ADVERTISEMENT

ಮೂರು ಕೆರೆ ತುಂಬಿಸಲು ಯೋಜನೆ

ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆ: ಕೃಷಿ ಹೊಂಡಗಳ ನಿರ್ಮಾಣಕ್ಕೆ ಅಧಿಕಾರಿಗಳ ಆಸಕ್ತಿ ಮುಖ್ಯ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 9:21 IST
Last Updated 23 ಮಾರ್ಚ್ 2017, 9:21 IST

ನರಗುಂದ: ಬೇಸಿಗೆಯಲ್ಲಿ  ನೀರಿನ ತೊಂದರೆ ಹೆಚ್ಚುತ್ತದೆ. ಕಾಲುವೆಗಳಿಗೆ ನೀರು ಹರಿಸಿದಾಗ ಸಕಾಲಕ್ಕೆ ಕೆರೆಗಳು ತುಂಬುವುದಿಲ್ಲ. ಇದರಿಂದ ಅನೇಕ ಗ್ರಾಮಗಳು ನೀರಿಲ್ಲದೇ ಪರದಾಡು ವಂತಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಹದಲಿ, ಬನಹಟ್ಟಿ, ಜಗಾ ಪುರ, ಹಿರೇಕೊಪ್ಪ ಗ್ರಾಮಗಳಲ್ಲಿ ಕುಡಿ ಯುವ ನೀರಿನ ಕೆರೆ ತುಂಬಿಸಲು ಸರಿ ಯಾದ ಮಾರ್ಗವಿಲ್ಲ.

ಈ ನಿಟ್ಟಿನಲ್ಲಿ ನೀರಾವರಿ ಅಧಿಕಾರಿಗಳು ನೂತನ ಯೋಜನೆ ಸಿದ್ಧಪಡಿಸಿ ಕೆರೆ ತುಂಬಿಸಲು ಅನುಕೂಲವಾಗುವಂತೆ ನೋಡಿಕೊಳ್ಳ ಬೇಕು ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ ಸೂಚಿಸಿದರು.

ಪಟ್ಟಣದ ತಾಪಂನಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಂದ ರ್ಭದಲ್ಲಿ ಅವರು ಮಾತನಾಡಿದರು.
ನೀರಾವರಿ ಅಧಿಕಾರಿಗಳು ಇದಕ್ಕೆ ತ್ವರಿತ ಕ್ರಮ ಕ್ರಮ ತೆಗೆದುಕೊಳ್ಳಬೇಕು . ನೀರಿನ ಸಮಸ್ಯೆಯನ್ನು ಹೋಗಲಾಡಿ ಸಲು ಮುಂದಾಗಬೇಕೆಂದರು.

ಬಿಸಿಎಂ ಇಲಾಖೆ ಅಧಿಕಾರಿಗಳ ವಿರುದ್ಧ ಅಸಮಾಧಾನ: ಬಿಸಿಎಂ ಹಾಸ್ಟೇಲ್ ಕಾರ್ಯ ವೈಖರಿ ಕುರಿತು ಸಾರ್ವಜನಿಕ ರಿಂದ ದೂರು ಬರುತ್ತಿದ್ದು,  ವಿದ್ಯಾರ್ಥಿ ಗಳು ಗೈರು ಹಾಜರಿದ್ದರೂ ಅವರ ಹಾಜ ರಾತಿ ದಾಖಲಿಸುತ್ತಿದ್ದಾರೆ ಎಂದು ಕೇಳಿ ಬರುತ್ತಿದೆ ಎಂದು ತಾ.ಪಂ. ಅಧಿಕಾರಿ ಎ.ಜಿ.ಪಾಟೀಲ ಬಿಸಿಎಂ ಅಧಿಕಾರಿಗಳ ವಿರುದ್ಧ ತೀವ್ರ ಅತೃಪ್ತಿ ವ್ಯಕ್ತಪಡಿಸಿದರು.

ಜತೆಗೆ ಬಯೋಮೆಟ್ರಿಕ್ ಇದ್ದರೂ ಹೀಗೇಕೆ? ಎಂದು ಪ್ರಶ್ನಿಸಿದಾಗ  ಸಭೆ ಯಲ್ಲಿ ಇದ್ದ ತಾ.ಪಂ ಸದಸ್ಯರು ಹಾಸ್ಟೇಲ್ ಬಯೋಮೆಟ್ರಿಕ್ ಯಂತ್ರವೇ ಸ್ಥಗಿತ ಗೊಂಡಿದೆ ಎಂದು ಮಾಹಿತಿ ನೀಡಿದರು.

