ADVERTISEMENT

ಮುಂದುವರಿದ ಕಾರ್ಮಿಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 5:33 IST
Last Updated 24 ಏಪ್ರಿಲ್ 2017, 5:33 IST
ಗಜೇಂದ್ರಗಡದ ಪುರಸಭೆ ಆವರಣದಲ್ಲಿ ಮುಷ್ಕರ ನಡೆಸುತ್ತಿರುವ ಕಾರ್ಮಿಕರ ಮನ ಒಲಿಸಲು ತಹಶೀಲ್ದಾರ್ ಶಿವಲಿಂಗಪ್ರಭು ವಾಲಿ, ಸಿಪಿಐ ಎಸ್.ಎಸ್. ಬೀಳಗಿ ಯತ್ನಿಸಿದರು
ಗಜೇಂದ್ರಗಡದ ಪುರಸಭೆ ಆವರಣದಲ್ಲಿ ಮುಷ್ಕರ ನಡೆಸುತ್ತಿರುವ ಕಾರ್ಮಿಕರ ಮನ ಒಲಿಸಲು ತಹಶೀಲ್ದಾರ್ ಶಿವಲಿಂಗಪ್ರಭು ವಾಲಿ, ಸಿಪಿಐ ಎಸ್.ಎಸ್. ಬೀಳಗಿ ಯತ್ನಿಸಿದರು   

ಗಜೇಂದ್ರಗಡ: ಸಮರ್ಪಕ ಮರಳು ಪೂರೈ ಕೆಗೆ ಒತ್ತಾಯಿಸಿ. ಪುರಸಭೆ ಆವರಣದಲ್ಲಿ ನಡೆದ ಹೋರಾಟ ತೀವ್ರಗೊಂಡಿದ್ದು ಕಾರ್ಮಿಕರು ಭಾನುವಾರದಿಂದ ಉಪ ವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಅಧಿ ಕಾರಿಗಳು ಸತ್ಯಾಗ್ರಹವನ್ನು ತಡೆಯಲು ನಡೆಸಿದ ಸಂಧಾನ ಯತ್ನ ವಿಫಲವಾಗಿದೆ.ಧರಣಿ ಸ್ಥಳಕ್ಕೆ ರೋಣ ತಹಶೀಲ್ದಾರ್ ಶಿವಲಿಂಗಪ್ರಭು ವಾಲಿ, ಸಿಪಿಐ ಎಸ್.ಎಸ್. ಬೀಳಗಿ ಭೇಟಿ ನೀಡಿ, ಉಪವಾಸವನ್ನು ಕೈಬಿಡುವಂತೆ ಪ್ರತಿಭಟನಾನಿರತರ ಮನ ಒಲಿಸಲು ಯತ್ನಿಸಿದರೂ ಅದು ಫಲ ನೀಡಲಿಲ್ಲ.

