ADVERTISEMENT

ಮಾವು ಇಳುವರಿ ಹೆಚ್ಚಿಸಲು ಹೊಸ ತಂತ್ರಜ್ಞಾನ

​ಪ್ರಜಾವಾಣಿ ವಾರ್ತೆ
Published 25 ಜುಲೈ 2017, 7:06 IST
Last Updated 25 ಜುಲೈ 2017, 7:06 IST

ಗದಗ: ‘ಮಾವು ಬೆಳೆಗಾರರು ಹೆಚ್ಚು ಇಳುವರಿ ಪಡೆಯಲು ಆಧುನಿಕ ಕೃಷಿ ಪದ್ಧತಿ  ಅಳವಡಿಸಿಕೊಳ್ಳಬೇಕು’ ಎಂದು ಹುಲಕೋಟಿಯ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಜಿ.ಆರ್.ಓದುಗೌಡರ ಸಲಹೆ ನೀಡಿದರು.

ಹುಲಕೋಟಿಯ ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬಾಗಲ ಕೋಟೆ ತೋಟಗಾರಿಕೆ ವಿ.ವಿ ಆಶ್ರಯದಲ್ಲಿ ಶುಕ್ರವಾರ ನಡೆದ ಮಾವು ಉತ್ಪಾದನಾ ತಂತ್ರಜ್ಞಾನ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಗದಗ ಜಿಲ್ಲೆಯಲ್ಲಿ ಎಕರೆಗೆ ಸರಾಸರಿ ಒಂದು ಟನ್ ಮಾವು ಉತ್ಪಾದನೆ ಇದೆ. ಆಧುನಿಕ ಕೃಷಿ ತಂತ್ರಜ್ಞಾನ ಅಳವಡಿಸಿ ಕೊಂಡರೆ ಇದನ್ನು 3 ಟನ್‌ವರೆಗೆ ಹೆಚ್ಚಿಸಿ ಕೊಳ್ಳಬಹುದು’ ಎಂದರು.

ADVERTISEMENT

‘ಮಾವು ಹಾಗೂ ಗೋಡಂಬಿ ಬೆಳೆ ಯಲು ಜಿಲ್ಲೆಯ ಕೆಂಪು ಮಣ್ಣು ಸೂಕ್ತ. ಕೆವಿಕೆ ಸಂಸ್ಥೆಯಿಂದ ಗೋಡಂಬಿ, ಮಾವು ವಿವಿಧ ಹಣ್ಣಿನ ಬೆಳೆಗಾರರಿಗೆ ಮಾರ್ಗ ದರ್ಶನ, ಪ್ರೋತ್ಸಾಹ ನೀಡಲಾಗುತ್ತಿದೆ’ ಎಂದು ಕೃಷಿವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎಲ್.ಜಿ. ಹಿರೇಗೌಡರ ಹೇಳಿದರು.

ಡಾ.ಎಸ್.ಶಶಿಕುಮಾರ ಅವರು, ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಬೆಳೆಗಾರರಿಗೆ ಲಭ್ಯವಿರುವ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿ ಡಾ.ಎ.ಶ್ರೀನಾಥ ಅವರು, ಮಾವಿನ ಬೆಳೆಯಲ್ಲಿ ಯಂತ್ರದಿಂದ ಸವ ರಿಕೆ (ಪ್ರೂನಿಂಗ್) ಮಹತ್ವದ ಕುರಿತು ಪ್ರಾತ್ಯಕ್ಷಿಕೆ ನೀಡಿದರು.

ಮಾವಿನ ಬೆಳೆಯ ಕೀಟ ಹಾಗೂ ರೋಗ ನಿರ್ವಹಣೆ ಕುರಿತು ಡಾ.ಜೆ.ಬಿ. ಗೋಪಾಲ ಮಾತನಾಡಿದರು. ಮಾವಿನ ಬೆಳೆಯ ಪೋಷಕಾಂಶಗಳ ನಿರ್ವಹಣೆ ಕುರಿತು ಡಾ.ಜೆ.ಆನಂದ ರೈತರಿಗೆ ಮಾಹಿತಿ ನೀಡಿದರು.

ಡಾ.ದೀಪಾ ತೇರದಾಳ ಅವರು, ಮಾವಿನ ಬೆಳೆಯಲ್ಲಿ ತಂತ್ರಜ್ಞಾನ ಹಾಗೂ ಮಾವಿನ ಹಣ್ಣಿನಿಂದ ತಯಾರಿಸಬಹು ದಾದ ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ವಿವರಿಸಿದರು.

ತೋಟಗಾರಿಕೆ ವಿ.ವಿ ಅಭಿವೃದ್ಧಿ ಪಡಿಸಿದ ‘ತೋಟಗಾರಿಕೆ ಆ್ಯಪ್’ ಕಾರ್ಯ ನಿರ್ವಹಣೆ ಕುರಿತು ವಿವರಿಸಲಾಯಿತು. ಕೃಷಿ ವಿಜ್ಞಾನಿ ಎಸ್.ಎಚ್. ಆದಾ ಪುರ, ತೋಟಗಾರಿಕೆ ತಜ್ಞ ಕೆ.ಟಿ.ಪಾಟೀಲ, ಬೆಳೆಗಾರರು ಭಾಗವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.