ಇದರಿಂದ ಮತ್ತಷ್ಟು ಸಿಡಿಮಿಡಿ ಗೊಂಡ ತಾ.ಪಂ ಅಧಿಕಾರಿ ಕೂಡಲೇ  ಅದನ್ನು  ದುರಸ್ತಿ ಮಾಡಿಸಿ ಸರಿಯಾಗಿ ಕಾರ್ಯ ನಿರ್ವಹಿಸಿ ಎಂದು ತಾಕೀತು ಮಾಡಿದರು.

ಅಂಗನವಾಡಿಗಳ ನಿರ್ಮಾಣಕ್ಕೆ ಜಾಗೆ ಕೊರತೆ: ಶಿಶು ಅಭಿವೃದ್ಧಿ ಅಧಿಕಾರಿಗಳು  ತಾಲ್ಲೂಕಿನಲ್ಲಿ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಕೊರತೆ ಇದೆ ಎಂದು ಸಭೆಗೆ ತಿಳಿಸಿದಾಗ, ಇದಕ್ಕೆ  ತಾ.ಪಂ ಅಧಿಕಾರಿ ಎ.ಜಿ. ಪಾಟೀಲ ಸ್ಪಂದಿಸಿ ಇದರ ಬಗ್ಗೆ ಸ್ಥಳೀಯ ಪುರಸಭೆ ಹಾಗೂ ಗ್ರಾಪಂಗಳಲ್ಲಿ  ವಿಚಾರಿಸಿ ಅಲ್ಲಿಯ ಪಿಡಿಓ, ಜನಪ್ರತಿನಿಧಿ ಗಳ ಜತೆ ಚರ್ಚಿಸಿ ಲಭ್ಯವಿರುವ ಜಾಗೆ ಪಡೆದುಕೊಂಡು ಅಂಗನವಾಡಿ ಕಟ್ಟಡ ಗಳ ನಿರ್ಮಾಣಕ್ಕೆ ಮುಂದಾಗುವಂತೆ ಸಿಡಿಪಿಓ ಅಧಿಕಾರಿಗಳಿಗೆ ಮರಳಿ ಸೂಚಿ ದ್ದು ಕಂಡುಬಂತು.

ಕೃಷಿ ಹೊಂಡ ನಿರ್ಮಾಣಕ್ಕೆ ಸೂಚನೆ: ಸರ್ಕಾರದ ಮಹತ್ವಾಕಾಂಕ್ಷಿ  ಯೋಜನೆ ಯಾದ  ಕೃಷಿ ಭಾಗ್ಯ ಯೋಜನೆ ಮೂಲಕ ಹೆಚ್ಚೆಚ್ಚು ಕೃಷಿ ಹೊಂಡಗಳನ್ನು ನಿರ್ಮಿ ಸಲು ಅವಕಾಶವಿದೆ. ಇದರ ಬಗ್ಗೆ ರೈತರಿಗೆ ಸರಿಯಾದ ಮಾಹಿತಿ ನೀಡಬೇಕು. ಅವು ಗಳು ನಿರ್ಮಾಣಗೊಳ್ಳಲು  ಕೃಷಿ ಇಲಾಖೆ ಅಧಿಕಾರಿಗಳು  ಹೆಚ್ಚು ಮುತುವರ್ಜಿ ವಹಿ ಸಬೇಕೆಂದು  ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ  ಸೂಚಿಸಿದರು.

ಆಗ ಕೃಷಿ ಅಧಿಕಾರಿ ಎ.ಜಿ.ಮೇಟಿ ಮಾತನಾಡಿ ತಾಲ್ಲೂಕಿನಲ್ಲಿ 206 ಕೃಷಿ ಹೊಂಡಗಳು ನಿರ್ಮಾಣಗೊಂಡಿದ್ದು, ಇನ್ನು ರೈತರು ಬಂದರೆ ಅರ್ಜಿ ಸ್ವೀಕರಿಸಿ ಇದರ ಅನುಕೂಲ ಮಾಡಿಕೊಡುವು ದಾಗಿ ಹೇಳಿದರು.

ಸಭೆಯಲ್ಲಿ ಜಿ.ಪಂ ಸದಸ್ಯೆ ರೇಣುಕಾ ಅವರಾದಿ, ಉಪಾಧ್ಯಕ್ಷೆ ಗೀತಾ ನಾಗನೂರು, ಅನ್ನಪೂರ್ಣಾ ಹೂಗಾರ, ಈರಮ್ಮ ಜೋಗಿ, ಶಂಕ್ರವ್ವ ಮುದಿಗೌಡ್ರ, ವಿಠ್ಠಲ ತಿಮ್ಮರಡ್ಡಿ, ಗಿರೀಶ ನೀಲರಡ್ಡಿ, ಹನಮವ್ವ ಮರಿಯಣ್ಣವರ, ಪ್ರಭುಲಿಂಗ ಯಲಿಗಾರ, ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT