ADVERTISEMENT

ಸುಸಜ್ಜಿತ ಕಟ್ಟಡವಿದ್ದರೂ, ಸ್ವಚ್ಛತೆ ಮರೀಚಿಕೆ!

​ಪ್ರಜಾವಾಣಿ ವಾರ್ತೆ
Published 3 ಜನವರಿ 2017, 10:42 IST
Last Updated 3 ಜನವರಿ 2017, 10:42 IST

-ಸಿಕಂದರ ಎಂ. ಆರಿ

ನರೇಗಲ್: ಶಿಕ್ಷಣ ಪಡೆಯಲು ನಾಲ್ಕು ಗೋಡೆಗಳ ಮಧ್ಯೆದಲ್ಲಿ ಶಿಕ್ಷಕನೊಬ್ಬ ಪಾಠ ಬೋಧನೆ ಮಾಡಿದರೆ ಸಾಲದು ಅದಕ್ಕೆ ಪೂರಕವಾದ ಶುಚಿತ್ವದ ವಾತಾ ವರಣವೂ ಮುಖ್ಯ. ಆದರೆ ಇಲ್ಲಿನ ಸ್ವಚ್ಛತೆ ಇಲ್ಲದ ಪದವಿಪೂರ್ವ ಕಾಲೇಜಿನಲ್ಲಿ ಇಲ್ಲಿನ ವಿದ್ಯಾರ್ಥಿಗಳಿಗೆ ಶಿಕ್ಷಣ ಅನ್ನುವುದು ಶಿಕ್ಷೆಯಾಗಿದೆ.

ನರೇಗಲ್ ಸಮಿಪದ ನಿಡಗುಂದಿ ಗ್ರಾಮದ  ಸರ್ಕಾರಿ ಪದವಿ ಪೂರ್ವ ಕಾಲೇಜ್‌ ಮುಂಭಾಗ ಪ್ರತಿ ನಿತ್ಯ ಮಲವಿಸರ್ಜನೆ ಆಗುತ್ತಿದೆ. ಇದನ್ನು ಮಕ್ಕಳು ದಾಟಿಕೊಂಡೇ ಒಳಗೆ ಪ್ರವೇಶಿ ಸಬೇಕು. ಹೆಣ್ಣು ಮಕ್ಕಳೂ ಇಲ್ಲಿ ಕಲಿಯು ತ್ತಿದ್ದರೂ ಬಯಲು ಮಲ ವಿಸರ್ಜನೆ ನಡೆ ಯುತ್ತಿರುವುದು ನಾಚಿಕೆಗೇಡಿನ ಸಂಗತಿ ಯಾಗಿದೆ. ಶಾಲಾ ಆವರಣ, ಮುಂಭಾಗ ದಲ್ಲಿ ಎಲ್ಲೆಂದರಲ್ಲಿ ಮಲ ವಿಸರ್ಜನೆ, ಆವರ ಣದ ಸುತ್ತಮುತ್ತ ಮುಳ್ಳುಕಂಟಿ, ಕಸದ ರಾಸಿಗಳಿಂದ ಕೂಡಿದೆ. ಕಾಲೇಜಿಗೆ ಬರುವ ಮಕ್ಕಳು ಹೊಲಸು ದರ್ಶನ ಮಾಡಿಕೊಂಡೇ ಪಾಠಕ್ಕೆ ಮುಂದಾಗ ಬೇಕಾದ ದುರ್ದೈವ.

ಕಾಲೇಜು ನಿಡಗುಂದಿಯಲ್ಲಿ 2011 ಕ್ಕಿಂತ ಪೂರ್ವ ದಲ್ಲಿ ಪ್ರಾರಂಭವಾದರೂ ಅದಕ್ಕೆ ಸೂಕ್ತ ಕಟ್ಟಡ ಇರಲಿಲ್ಲ. ಇದೇ ಗ್ರಾಮದ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರ ತಂದೆ ಡಾ. ವೀರಪ್ಪ ಸಂಕನೂರ ತಮ್ಮ ಊರಿನ ಮಕ್ಕಳು ಪದವಿ ಪೂರ್ವ ಶಿಕ್ಷಣ ಪಡೆ ಯಲಿ ಎಂದು ಭೂ ದಾನಮಾಡಿದ್ದರು.

ಅದರ ಫಲವಾಗಿ 2010-11ನೇ ಸಾಲಿನ ನಬಾರ್ಡ್‌ ಯೋಜನೆಯ ಅಪೆಂಡಿಕ್ಸ್ ಇ ಅಡಿಯಲ್ಲಿ ಕಟ್ಟಡ ನಿರ್ಮಾಣವಾಯಿತು. ಆದರೆ, ವಿದ್ಯಾರ್ಥಿ ಗಳ ಕಲಿಕೆಗೆ ಪ್ರೇರಣೆ ನೀಡಬೇಕಾದ ಸರ್ಕಾರ ಅದಕ್ಕೆ ಬೇಕಾದ ಪೂರಕ ವಾತವರಣ, ಸೂಕ್ತ ಸೌಲಭ್ಯಗಳನ್ನು ಒದಗಿಸ ಜವಾಬ್ದಾರಿ ಮರೆತಿದೆ. ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಕಣ್ಮುಚ್ಚಿ ಕುಳಿತರೆ ಮಕ್ಕಳ ಶಿಕ್ಷಣ ಪ್ರಗತಿ ಕಾಣಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಇಲ್ಲಿನ ವಿದ್ಯಾರ್ಥಿಗಳು ಹಾಗೂ ಪಾಲಕರದ್ದಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.