ADVERTISEMENT

‘ಬಡಾವಣೆಗೆ ಕಲಾಂ ಅವರ ಹೆಸರಿಡಲು ಪುರಸಭೆ ಕ್ರಮ’

​ಪ್ರಜಾವಾಣಿ ವಾರ್ತೆ
Published 31 ಜುಲೈ 2015, 11:11 IST
Last Updated 31 ಜುಲೈ 2015, 11:11 IST

ಲಕ್ಷ್ಮೇಶ್ವರ: ದೇಶ ಮೆಚ್ಚಿದ ನೆಚ್ಚಿನ ರಾಷ್ಟ್ರಪತಿ, ಸರಳ ಸಜ್ಜನಿಕೆಯ ವ್ಯಕ್ತಿ, ಡಾ.ಎ.ಪಿ.ಜೆ. ಅಬ್ದುಲ್‌ ಕಲಾಂರ ನಿಧನಕ್ಕೆ ಗುರುವಾರ ಇಲ್ಲಿನ ಪುರಸಭೆ ಸಭಾಭವನ ದಲ್ಲಿ ಪುರಸಭೆ ಅಧ್ಯಕ್ಷೆ ಗಂಗಮ್ಮ ಗದ್ದಿ ಅವರ ಅಧ್ಯಕ್ಷತೆಯಲ್ಲಿ ಶ್ರದ್ಧಾಂಜಲಿ ಸಭೆ ಜರುಗಿತು.

ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಎಂ.ಆರ್‌. ಪಾಟೀಲ, ಸದಸ್ಯರಾದ ವಿ.ಜಿ. ಪಡಗೇರಿ, ಮಹೇಶ ಹೊಗೆಸೊಪ್ಪಿನ, ರಾಜಣ್ಣ ಕುಂಬಿ, ಗಂಗಮ್ಮ ಫಕ್ಕೀರಸ್ವಾಮಿ ಮಠ ಮಾತನಾಡಿ ಡಾ.ಕಲಾಂರ ತತ್ವಾ ದರ್ಶಗಳನ್ನು ಸ್ಮರಿಸಿಕೊಂಡರು. ಉಪಾಧ್ಯಕ್ಷ ದಾದಾಪೀರ್ ಮುಚ್ಛಾಲೆ ಲಕ್ಷ್ಮೇಶ್ವರದಲ್ಲಿ ಯಾವುದಾದರೂ ಪ್ರದೇಶಕ್ಕೆ ಡಾ. ಎ.ಪಿ.ಜೆ. ಅಬ್ದುಲ್‌ ಕಲಾಂ ನಗರ ಎಂದು ನಾಮಕರಣ ಮಾಡುವ ಮೂಲಕ ಅವರ ನೆನಪು ಸದಾ ಇರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ ಮುಳಗುಂದ, ಸದಸ್ಯರಾದ     ಬಸವ ರಾಜ ಓದಾನವರ, ಕಿರಣ    ನವಲೆ, ವಿರೂಪಾಕ್ಷಪ್ಪ ಆದಿ, ಮಲ್ಲನಗೌಡ ಪಾಟೀಲ, ಹೊನ್ನಪ್ಪ ಬಾಲೆಹೊಸೂರು, ಶಂಕ್ರಮ್ಮ ಕರಡಿ, ಅಣಜಾಣ್ಣವರ, ಸಿದ್ದಿ, ಕನಕವಾಡ, ಸೋಮಣ್ಣ ಸುತಾರ, ಮುಖ್ಯಾಧಿಕಾರಿ ಆರ್‌.ಬಿ. ಶಿಡೇನೂರ, ಸಿಬ್ಬಂದಿ ಹಾಜರಿದ್ದರು. ಎನ್‌.ಎಂ. ಹಾದಿಮನಿ ಸ್ವಾಗತಿಸಿ ವಂದಿಸಿದರು.

ಶ್ರದ್ಧಾಂಜಲಿ: ಪಟ್ಟಣದ ಯುವ ಗೆಳೆಯರ ಬಳಗ, ಸ್ನೇಹಲೋಕ, ಕರ್ನಾಟಕ ಜನಹಿತ ವೇದಿಕೆ ಇಲ್ಲಿನ ವಿದ್ಯಾರಣ್ಯ ವೃತ್ತದ ಬಳಿ ಬುಧವಾರ  ಸಭೆ ಸೇರಿ ನೂರಾರು ಮೇಣದ ಬತ್ತಿಗಳನ್ನು ಹಚ್ಚಿ ಮೌನಾಚರಣೆ ಮಾಡಿದರು. ಬಸವರಾಜ ಬಾಳೇಶ್ವರಮಠ, ಮಹೇಶ ಹೊಗೆಸೊಪ್ಪಿನ, ಬಸವರಾಜ ಬೆಂಡಿಗೇರಿ ಯುವ ಗೆಳೆಯರ ಬಳಗದ ಅಧ್ಯಕ್ಷ ರಂಗನಾಥ ಬದಿ, ಪ್ರೇಮ ಶೇಠ, ನೀಲಪ್ಪ ಕರ್ಜೆಕಣ್ಣವರ, ಚಂಬಣ್ಣ ಬಾಳಿಕಾಯಿ, ಪದ್ಮರಾಜ ಪಾಟೀಲ, ಸೋಮಣ್ಣ ಮುಳ ಗುಂದ, ಬಾಬು ಅಳವಂಡಿ, ಗೋವಿಂದ ಮಾಂಡ್ರೆ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.