ಚಂದ್ರಗೇರಿ ಮಾತ­ನಾಡಿ, ಆಧಿಕಾರಿಗಳು ಬರುತ್ತಾರೆ, ಕಾಮಗಾರಿ ವೀಕ್ಷಿಸುತ್ತಾರೆ, ಹೊಗುತ್ತಾರೆ.

ಇದರಿಂದ ಸಾಮಾನ್ಯ ಜನರಿಗೆ ಯಾವುದೇ ರೀತಿಯ ಸ್ಪಂದನೆ ಇಲ್ಲ­ವಾಗಿದೆ. ಕೆರೆಯಲ್ಲಿ ನಡೆಯುತ್ತಿರುವ ಕಾಮ­ಗಾರಿ ಅವೈಜ್ಞಾನಿಕವಾಗಿದೆ. ಬೆಳೆ­ದಿರುವ ಮುಳ್ಳಿನ ಕಂಟಿಯನ್ನು ಸರಿಯಾಗಿ ಸ್ವಚ್ಛ ಮಾಡಿಲ್ಲ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಚವ್ಹಾಣ ಅಧಿಕಾರಿ­ಗಳನ್ನು ತರಾಟೆಗೆ ತೆಗೆದು­ಕೊಂಡರು. ಯೋಜನೆ ಕಾಮಗಾರಿ ಕೆಲಸವನ್ನು ಇಂದೇ ಪ್ರಾರಂಭಿಸಿದ್ದೀರಿ. ಇಷ್ಟು ದಿನ ನಿಮಗೆ ಇದರ ಬಗ್ಗೆ ಮಾಹಿತಿ ಇರಲಿಲ್ಲವೇ ಎಂದು ಗ್ರಾಮಸ್ಥರಾದ ಜಗದೀಶ ಚಂದ್ರಗಿರಿ ಅವರು ಜಿಲ್ಲಾ ಪಂಚಾಯ್ತಿ ಅಧಿಕಾರಿ ರೇಷ್ಮಾ ಕೇಲೂರ ಅವರನ್ನು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ರೇಷ್ಮಾ ಕೆಲೂರ ಹಿರಿಯ ಅಧಿಕಾರಿಗಳು ನಮಗೆ ಯಾವ ರೀತಿ ಮಾಹಿತಿ ಅನ್ವಯ ಕಾಮಗಾರಿ ಆರಂಭಿಸಲಾಗಿದೆ. ಕೆರೆ ಹೂಳೆತ್ತುವ ಕಾಮಗಾರಿ ಸರಿಯಾಗಿ ನಡೆಯುತ್ತಿದೆ ಎಂದು ಹೇಳಿದರು.

ತಾಲ್ಲೂಕು ಪಂಚಾಯ್ತಿ ಕಾರ್ಯ­ನಿರ್ವಾಹಣಾಧಿಕಾರಿ  ಎಂ.ವಿ.­ಚಳಗೇರಿ, ಜಿಲ್ಲಾ ಪಂಚಾಯ್ತಿ ಎಂಜಿನಿಯರ್‌   ಎಸ್.ಎಚ್.ರಡ್ಡೇರ,  ಪಿಡಿಒ ದಳವಾಯಿ. ಕಲ್ಪನಾ ಕಡಗದ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT