ADVERTISEMENT

‘ಯುವಜನರು ಕ್ರೀಡೆಯಲ್ಲಿ ಪಾಲ್ಗೊಳ್ಳಲಿ’

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2016, 4:15 IST
Last Updated 31 ಡಿಸೆಂಬರ್ 2016, 4:15 IST

ರೋಣ: ‘ಯುವಜನರಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿ ಕಡಿಮೆಯಾಗಿದೆ. ಸದಾ ಕಾಲ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ  ಮಗ್ನರಾಗಿರುತ್ತಾರೆ. ಆದ್ದರಿಂದ ಕ್ರೀಡೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು’ ಎಂದು ಸಂಜಯ ದೊಡ್ಡಮನಿ ಕರೆ ನೀಡಿದರು.

ರೇಣುಕಾದೇವಿ ಸ್ಪೋರ್ಟ್‌್ಸ ಕ್ಲಬ್ ಆಶ್ರಯದಲ್ಲಿ ಇಲ್ಲಿಯ ಹೊಸ ಸಂತೆ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ  ಸ್ಲೋ ಬೈಕ್ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
‘ಕ್ರೀಡೆ ಮತ್ತು ಶಿಕ್ಷಣ ಒಂದೇ ಮುಖದ ಎರಡು ನಾಣ್ಯಗಳಿದ್ದಂತೆ. ಶಿಕ್ಷಣದಿಂದ ಮಾನಸಿಕ ಬೆಳವಣಿಗೆ ಯಾದರೆ, ಕ್ರೀಡೆಯಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಲು ಸಾಧ್ಯ. ಯುವಕರು ಕ್ರೀಡೆಗಳಲ್ಲಿ        ಹೆಚ್ಚು ಭಾಗವಹಿಸಬೇಕು’ ಎಂದರು.

‘ಜನರು ಯಾವುದೇ ಸಂಚಾರ ನಿಯಮ ಪಾಲಿಸದೇ ಅತಿ ವೇಗವಾಗಿ ವಾಹನ ಚಲಾಯಿಸಿಕೊಂಡು ಹೋಗು ತ್ತಾರೆ. ಇದರಿಂದ ಹಲವು ಅಪಘಾತಗಳು ಸಂಭವಿಸುತ್ತಿವೆ. ನಿಧಾನವೇ ಪ್ರಧಾನ ಎಂದು ತಿಳಿದು, ನಿಧಾನವಾಗಿ ಚಲಿಸಬೇಕು’ ಎಂದು ಯವಕರಲ್ಲಿ ಮನವಿ ಮಾಡಿಕೊಂಡ ಅವರು  ‘ನಿಧಾನ ವಾಹನ ಚಾಲನೆ ಮಾಡಬೇಕೆಂಬುದೇ ಈ ಸ್ಪರ್ಧೆಯ ಮುಖ್ಯ ಉದ್ದೇಶವಾಗಿದೆ’ ಎಂದು ತಿಳಿಸಿದರು.

‘ಇಂದಿನ ದಿನಮಾನಗಳಲ್ಲಿ ರಸ್ತೆಯಲ್ಲಿ ಮಕ್ಕಳು ಮತ್ತು ವೃದ್ಧರು ಓಡಾಡುವುದು ತುಂಬಾ ಕಷ್ಟಕರ ವಾಗಿದೆ. ಅತಿ ವೇಗದಲ್ಲಿ ವಾಹನ ಚಲಾಯಿಸುವುದರಿಂದ ಅನೇಕ ಅಪ ಘಾತಗಳು ಸಂಭವಿಸುತ್ತಿವೆ. ಆದ್ದರಿಂದ ನಿಧಾನವಾಗಿ ವಾಹನ ಚಲಾಯಿಸಬೇಕು. ಅವಸರವೇ ಅಪಘಾತಕ್ಕೆ ಕಾರಣ’ ಎಂದು ಮಲ್ಲಯ್ಯಜ್ಜ ಗಡಾದ   ಹೇಳಿದರು.

ಮೊಲ ಮತ್ತು ಆಮೆಯ ನೀತಿಕತೆಯನ್ನು ಉದಾಹರಣೆಯಾಗಿ ಹೇಳಿದ ಅವರು, ‘ಯುವ ಜನರು ಕ್ರೀಡೆಯಲ್ಲಿ ಭಾಗವಹಿಸಿ, ಉತ್ತಮ ಸಾಧನೆ ಮಾಡಿ ಊರಿಗೆ ಮತ್ತು     ದೇಶಕ್ಕೆ ಕಿರ್ತಿ ತರಬೇಕು’ ಎಂದು ಹಾರೈಸಿದರು.

ಶರಣಪ್ಪ ಕೊಪ್ಪದ  ಬಸವರಾಜ ಬಸನಗೌಡ್ರ, ಬಸನಗೌಡ ಪಾಟೀಲ, ಬಾವಾಸಾಬ ಬೆಟಗೇರಿ, ಸಂಗಪ್ಪ ಜಿಡ್ಡಿಬಾಗಿಲ ಮತ್ತಿತರರು ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.