ADVERTISEMENT

ರೈತರ ಸಾಲ ಮನ್ನಾಕ್ಕೆ ಆಗ್ರಹ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 8:58 IST
Last Updated 20 ಏಪ್ರಿಲ್ 2017, 8:58 IST

ಮುಂಡರಗಿ: ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಕ್ಷಣ ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು (ಸ್ವಾಭಿಮಾನಿ ಬಣ) ಮಂಗಳವಾರ ತಹಶೀಲ್ದಾರ್ ಭ್ರಮರಾಂಭ ಗುಬ್ಬಿಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು.ರಾಜ್ಯದಲ್ಲಿ ಸಕಾಲದಲ್ಲಿ ಮಳೆಯಾಗದೆ ರಾಜ್ಯದ ರೈತರು ತೀವ್ರ ತೊಂದೆರೆ ಅನುಭವಿಸುತ್ತಿದ್ದಾರೆ. ರಾಜ್ಯದಲ್ಲಿ ಭೀಕರ ಬರಗಾಲದ ಛಾಯೆ ಆವರಿಸಿದ್ದು, ರೈತರು ಜೀವನ ನಡೆಸುವುದು ಕಷ್ಟರವಾಗಿದೆ. ಆದ್ದರಿಂದ ತಕ್ಷಣ ಸರ್ಕಾರ ರೈತರ ಎಲ್ಲ ಸಾಲವನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಮಳೆ ಕೊರತೆ, ಬೆಳೆ ನಷ್ಟ, ಸಾಲ ಬಾಧೆ ಮೊದಲಾದ ಕಾರಣಗಳಿಂದ ರಾಜ್ಯದ ಹಲವಾರು ಭಾಗಗಳಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ರೈತರ ಸಾಲ ಮನ್ನಾ ಮಾಡದಿದ್ದಲ್ಲಿ ರೈತರ ಆತ್ಮಹತ್ಯೆ ಸರಣಿ ಮುಂದುವರಿಯುವ ಸಾಧ್ಯತೆ ಇದೆ. ಆದ್ದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮೀನಮೇಷ ಎಣಿಸದೆ ತಕ್ಷಣ ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಇಸ್ಮಾಯಿಲ್ ಬಿಜಾಪೂರ, ಹುಲಗಪ್ಪ ವಡ್ಡರ, ಬಸವನಗೌಡ ಪಾಟೀಲ, ವಿನಾಯಕ ಮುಂಡರಗಿ, ಸಲೀಂ ಅನಂತಪೂರ, ವಿನಾಯಕ ಹಿರೇಮಠ, ನಾಗರಾಜ ಮಳ್ಳಿನ, ಮಾರುತಿ ಗುಜರತ್ತಿ, ಕುಮಾರ ಬಮ್ಮನಕಟ್ಟಿ, ಶ್ರೀನಿವಾಸ ತಿಗರಿ, ಸುನೀಲ್ ಹಡಪದ, ವಿಶಾಲ ನಶಿಪುಡಿ, ಅಮೀರಖಾನ್ ಬಿಜಾಪೂರ, ಮುತ್ತು ಹಡಪದ, ಪ್ರಕಾಶ ಕಲ್ಲಕುಟ್ಟಗರ್, ವಿಶ್ವನಾಥ ಗೋಸಾವಿ ಮೊದಲದವರು ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.