ADVERTISEMENT

ರಸ್ತೆಯಲ್ಲಿ ನಿಲ್ಲುವ ವಾಹನ..!

ಗಜೇಂದ್ರಗಡ ಪಟ್ಟಣದ ಮುಖ್ಯರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಸದಾ ಕಿರಿಕಿರಿ

ಡಾ.ಮಲಿಕ್ಲಾರ್ಜುನ ಕುಂಬಾರ
Published 5 ಜನವರಿ 2017, 10:24 IST
Last Updated 5 ಜನವರಿ 2017, 10:24 IST

ಗಜೇಂದ್ರಗಡ: ಪಟ್ಟಣದಲ್ಲಿನ ರಸ್ತೆಗಳಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿ ಸುವವರ ವಿರುದ್ಧ  ಸಂಬಂಧಿಸಿದವರು ಕ್ರಮ ತೆಗೆದುಕೊಳ್ಳದ ಕಾರಣ, ಮುಖ್ಯ ರಸ್ತೆಗಳಲ್ಲಿ ಸಂಚರಿಸುವಾಗ ಜನರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡಿರ ಬೇಕಾಗಿದೆ.

ಪಟ್ಟಣ ಸಾಕಷ್ಟು ಪ್ರಮಾಣದಲ್ಲಿ ಬೆಳೆ ದರೂ, ಅದಕ್ಕೆ ತಕ್ಕಂತೆ ಮೂಲ ಸೌಲಭ್ಯ ಗಳು ಅಭಿವೃದ್ಧಿಯಾಗಿಲ್ಲ. ಮಂಗಳವಾರ ಸಂತೆ ನಡೆಸಲು ಇಂದಿಗೂ ಸರಿಯಾದ ಜಾಗೆ ಇಲ್ಲದ್ದರಿಂದ ಆ ದಿನ ರಸ್ತೆಯೇ ಸಂತೆಯಾಗುತ್ತದೆ. ವಾಹನ ಸಂಚಾರ ನಿಯಂತ್ರಿಸಲು ಪೊಲೀಸರು ವಾಹನ ನಿಲುಗಡೆಯನ್ನು ತಾತ್ಪೂರ್ತಿಕವಾಗಿ ಬೇರೆಡೆ ಸ್ಥಳಾಂತರಿಸಿದರೂ, ಇಂದಿಗೂ ಸಮಸ್ಯೆ ಬಗೆಹರಿದಿಲ್ಲ. ಪುರಸಭೆಯವರು ಸೂಕ್ತ ಜಾಗೆ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ.

ಕಾಲಕಾಲೇಶ್ವರ ವೃತ್ತವು ಅತ್ತ ಕುಷ್ಟಗಿ ಕಡೆ, ಇತ್ತ ಗದಗ ಕಡೆ, ಮತ್ತೊಂದೆಡೆ ರೋಣ ರಸ್ತೆಗಳನ್ನು ಕೂಡಿಸುವ ಪ್ರಮುಖ ಸ್ಥಳವಾಗಿದೆ. ಆದರೆ ವಾಹನ ಸಂಚಾರದಿಂದ ಇಲ್ಲಿ ಪಾದಚಾರಿಗಳು, ವೃದ್ಧರು, ಮಹಿಳೆಯರು, ಮಕ್ಕಳು ಓಡಾ ಡಲು ತೊಂದರೆಯಾಗಿದೆ. ಅದರಲ್ಲಿ ಮಂಗಳವಾರ ಸಂತೆ ದಿನ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡ ಬೇಕಿದೆ.

