ADVERTISEMENT

ಬಿಜೆಪಿಗೆ ಅಧಿಕಾರ: ವಿಜಯೋತ್ಸವ

ಪ್ರಮುಖ ಬೀದಿಗಳಲ್ಲಿ ಮೆರವಣಿಗೆ; ಸಿಹಿ ಹಂಚಿ ಸಂಭ್ರಮಿಸಿದ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 6:30 IST
Last Updated 20 ಮಾರ್ಚ್ 2017, 6:30 IST

ಗಜೇಂದ್ರಗಡ: ಇತ್ತಿಚಿಗೆ ನಡೆದ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಗದ್ದುಗೆಯನ್ನು ಹಿಡಿದ ಕಾರಣ ಇಲ್ಲಿನ ಬಿಜೆಪಿ ಕಾರ್ಯಕರ್ತರು ಶನಿವಾರ ಕಾಲಕಾಲೇಶ್ವರ ವೃತ್ದದಲ್ಲಿ ಸಿಹಿ ಹಂಚಿ ಸಂಭ್ರಮವನ್ನು ಆಚರಿಸಿದರು.

ದೇಶದ ಪ್ರಧಾನಿ ನರೇಂದ್ರ ಮೋದಿಯವರ ದೂರ ದೃಷ್ಠಿಯ ಪರಿಣಾಮಗಾಗಿ ಇತ್ತೀಚೆಗೆ ನಡೆದ 5 ರಾಜ್ಯಗಳ ಚುಣಾವಣೆಯಲ್ಲಿ ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ ಮತ್ತು ಗೋವಾ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಸೂತ್ರವನ್ನು  ಹಿಡಿದಿದೆ ಎಂದರು.

ಈ ಸಾಧನೆ ದೇಶಕ್ಕೆ ತಂದ ದೊಡ್ಡ ಗೌರವ. ಯಶಸ್ಸಿನ ಫಲಿತಾಂಶ ಆಕಸ್ಮಿಕವಲ್ಲ, ಅದು ಶ್ರಮ ಮತ್ತು ಅನುಭವಗಳ ಹದವಾದ ಗಳಿಕೆ. ಅಂತಹ ಒಂದು ಗಳಿಕೆಯನ್ನು ಸಾಧ್ಯವಾಗಿಸಿದ್ದು ಮೋದಿ ಅವರ ಮೋಡಿಯಾಗಿದೆ, ಇದರಿಂದ 4 ರಾಜ್ಯಗಳಲ್ಲಿ ಬಿಜೆಪಿ ಮುಖ್ಯ ಮಂತ್ರಿ ಸ್ಥಾನವನ್ನು ಪಡೆದುಕೊಂಡಿದೆ.

ಈ ಹಿನ್ನೆಲೆಯಲ್ಲಿ ಇಲ್ಲಿನ ಬಿಜೆಪಿ ಮುಖಂಡರು ಪಕ್ಷ ಕಚೇರಿಯಿಂದ ಮೆರವಣಿಗೆ ನಡೆಸಿ ಕಾಲಕಾಲೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು.

ಸಭೆಯಲ್ಲಿ ಪುರಸಭೆಯ ಉಪಾಧ್ಯಕ್ಷ ಬುಡ್ಡಪ್ಪ ಮೂಲಿಮನಿ, ಸದಸ್ಯರಾದ ಅಶೋಕ ವನ್ನಾಲ, ಶರಣಪ್ಪ ರೇವಡಿ, ಕವಿತಾ ಜಾಲಿಹಾಳ, ಅಕ್ಕಮ್ಮ ಜಾನಾಯಿ, ಸುಮಿತ್ರಾ ತೊಂಡಿಹಾಳ, ವಿಜಯಲಕ್ಷ್ಮೀ ಚಟ್ಟೇರ, ಮತ್ತು ಸಂಗೀತಾ ಗಾಣಿಗೇರ, ಭಾಸ್ಕರ ರಾಯಬಾಗಿ, ಅಮರೇಶ ಅರಳಿ, ರಾಜೇಂದ್ರ ಘೋರ್ಪಡೆ, ಭವನಸಾ ರಾಯಬಾಗಿ, ಕನಕಪ್ಪ ಅರಳಿಗಿಡದ, ರಾಜು ಸಾಂಗ್ಲಿಕರ, ಶಂಕರ ಇಂಜನಿ ಹಾಗೂ ಹಳ್ಳಿಗುಡಿ ಗ್ರಾಮದ ಮಹಿಳೆಯರು  ಇದ್ದರು. 
ಸಂಭ್ರಮಾಚರಣೆ

