ADVERTISEMENT

ದಲಿತ ಮಹಿಳೆಯರಿಂದಲೇ ಕಾಮದಹನ!

ಗಜೇಂದ್ರಗಡ ಪಟ್ಟಣದಲ್ಲಿ ವಿಶಿಷ್ಟ ಹೋಳಿ ಹಬ್ಬ ಆಚರಣೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 6:35 IST
Last Updated 14 ಮಾರ್ಚ್ 2017, 6:35 IST

ಗಜೇಂದ್ರಗಡ: ಪಟ್ಟಣದ ಹೋಳಿ ಹಬ್ಬವು ತನ್ನದೇ ಆದ ವಿಶೇಷ ಹೊಂದಿದೆ. ಸುಮಾರು 7–8 ಕಡೆಗೆ ಸ್ಥಾಪಿತವಾದ ಕಾಮ–ರತಿ ಮೂರ್ತಿಗಳು ಬಲು ಆಕರ್ಷಕವಾಗಿರುತ್ತವೆ. ವಾಣಿ ಪೇಟೆ ಮತ್ತು ಡೊಳ್ಳನವರ ಓಣಿಯ ಕಾಮ–ರತಿ ಆಚರಣೆ ವಿಶೇಷತೆಯಿಂದ ಕೂಡಿದೆ.

ಹುಣ್ಣಿಮೆಯ ದಿನ ಬೆಳಿಗ್ಗೆ ಕಾಮನ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಸಂಜೆ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯ ಕ್ರಮ ಜರುಗುತ್ತವೆ. ಮಾರನೆಯ ದಿನ ಮೆರವಣಿಗೆ ನಂತರ ಕಾಮದಹನ ವಾಗುತ್ತದೆ.

ವಿಚಿತ್ರವೆಂದರೆ ಕಾಮದಹನ ಮಾಡುವವರು ಮಾತ್ರ ದಲಿತ ಮಹಿಳೆ ಯರು. ಅವರ ಹೊರತಾಗಿ ಯಾರೂ ಕಾಮನನ್ನು ದಹಿಸುವಂತಿಲ್ಲ. ಹಾಗೆ ಮಾಡಿದರೆ ಅದು ಕೇಡಂತೆ, ಪ್ರತಿಷ್ಠಾಪಿ ಸಿದ ದಿನ ಪಟ್ಟಣದ ದಲಿತ ಮಹಿಳೆ ಯರು ಬಂದು ಹಾಡನ್ನು ಹಾಡಿ ಹೋಗು ತ್ತಾರೆ. ಮಾರನೆಯ ದಿನದ ಮೆರವಣಿಗೆ ಯಲ್ಲಿ ಪಾಲ್ಗೊಂಡು ಕಾಮನನ್ನು ಕುರಿತಾದ ಹಾಡು ಹಾಡುತ್ತಾರೆ.

ರಂಗಿನಾಟದ ನಂತರ ಕಾಮನಿಗೆ ಅಗ್ನಿ ಸ್ಪರ್ಶ ಮಾಡುತ್ತಾರೆ. ‘ಹರಿಜನ ಮಹಿಳೆಯರೇ ಮೊದಲು ಕಾಮ ದಹ ನದ ನಂತರ ಉಳಿದವರು ಹಚ್ಚಬೇಕು. ಇದು ನಮ್ಮ ಹಿರಿಯರ ಕಾಲದಿಂದ ನಡೆದುಕೊಂಡು ಬಂದ ಪದ್ಧತಿ’ ಎನ್ನುತ್ತಾರೆ ವಾಣಿ ಪೇಟೆಯ ಸಂಕನೂರ ಓಣಿಯ ಹಿರಿಯರಾದ ಪರಪ್ಪ ಶಿವಪ್ಪ ಸಂಕನೂರ.
‘ಬಂದ ಮಹಿಳೆಯರಿಗೆ ಸಿಹಿ ಊಟ ಕೊಟ್ಟು ಕಳಿಸುತ್ತೇವೆ. ನಂತರ ಅವರು ಬರುವುದಿಲ್ಲ, ನಾವು ಕರೆಯುವುದಿಲ್ಲ. ಇವರು ಕಾಮನನ್ನು ದಹಿಸಿದ             ನಂತರ ನಾವು ಕಾಮ ದಹನ ಮಾಡುತ್ತೇವೆ’ ಎನ್ನುತ್ತಾರೆ ಶಿವಪುತ್ರಪ್ಪ ಸಂಕನೂರ.

ಇದರಿಂದ ಓಣಿಯವರಿಗೆ ಒಳ್ಳೆಯ ದಾಗಿದೆ. ಇದೇ ಪರಂಪರೆಯನ್ನು ಡೊಳ್ಳಿ ನವರ ಓಣಿಯಲ್ಲಿ ಮಾಡುತ್ತಾರೆ. ಇದ ರಲ್ಲಿ ಜಾತಿ ಭೇಧವಿಲ್ಲದ ಸಾಮರಸ್ಯವಿದೆ. ಕಾಮನ ಹಬ್ಬಕ್ಕಾಗಿ ಎಲ್ಲರೂ ಹಣ ಕೊಟ್ಟು ಸಹಕರಿಸುತ್ತಾರೆ. ಇದು ನಮ್ಮ ಓಣಿಯ ವಿಶೇಷ, ಮಣ್ಣಿನ ಗಡಿಗೆಯಲ್ಲಿ ಬೆದರು ಗೊಂಬೆಯಂತೆ ಕಾಮ ರತಿಯ ರನ್ನು ಬರೆದು. ಅದರೊಂದಿಗೆ ಕಾಗದ ದಲ್ಲಿ ಅವರ ಚಿತ್ರವನ್ನು ಬರೆದು ಇಡು ತ್ತೇವೆ. ಅದಕ್ಕೆ ದಲಿತ ಮಹಿಳೆಯರು ನಮ್ಮಿಂದ ಜಾಜು ಪಡೆದುಕೊಂಡ ನಂತ ರವೇ ಅಗ್ನಿ ಸ್ಪರ್ಶ ಮಾಡುತ್ತಾರೆ. ಆಗ ಕಾಮ ರತಿಯರ ಮುಖ ಮುಚ್ಚುತ್ತೇವೆ’ ಎಂದು ಅರವಿಂದ ಕವಡಿಮಟ್ಟಿ ಮತ್ತು ರಂಗನಾಥ ಚಿನ್ನೂರ ಹೇಳುತ್ತಾರೆ.

- ಡಾ.ಮಲ್ಲಿಕಾರ್ಜುನ ಕುಂಬಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.