ADVERTISEMENT

‘ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ ಅಪಾರ’

ಭೈರನಹಟ್ಟಿಯಲ್ಲಿ ತಿಂಗಳ ಕವಿ ಅಂಗಳ ಮಾತು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 10:41 IST
Last Updated 20 ಜುಲೈ 2017, 10:41 IST

ನರಗುಂದ: ಕನ್ನಡ ಸಾಹಿತ್ಯ ವಿಶ್ವ ಸಾಹಿತ್ಯ ದಲ್ಲಿ ಅಗ್ರಮಾನ್ಯವಾಗಿದೆ. ಇದು ಬೆಳೆಯು ವಲ್ಲಿ ಸಹಸ್ರಾರು ಜನರ ಪರಿಶ್ರಮ ಇದೆ. ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಮಹಿಳೆಯರ ಕೊಡುಗೆ ಅಪಾರವಾಗಿದೆ ಎಂದು  ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀ ಹೇಳಿದರು.

ತಾಲ್ಲೂಕಿನ ಭೈರನಹಟ್ಟಿ ದೊರೆ ಸ್ವಾಮಿ ವಿರಕ್ತಮಠದಲ್ಲಿ  ಈಚೆಗೆ ರಾಮ ಗಿರಿಯ ವರಕವಿ ಬೇಂದ್ರೆ ಸಾಹಿತ್ಯ ವೇದಿಕೆ ಆಶ್ರಯದಲ್ಲಿ ನಡೆದ  ತಿಂಗಳ ಕವಿ ಅಂಗಳ ಮಾತು ಕಾರ್ಯಕ್ರಮದಲ್ಲಿ ಮಾತನಾಡಿದರು.

ಶರಣೆ ಅಕ್ಕಮಹಾದೇವಿಯಿಂದ ಹಿಡಿದು ತ್ರಿವೇಣಿ,  ಜಯದೇವಿತಾಯಿ ಲಿಗಾಡೆ, ಶಾಂತಾದೇವಿ ಮಾಳವಾಡ ಅವರವರೆಗೂ  ಸಹಸ್ರಾರು ಕನ್ನಡತಿಯರು ಕನ್ನಡ ಸಾಹಿತ್ಯ ಬೆಳೆಸುವಲ್ಲಿ ಶ್ರಮಿಸಿದ್ದಾರೆ. ಈ ನಿಟ್ಟಿನಲ್ಲಿ ಕವಯತ್ರಿ ಮುಕ್ತಾ ಗುಜಮಾಗಡಿ  ತಮ್ಮ ಸೃಜನ ಶೀಲ ಅಭಿವ್ಯಕ್ತಿಯ ಮೂಲಕ ಕವನ ಕಥೆ ಪ್ರಕಟಣೆಯೊಂದಿಗೆ ಗದಗ ಜಿಲ್ಲೆಯಲ್ಲಿ ವಿಶಿಷ್ಟ ವ್ಯಕ್ತಿತ್ವ ಮೈಗೂಡಿಸಿಕೊಂಡಿದ್ದಾರೆ. ಅವರನ್ನು ಬೇಂದ್ರೆ ವೇದಿಕೆ ಗುರುತಿಸಿ, ಸನ್ಮಾನಿಸುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಬೇಂದ್ರೆ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಡಾ.ಸಂಗಮೇಶ ತಮ್ಮನಗೌಡ್ರ ಮಾತನಾಡಿ, ಗದಗ ಜಿಲ್ಲೆ ಯಲ್ಲಿ ನೂರಕ್ಕೂ ಹೆಚ್ಚು ಬರಹಗಾರರು ಮತ್ತು ಕಲಾವಿದೆಯರು ಎಲೆ ಮರೆಯ ಕಾಯಿಯಂತೆ ಇದ್ದಾರೆ. ಅವರ ಸೇವೆ  ಗುರುತಿಸಿ ಸನ್ಮಾನಿಸುವ ಸದಾಶಯವನ್ನು ವೇದಿಕೆ  ಹೊಂದಿದೆ.  ಮುಕ್ತಾ ಗುಜ ಮಾಗಡಿ ಸರಳ ಜೀವಿಯಾಗಿದ್ದು, ಸೃಜನ ಶೀಲ ಸಾಹಿತ್ಯ ಹಾಗೂ ಅಭಿವ್ಯಕ್ತಿ ಪ್ರತಿಭೆ ಹೊಂದಿದ್ದಾರೆ ಎಂದರು.

ಸಂವಾದದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಬರಹಗಾರ್ತಿ  ಮುಕ್ತಾ ಗುಜ ಮಾಗಡಿ ಮಾತನಾಡಿ, ನನ್ನ ಸಾಹಿತ್ಯ ಬದುಕಿನಲ್ಲಿ ಬೇಂದ್ರೆ ವೇದಿಕೆ ನನ್ನ ಸಾಹಿತ್ಯ ಸಂವಾದ ನಡೆಸಿ, ಸನ್ಮಾನಿಸು ತ್ತಿರುವುದು ಬದುಕಿನಲ್ಲಿ ಮರೆಯದ ಅನುಭವ. ಮಹಿಳೆಯರು ಕೇವಲ ಅಡುಗೆಮನೆಗೆ ಮೀಸಲಾಗದೇ  ನಿತ್ಯ ಸಾಹಿತ್ಯ ರಚನೆಯಲ್ಲಿ ತೊಡಗಬೇಕು ಎಂದು ಅಭಿಪ್ರಾಯಪಟ್ಟರು.

ಶಿವಾನಂದ ಸೇಬಣ್ಣವರ, ಶಂಕ್ರಪ್ಪ ಶಿಳ್ಳಿನ, ಕಲಾಶ್ರೀ ಹಾದಿಮನಿ, ಚಿತ್ತರಡ್ಡಿ ಹಂಚಿನಾಳ, ಶಿವಾನಂದಯ್ಯ ಶಂಕಿನ ಮಠ, ಯಶೋಧಾ ಬೆಟಗೇರಿ ಇದ್ದರು. ಚಂದ್ರಕಾಂತ ಇನಾಂದಾರ ಸಂಗೀತ ಕಾರ್ಯಕ್ರಮ ನೀಡಿದರು. ಆರ್.ಬಿ.ಚಿ ನಿವಾಲರ ನಿರೂಪಿಸಿದರು. ಶಂಕ್ರಪ್ಪ ಶಿಳ್ಳಿನ ವಂದಿಸಿದರು. ಮಹಾಂತಯ್ಯ ಹಿರೇಮಠ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.