ಮುಳಗುಂದ: ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಇಲ್ಲಿಗೆ ಸಮೀಪದ ಚಿಂಚಲಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಬಿಜೆಪಿ ರೈತ ಮೋರ್ಚಾ, ಗ್ರಾಮೀಣ ಘಟಕದ ವತಿಯಿಂದ ಕಾರ್ಯಕರ್ತರು ಸೊರಟೂರು, ಚಿಂಚಲಿ ಗ್ರಾಮದಲ್ಲಿ ಮೆರವಣಿಗೆ ನಡೆಸಿದರು. ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಗದಗ ಗ್ರಾಮೀಣ ಮಂಡಳದ ಬಿಜೆಪಿ ಘಟಕದ ಅಧ್ಯಕ್ಷ ಭದ್ರೇಶ ಕುಸ್ಲಾಪೂರ ಮಾತನಾಡಿದರು.

ಮುಖಂಡರಾದ ರಾಮಣ್ಣ ಕಮ್ಮಾರ, ಎಂ. ಎನ್. ಹಳ್ಳಿ, ದೇವಪ್ಪ ಕಿತ್ಲಿ, ಐ.ಬಿ. ಗಿಡ್ಡಕೆಂಚ್ಚಣ್ಣವರ, ಬಸವರಾಜ ಚವ್ಹಾಣ, ನಾಗರಾಜ ಜೋಗಿ, ಗೋಡ್ಕೆ, ರವಿ ತಳವಾರ, ಮಹಾದೇವಪ್ಪ ಹಡಪದ, ತಿರಕಪ್ಪ ಹಳ್ಳಿ, ಪ್ರಕಾಶ ಮುಳಗುಂದ, ರುದ್ರಗೌಡ ಇನಾಮತಿ, ಶರಣಯ್ಯ ಹಿರೇಮಠ, ವೈ.ಪಿ.ಅಡ್ನೂರ ಇದ್ದರು.

ಬಿಜೆಪಿ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಜಣ್ಣ ಕುಲಕರ್ಣಿ, ಗದಗ ಗ್ರಾಮೀಣ  ಘಟಕದ ಪ್ರಧಾನ ಕಾರ್ಯದರ್ಶಿ  ಬೂದಪ್ಪ ಹಳ್ಳಿ, ಸುರೇಶ ಶಿವಳ್ಳಿ, ಮುಖಂಡರಾದ ಮಂಜುನಾಥ ಅಣ್ಣಿಗೇರಿ, ರಾಜು ಬಂಡಿವಡ್ಡರ, ಮುದುಕಪ್ಪ ವಡ್ಡರ, ಮುತ್ತಪ್ಪ ಕಲ್ಲೂರ, ಶ್ರೀಕಾಂತ ಹೊಸೂರ, ಈರಪ್ಪ ವಡ್ಡರ, ಕುಮಾರ ಹೊಸೂರ, ಶ್ರೀಕಾಂತ ಬಾದಾಮಿ, ಮುತ್ತಪ್ಪ ಸಂದಕದ, ಹುಚ್ಚಪ್ಪ ಕಲ್ಲೂರ, ದುರಗಪ್ಪ ಮುಳಗುಂದ, ಅನ್ನಪೂರ್ಣವ್ವ ಗುಡಸಲಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.