ADVERTISEMENT

ಪಹಣಿ ಪಡೆಯಲು ರೈತರ ಪರದಾಟ

ಫಸಲ್ ಬಿಮಾ ಯೋಜನೆಯಡಿ ಬೆಳೆವಿಮೆ ಕಂತು ತುಂಬಲು ಜುಲೈ 31 ಕೊನೆಯ ದಿನ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 10:29 IST
Last Updated 20 ಜುಲೈ 2017, 10:29 IST
ಮುಂಡರಗಿ ತಹಶೀಲ್ದಾರ್ ಕಾರ್ಯಾಲಯದಲ್ಲಿ ಉತಾರ ಪಡೆದುಕೊಳ್ಳಳು ಸರದಿಯಲ್ಲಿ ನಿಂತಿರುವ ರೈತರು
ಮುಂಡರಗಿ ತಹಶೀಲ್ದಾರ್ ಕಾರ್ಯಾಲಯದಲ್ಲಿ ಉತಾರ ಪಡೆದುಕೊಳ್ಳಳು ಸರದಿಯಲ್ಲಿ ನಿಂತಿರುವ ರೈತರು   

ಮುಂಡರಗಿ: ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸಕಾಲದಲ್ಲಿ ಜಮೀನಿನ ಪಹಣಿ (ಉತಾರ) ದೊರೆಯದೆ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪಹಣಿ ಪಡೆದುಕೊಳ್ಳಲು ತಹಶೀಲ್ದಾರ ಕಾರ್ಯಾಲಯದ ಮುಂದೆ ಇಡೀ ದಿನ ಸರದಿಯಲ್ಲಿ ನಿಲ್ಲಬೇಕಾದ ಅನಿರ್ವಾತೆ ಸೃಷ್ಟಿಯಾಗಿದೆ.

ಬೆಳೆಸಾಲ, ಬೆಳೆವಿಮೆ, ಬೆಳೆನಷ್ಟ ಮೊದಲಾದ ಸೌಲಭ್ಯಗಳನ್ನು ಪಡೆದುಕೊಳ್ಳಳು ರೈತರು ಸಂಬಂಧಪಟ್ಟ ಇಲಾಖೆಗಳಿಗೆ ಜಮೀನಿನ ಮೂಲ ಪಹಣಿಯನ್ನು ನೀಡಬೇಕಾಗುತ್ತದೆ. ಮೂಲ ಪಹಣಿ ಇಲ್ಲದಿದ್ದರೆ ರೈತರ ಅರ್ಜಿಯನ್ನು ರದ್ದು ಮಾಡಲಾಗುತ್ತದೆ. ಈ ಕಾರಣದಿಂದ ಎಲ್ಲ ರೈತರೂ ಪಹಣಿ ಪಡೆಯಲು  ತಹಶೀಲ್ದಾರ್ ಕಚೇರಿಗೆ ದೌಡಾಯಿಸಿದ್ದಾರೆ.

ಫಸಲ್ ಬಿಮಾ ಯೋಜನೆಯಡಿಯಲ್ಲಿ ಬೆಳೆವಿಮೆ ತುಂಬಲು ಇದೇ ಜುಲೈ 31ಕೊನೆಯ ದಿನಾಂಕವಾಗಿದ್ದು, ಎಲ್ಲ ರೈತರೂ ಪಹಣಿ ಪಡೆದುಕೊಳ್ಳುವುದು ಅನಿರ್ವಾಯವಾಗಿದೆ. ಗ್ರಾಮೀಣ ಭಾಗಗಳಿಂದ ಬರುವ ರೈತರು ಇಡೀ ದಿನ ಸರದಿಯಲ್ಲಿ ನಿಂತರೂ ಪಹಣಿಪತ್ರ ದೊರೆಯದಂತಾಗಿದೆ.

ADVERTISEMENT

ಬೆಳೆವಿಮೆ, ಬೆಳೆ ಪರಿಹಾರ, ಬೆಳೆ ಸಾಲ ಮೊದಲಾದ ಬೇರೆ ಬೇರೆ ಕಾರಣ ಗಳಿಗೆ ರೈತರು ಪ್ರತ್ಯೇಕವಾಗಿ ಮೂಲ ಪಹಣಿಯನ್ನು ಸಲ್ಲಿಸಬೇಕಾಗುತ್ತದೆ. ಇದ ರಿಂದಾಗಿ ಬಹುತೇಕ ರೈತರು ಏಕಕಾಲ ದಲ್ಲಿ ಒಂದೇ ಖಾತೆಗೆ ಸಂಬಂಧಿಸಿದಂತೆ ಏಳೆಂಟು ಉತಾರಗಳನ್ನು ಪಡೆದು ಕೊಳ್ಳಲು ಮುಂದಾಗಿದ್ದಾರೆ.

ಬ್ಬೊಬ್ಬ ರೈತನು ಮೂರ್ನಾಲ್ಕು ಉತಾರಗಳನ್ನು ಪಡೆಯುತ್ತಿರುವುದರಿಂದ ಎಲ್ಲರಿಗೂ ಏಕಕಾಲದಲ್ಲಿ ಉತಾರ ವಿತರಿಸುವುದು ಸಮಸ್ಯೆಯಾಗಿದೆ ಎಂದು ತಹಶೀಲ್ದಾರ್ ಕಾರ್ಯಾಲಯದ ಹಿರಿಯ ಅಧಿಕಾರಿ ಬಿ.ಕೆ.ಕೋರಿಶೆಟ್ಟರ ತಿಳಿಸಿದರು.

ಈಗ ಎಲ್ಲ ಕೆಲಸಗಳಿಗೂ ಉತಾರದ ಅಗತ್ಯವಿದ್ದು, ಉತಾರ ಪಡೆದುಕೊಳ್ಳು ವುದು ಸಮಸ್ಯೆಯಾಗಿದೆ. ತಹಶೀಲ್ದಾರ್ ಕಾರ್ಯಾಲಯದ ಸಿಬ್ಬಂದಿಯು ಕಳೆದ ವಾರ ಕಂಪ್ಯೂಟರ್ ಸರಿ ಇಲ್ಲ ಎಂಬ ಕಾರಣ ನೀಡಿದ್ದರು. ಈಗ ಎಲ್ಲವೂ ಸರಿ ಹೋಗಿದ್ದರೂ ಉತಾರ ಪಡೆಯಲು ಪರದಾಡುವಂತಾಗಿದೆ ಎಂದು ರೈತ ವೀರಣ್ಣ ಜಾಡರ ಹೇಳಿದರು.

**

ಕಂಪ್ಯೂಟರ್ ಸಮಸ್ಯೆಯನ್ನು ಈಗ ಸರಿಪಡಿಸಲಾಗಿದ್ದು,

ರಾತ್ರಿ ರೈತರಿಗೆ ಅನುಕೂಲವಾಗಲೆಂದು 10 ಗಂಟೆಯವರೆಗೂ ಉತಾರಗಳನ್ನು ನೀಡಲಾಗುತ್ತಿದೆ
ಭ್ರಮರಾಂಬಾ ಗುಬ್ಬಿಶೆಟ್ಟಿ
ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.