ADVERTISEMENT

ಡಂಬಳ: ಹದಗೆಟ್ಟ ಚರಂಡಿ ವ್ಯವಸ್ಥೆ

ಆರೋಗ್ಯ ಕೇಂದ್ರದ ಹತ್ತಿರ ಗಬ್ಬು ನಾರುವ ಚರಂಡಿ

ಲಕ್ಷ್ಮಣ ಎಚ್.ದೊಡ್ಡಮನಿ
Published 12 ಜುಲೈ 2017, 5:35 IST
Last Updated 12 ಜುಲೈ 2017, 5:35 IST

ಡಂಬಳ: ಗಬ್ಬು ನಾರುತ್ತಿರುವ ಚರಂಡಿ ಕಾಲುವೆ, ಕೆಲವೊಂದು ಗಟಾರದ ವಾಸನೆಗೆ ಸಾರ್ವಜನಿಕರು ಮೂಗು ಮುಂಚಿಕೊಂಡು ತಿರುಗಾಡುವಂತಹ ದುಃಸ್ಥಿತಿ. ಸಂಜೆಯಾಗುತ್ತಿದ್ದಂತೆ ಸೊಳ್ಳೆ ಗಳ ಕಾಟಕ್ಕೆ ಹೈರಾಣದ ಗ್ರಾಮಸ್ಥರು–ಡಂಬಳ ಗ್ರಾಮದಲ್ಲಿ ಹಲವು  ಕಡೆ ಕಂಡು ಬರುವ ಚಿತ್ರಣವಿದು.

ಸುಮಾರು 15 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಇಲ್ಲಿನ ಗ್ರಾಮ ಪಂಚಾಯಿತಿ 29 ಸದಸ್ಯರನ್ನು ಹೊಂದಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ನಾರಾ ಯಣಪುರ, ಹೊಸ ಡಂಬಳ ಹಾಗೂ ರಾಮೇನಹಳ್ಳಿ ಗ್ರಾಮಗಳೂ ಬರುತ್ತವೆ.

‘ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಗ್ರಾಮಸ್ಥರ ಅಸಹಾಯಕತೆಯಿಂದ ಚರಂಡಿ ವಾಸನೆಯಿಂದ ನಿತ್ಯ ಜೀವನ ಕಳೆಯವುದು ಕಷ್ಟವೆನಿಸಿದೆ. ಸೊಳ್ಳೆ ಕಾಟಕ್ಕೆ ಹೆದರಿ ಕಿಟಕಿ ತೆರೆಯುವಂತಿಲ್ಲ. ಹೀಗಾಗಿ ಸಂಬಂಧ ಪಟ್ಟ ಅಧಿಕಾರಿಗಳು ಆರೋಗ್ಯ ಕೇಂದ್ರದ ಹತ್ತಿರ ಸಂಗ್ರಹ ಆಗುವ ಚರಂಡಿ ನೀರು ಗ್ರಾಮದ ಹೊರವಲಯಕ್ಕೆ ಸರಾಗವಾಗಿ ಹರಿದು ಹೋಗುವಂತೆ ಸೂಕ್ತ ವ್ಯವಸ್ಥೆ ಮಾಡ ಬೇಕು’ ಎಂದು ಗ್ರಾಮದ ಕುಬೇರಪ್ಪ ಬಂಡಿ ಹಾಗೂ ತಿಮ್ಮಣ್ಣ ವಡ್ಡರ ಒತ್ತಾಯಿಸಿದ್ದಾರೆ.

ADVERTISEMENT

‘ಗ್ರಾಮದ ಕೆಲವೊಂದು ಗಟಾರ ಗಳು ಅವೈಜ್ಞಾನಿಕವಾಗಿವೆ. ಕೆಲವು ದುರಸ್ತಿ  ಹಂತಕ್ಕೆ ಬಂದಿವೆ.  ಗ್ರಾಮದ ಕೆಲ  ಬಯಲು ಜಾಗದ ರಸ್ತೆಯಯ ಬದಿಯನ್ನೇ ಜನತೆ ಬಹಿರ್ದೆಸೆಗೆ ಬಳಸು ತ್ತಿರುವುದರಿಂದ ಗ್ರಾಮ ಗಬ್ಬು ನಾರು ತ್ತಿದೆ. ಹೀಗಾಗಿ, ಪಂಚಾಯಿತಿ ಅಧಿಕಾರಿ ಗಳಿಗೆ ಹೇಳಿದರೂ ಪ್ರಯೋಜನವಾಗಿಲ್ಲ’ ಎಂದು  ದ್ಯಾಮವ್ವನ ಓಣಿಯ ನಿವಾಸಿ ಗಳಾದ ಹುಲಗಪ್ಪ ವಡ್ಡರ, ಫಕ್ಕಿರವ್ವ ಬಾರಕೇರ ಹೇಳುತ್ತಾರೆ.

ಕೆಲ ವಾರ್ಡ್‌ಗಳಲ್ಲಿ ಸಿಮೆಂಟ್‌ ರಸ್ತೆ ಮಾಡಲಾಗಿದ್ದು ರಸ್ತೆಯ ಎರಡೂ ಬದಿ ಯಲ್ಲಿ ಗಟಾರ ಸ್ವಚ್ಛತೆ ಮಾಡದೆ ಇರು ವುದರಿಂದ  ಗಬ್ಬೆದ್ದು ನಾರುತ್ತಿವೆ. ಕೆಲ ಕಡೆ ಅಂಗನವಾಡಿಯ ಹತ್ತಿರವೇ  ಚರಂಡಿ ಸಂಗ್ರಹವಾಗಿದ್ದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಆರೋಗ್ಯ ಕೇಂದ್ರಕ್ಕೆ ಬರುವ ಜನರು ಮೂಗು ಮುಚ್ಚಿಕೊಂಡು ಬರುವಂತಹ ಸ್ಥಿತಿ ನಿಮಾರ್ಣವಾಗಿದೆ.

ಹೀಗಾಗಿ, ಸಾಂಕ್ರಾಮಿಕ ಕಾಯಿಲೆ ಗಳು ಹರಡುವ ಮುನ್ನ  ಮುಂಜಾಗ್ರತೆ ಯಾಗಿ ಚರಂಡಿಗಳನ್ನು ಸ್ವಚ್ಛಗೊಳಿಸ ಬೇಕು ಹಾಗೂ ಚರಂಡಿಯು ಗ್ರಾಮದ ಹೊರ ವಲಯಕ್ಕೆ ಹೋಗುವಂತೆ  ಕಾಲುವೆ ನಿರ್ಮಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.