ಈ ಸಂದರ್ಭದಲ್ಲಿ ಅಧಿಕಾರಿಗಳ ಜತೆ ಮಾತನಾಡಿದ ಪುರಸಭೆ ಸದಸ್ಯ ಎಂ.ಎಸ್. ಹಡಪದ, ಜಿಲ್ಲಾ ಆಡಳಿತಕ್ಕೆ ನಮ್ಮ ಹೋರಾಟ ಲೆಕ್ಕಕ್ಕೆ ಇಲ್ಲದಂತಾಗಿದೆ.  ಜಿಲ್ಲಾಧಿಕಾರಿ ತಮ್ಮ ಪ್ರತಿಷ್ಠೆ ಬದಿಗಿಟ್ಟು ನಮ್ಮ ಬಳಿ ಬಂದು ನಮ್ಮ ಸಮಸ್ಯೆಯನ್ನು ಆಲಿಸಬೇಕು. ಜನಶಕ್ತಿಯ ಎದುರು ಅವ ರೇನು ದೊಡ್ಡವರಲ್ಲ. ಹಿರಿಯ ಅಧಿ ಕಾರಿಗಳು ಜಿಲ್ಲಾ ಸ್ಥಳದಲ್ಲಿ ಕುಳಿತು ಕಾರ್ಮಿ ಕರ ಜೀವನದ ಜತೆ ಆಟವಾಡುತ್ತಿದ್ದಾರೆ. ನಡುವೆ ತಾಲ್ಲೂಕು ಮಟ್ಟದ ಅಧಿಕಾರಿ ಗಳನ್ನು ಬಲಿಪಶು ಮಾಡುತ್ತಿದ್ದಾರೆ. ನಾವು ಹೋರಾಟ ಮಾಡುತ್ತ ಸತ್ತರೂ ಪರವಾ ಗಿಲ್ಲ. ನಮ್ಮ ಹೋರಾಟ ಮುಂದುವರಿ ಯುತ್ತದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ಕೂಲಿಕಾರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಾಲು ರಾಠೋಡ ಮಾತನಾಡಿ, ಜಿಲ್ಲಾಧಿಕಾರಿ ಪ್ರತಿಭಟನಾ ಸ್ಥಳಕ್ಕೆ ಬರುವವರೆಗೆ ಉಪವಾಸ ಸತ್ಯಾ ಗ್ರಹ ನಡೆಯಲಿದೆ. ಮರಳು ನೀತಿ ಕುರಿತು ಅವರು ಸ್ಪಷ್ಟ ನಿರ್ಧಾರ ತಿಳಿಸಬೇಕು. ಜನಸಾಮಾನ್ಯರಿಗೆ ಮರಳು ದೊರೆಯು ವಂತೆ ಅನುಕೂಲ ಕಲ್ಪಿಸಿ ಕಾರ್ಮಿಕರಿಗೆ ಕೆಲಸ ಮಾಡಲು ಅವಕಾಶ ಮಾಡಿ ಕೊಡ ಬೇಕು ಎಂದು ಆಗ್ರಹಿಸಿದರು.

ADVERTISEMENT

ಭಾನುವಾರ ನಡೆದ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ 11 ಜನ ಕಾರ್ಮಿಕರ  ಆರೋಗ್ಯವನ್ನು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಪ್ರಶಾಂತ ಮಲ್ಲಾಪುರ ಅವರು ತಪಾಸಣೆ ನಡೆಸಿ ದರು. ಸತ್ಯಾಗ್ರಹದಲ್ಲಿ ಮಾರುತಿ ಚಿಟಗಿ, ರೇಣಪ್ಪ ಇಂಗಳೆ, ರಫಿ ಯಲಬುಣಚಿ, ಷಣ್ಮುಖಪ್ಪ ರಂಗ್ರೇಜಿ, ಗಂಗಾಧರ ಅಂಗಡಿ, ಮಹ್ಮದಸಾಬ್ ನಾಲಬಂದ, ಬಾಲು ರಾಠೋಡ, ಯಮನೂರಪ್ಪ  ಲಕ್ಕಲ ಕಟ್ಟಿ, ಯಲ್ಲಪ್ಪ ಕಲ್ಗುಡಿ, ಬಸವರಾಜ ಭಜಂತ್ರಿ, ರುದ್ರಯ್ಯ ಭಿಕ್ಷಾವತಿಮಠ ಹೀಗೆ 11 ಜನ ಪಾಲ್ಗೊಂಡಿದ್ದರು.

ಪ್ರತಿಭಟನೆಯಲ್ಲಿ ಕೃಷಿ ಕೂಲಿಕಾರರ ಶಾಂತವ್ವ ಹಡಪದ, ಶೋಭಾ ಚವ್ಹಾಣ, ಶರಣವ್ವ ಹಲಗಿ,   ಯಲ್ಲಪ್ಪ ಬಂಕದ, ಬಸವ ರಾಜ ದಿಂಡಿ, ಶಿವಾಜಿ ಕಲ್ಗುಡಿ, ಲಕ್ಷಣ ಮುಧೋಳ, ಲಕ್ಷ್ಮಣ ಗುರಿಕಾರ, ಮಾರುತಿ ಕುಂಬಾರ, ಮುತ್ತಪ್ಪ ರಾಮಜಿ, ಮಹ್ಮದ್ ಸಾಬ್ ಬಂಗಾರಗುಂಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.