ADVERTISEMENT

ಮಹಿಳೆಯರಿಂದ ಸರತಿ ಉಪವಾಸ

​ಪ್ರಜಾವಾಣಿ ವಾರ್ತೆ
Published 23 ಜುಲೈ 2017, 7:06 IST
Last Updated 23 ಜುಲೈ 2017, 7:06 IST

ನರಗುಂದ: ಮಹದಾಯಿಗೆ ಆಗ್ರಹಿಸಿ ಕಳೆದ ಎರಡು ವರ್ಷಗಳಿಂದ ನಡೆದ ಹೋರಾಟಕ್ಕೆ ಸರ್ಕಾರಗಳು ಸರಿಯಾಗಿ ಸ್ಪಂದಿಸಿಲ್ಲ. ಇನ್ನೂ ಮೇಲಾದರೂ ಸಿ.ಎಂ ಸಿದ್ದರಾಮಯ್ಯ ನುಡಿದಂತೆ ನಡೆದು ಸರ್ವ ಪಕ್ಷದ ಸಭೆ ನಡೆಸಿ ಸಮಸ್ಯೆ ಪರಿಹರಿಸ ಬೇಕು ಎಂದು ಆಗ್ರಹಿಸಿದರು.

ಇದಕ್ಕಾಗಿ ವೀರೇಶ ಸೊಬರದಮಠ ಉಪವಾಸ ನಿರತರಾದಾಗ ಸಿ.ಎಂ ಸಿದ್ದರಾಮಯ್ಯ ಸಚಿವ ವಿನಯ ಕುಲ ಕರ್ಣಿ ಮೂಲಕ ಆಗಸ್ಟ್‌ ಮೊದಲ ವಾರ ದಲ್ಲಿ ಸರ್ವ ಪಕ್ಷದ ಸಭೆ ನಡೆಸುವ ಭರ ವಸೆ ನೀಡಿದ್ದಾರೆ. ಸಿ.ಎಂ ಸಿದ್ದರಾಮಯ್ಯ ನುಡಿದಂತೆ ನಡೆಯಬೇಕು ಎಂದು ರೈತ ಸಂಘದ  ಶಹರ ಘಟಕದ ಅಧ್ಯಕ್ಷ ವಿಠ್ಠಲ  ಜಾಧವ ಆಗ್ರಹಿಸಿದರು.
ಪಟ್ಟಣದಲ್ಲಿ ನಡೆಯುತ್ತಿರುವ ಮಹ ದಾಯಿ ಧರಣಿಯ 739ನೇ ದಿನ ಶನಿ ವಾರ ಅವರು ಮಾತನಾಡಿದರು.

ಜನಪ್ರತಿನಿಧಿಗಳು, ವಿರೋಧ ಪಕ್ಷದ ನಾಯಕರ ಮಾತಿಗೆ ಬೆಲೆ ನೀಡಿ ಉಪ ವಾಸ  ಕೈ ಬಿಡಲಾಗಿದೆ. ಇದನ್ನು ಹಗುರ ವಾಗಿ ತೆಗೆದುಕೊಳ್ಳದೇ  ಮಹದಾಯಿ ಯೋಜನೆ ಜಾರಿಗೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಜತೆಗೆ  ಮಲಪ್ರಭೆ ಅಚ್ಚುಕಟ್ಟು ಪ್ರದೇಶದ ರೈತರು ಒಂದಾಗಿ ಮಹದಾಯಿಗಾಗಿ ನಿರಂತರ ಹೋರಾಟ ನಡೆಸಬೇಕು ಎಂದರು. ಮಹದಾಯಿ ಹೋರಾಟ ಸಮಿತಿ ಸದಸ್ಯ ಚಂದ್ರಗೌಡ ಪಾಟೀಲ, ಶ್ರೀಶೈಲ ಮೇಟಿ ಮಾತನಾಡಿದರು.

ADVERTISEMENT

ಮಹಿಳೆಯರಿಂದ ಉಪವಾಸ: ತಾಲ್ಲೂ ಕಿನ ವಿವಿಧ ಗ್ರಾಮಗಳಿಂದ ಮಹದಾಯಿ ಧರಣಿ ವೇದಿಕೆಗೆ ಬಂದಿದ್ದ ಲಚ್ಚಮ್ಮ ಜೊತೆನ್ನವರ, ಬಸವ್ವ ಚಲುವಣ್ಣವರ, ದ್ಯಾವಕ್ಕ ಚಲುವನ್ನವರ, ದ್ಯಾವಕ್ಕ ತಾಳಿ, ಜಾನವ್ವ ಚಲುವಣ್ಣವರ, ಬಸವ್ವ ಹಳ್ಳಿಕೇರಿ, ಪಾರವ್ವ ಅಬ್ಬಿಗೇರಿ ಉಪವಾಸ ಸತ್ಯಾಗ್ರಹ ಕೈಗೊಂಡರು.

ನಿತ್ಯ ಸರತಿ ಉಪವಾಸ ಕೈಗೊಳ್ಳುವುದಾಗಿ ಲಚ್ಚಮ್ಮ ಜೊತೆನ್ನವರ ಮಾಹಿತಿ ನೀಡಿದರು. ಧರಣಿಯಲ್ಲಿ ಎಸ್‌.ಬಿ.ಜೋಗಣ್ಣ ವರ, ಚನ್ನು ನಂದಿ, ವಿನೋದ ಒಡ್ಡರ, ಜಗನ್ನಾಥ ಮುಧೋಳೆ, ಬಸಮ್ಮ ಐನಾ ಪುರ ಸೇರಿ ಹೋರಾಟ ಸಮಿತಿ ಸದ ಸ್ಯರು, ಮಹಿಳೆಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.