ಪ್ರಮುಖ ರಸ್ತೆಗಳಲ್ಲಿ ವಾಹನಗಳನ್ನು ರಸ್ತೆ ಬದಿಯಲ್ಲಿಯೇ ನಿಲ್ಲಿಸುವುದರಿಂದ ಸಂಚಾರಕ್ಕೆ ಸಾಕಷ್ಟು ಅಡಚಣೆಯಾಗು ತ್ತಿದೆ. ಜೊತೆಗೆ  ಟಂಟಂ, ಬಸ್, ಟ್ರ್ಯಾಕ್ಸ್‌ ಗಳನ್ನೂ ರಸ್ತೆ ಮಧ್ಯದಲ್ಲಿಯೇ ನಿಲ್ಲಿಸಿ, ಪ್ರಯಾಣಿಕರನ್ನು ಹತ್ತಿಸಿಕೊಳ್ಳು ತ್ತಾರೆ. ಇದಲ್ಲದೇ ದ್ವಿಚಕ್ರ ವಾಹನಗಳನ್ನು ರಸ್ತೆ ಯಲ್ಲಿಯೇ ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಾರೆ.

ಹೀಗಾಗಿ ಜನರು ಇಕ್ಕಟ್ಟಾದ ರಸ್ತೆಯಲ್ಲಿ ನಡೆದಾಡುವ ಸ್ಥಿತಿ ಉಂಟಾ ಗಿದೆ. ವಾಹನ ನಿಲುಗಡೆಯಿಂದ ರಸ್ತೆ ಬದಿಯಲ್ಲಿರುವ ಅಂಗಡಿಕಾರರು ಸದಾ ಗೊಣಗಾಟ ನಡೆಸುತ್ತಾರೆ.

‘ನಮಗಂತೂ ಸಾಕಾಗಿ ಹೋಗಿದೆ. ರಸ್ತೆ ಮಧ್ಯದಲ್ಲಿ ವಾಹನಗಳನ್ನು ನಿಲ್ಲಿಸ ದಂತೆ ಯಾರೂ ತಾಕೀತು ಮಾಡುತ್ತಿಲ್ಲ. ಹೇಳಲು ಹೋದರೆ ನಮ್ಮೊಂದಿಗೆ ಜಗಳಕ್ಕೆ ಬರುತ್ತಾರೆ’ ಎಂದು ವ್ಯಾಪಾರಿ ಕಳಕಪ್ಪ ಗಡಾದ ಅವರು ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು. ಕಾಲಕಾಲೇಶ್ವರ ವೃತ್ತದಿಂದ ಎಲ್ಲಾ ಕಡೆ ತೆರಳುವ ವಾಹನಗಳ ದಟ್ಟಣೆ ಯಿಂದ ವೃದ್ಧರು, ಮಹಿಳೆಯರು ಮತ್ತು ಅಶಕ್ತರು ಕಂಗೆಟ್ಟಿದ್ದಾರೆ.

ಇಲ್ಲಿ ನಿಲ್ಲುವ ಮತ್ತು ನಿಲ್ಲಿಸುವ ವಾಹನಗಳಿಗೆ ಯಾವುದೇ ನಿಯಂತ್ರಣವೇ ಇಲ್ಲ. ತಮಗೆ ಪ್ರತ್ಯೇಕ ಜಾಗ ನೀಡುವಂತೆ ಆಟೋ ರಿಕ್ಷಾ ಚಾಲಕರು ಮನವಿ ಕೊಟ್ಟಿದ್ದಾರೆ.ಕಾಲಕಾಲೇಶ್ವರ ವೃತ್ತದ ಬಳಿ ವಾಹನ ದಟ್ಟಣೆಯಿಂದ ಸಾಕಷ್ಟು ಸಲ ಅಪಘಾತಗಳಾದರೂ ಸಂಬಂಧಿಸಿದ ವರು ಇಂದಿಗೂ ಎಚ್ಚೆತ್ತುಕೊಂಡಿಲ್ಲ. ಅಪ ಘಾತವಾದ ಸಂದರ್ಭದಲ್ಲಿ ಒಂದೆರಡು ದಿನ ಜಾಗೃತೆ ವಹಿಸಿದಂತೆ ಮಾಡಿ ಮತ್ತೆ ತಣ್ಣಗಾಗಿಬಿಡುತ್ತಾರೆ. ಆದರೆ ಸಮಸ್ಯೆ ಮಾತ್ರ ಇನ್ನೂ ಬಗೆಹರಿದಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.