ADVERTISEMENT

‘ವಕ್ಫ್‌ ಮಂಡಳಿಗೆ ಶೀಘ್ರ 350 ಸಿಬ್ಬಂದಿ ನೇಮಕ’

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2014, 7:06 IST
Last Updated 1 ಸೆಪ್ಟೆಂಬರ್ 2014, 7:06 IST

ಗದಗ: ಕರ್ನಾಟಕ ವಕ್ಫ್ ಮಂಡಳಿಯಲ್ಲಿ ಖಾಲಿ ಇರುವ ಒಟ್ಟು 350 ಸಿಬ್ಬಂದಿ ಯನ್ನು ಶೀಘ್ರ ನೇಮಕಾತಿ ಮಾಡಿ ಕೊಳ್ಳಲಾಗುವುದು ಎಂದು ವಕ್ಫ್ ಮಂಡಳಿ ಅಧ್ಯಕ್ಷ ಡಾ.ಮೊಹ್ಮದ್‌ ಯುಸೂಫ್‌ ಹೇಳಿದರು.


ಅವರು ಭಾನುವಾರ ನಗರದ ಝಾಕೀರ್‌ಹುಸೇನ್‌ ಕಾಲೋನಿಯ ಶಾದಿ ಮಹಲ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮುಸ್ಲಿಂ ಜಾಗೃತ ವೇದಿಕೆ ಆಶ್ರಯದಲ್ಲಿ ನಡೆದ ಜಿಲ್ಲಾ ಮುಸ್ಲಿಂ ಸಮಾ ಜದ ಮೂಲ ಸಮಸ್ಯೆಗಳ ಕುರಿತ ಚಿಂತನ ಮಂಥನ ಕಾರ್ಯಕ್ರಮವನ್ನು  ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ವಕ್ಫ್ ಮಂಡಳಿಗೆ 1 ಲಕ್ಷ 14 ಸಾವಿರ ಎಕರೆ ಆಸ್ತಿ ಹೊಂದಿದ್ದು, ಆಸ್ತಿ ಪರಭಾರೆ ನಡೆದು ಕೇವಲ 55 ಸಾವಿರ ಎಕರೆ ಮಾತ್ರ ಉಳಿದಿದೆ. ಸ್ವಾರ್ಥ ಸಾಧಕರಿಂದ ಆಸ್ತಿ ಅತಿಕ್ರಮಣ ನಡೆದಿದೆ. ವಕ್ಫ್ ಮಂಡಳಿ ಆಸ್ತಿ ಅತಿಕ್ರಮಣ  ಮಾಡಿದವರ ವಿರುದ್ಧ ಕಾನೂನು ಜಾರಿಗೆ ತರಲಾಗಿದ್ದು ಆಸ್ತಿ ಪರಭಾರೆ ತಪ್ಪಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ವಕ್ಫ್ ಮಂಡಳಿ ಆಸ್ತಿ ಎಲ್ಲಿಯೇ ಇರಲಿ ಅದನ್ನು  ಕಡ್ಡಾಯ ವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಶಾಲಾ ಕಾಲೇಜುಗಳ ಸ್ಥಾಪನೆ ಮೂಲಕ ಶಿಕ್ಷಣ ಪ್ರಸಾರ ಮಾಡಿಕೊಳ್ಳಲು ಅವಕಾಶ ಇದ್ದು ಸಮಾಜದ ಸಂಘಟನೆಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಖಾಜಾಹುಸೇನ್‌ ಮುಧೋಳ ಮಾತನಾಡಿ, ಸಮಾಜದ ಅಭಿವೃದ್ದಿಗೆ ಶಿಕ್ಷಣವೇ ಮುಖ್ಯ ಸಾಧನ, ಬಡ ಮಕ್ಕಳ ಶಿಕ್ಷಣ ಸಾಧನೆಗೆ ಆರ್ಥಿಕವಾಗಿ ನೆರವಾಗಬೇಕು ಎಂದು ಹೇಳಿದರು.

ಕರ್ನಾಟಕ ಮುಸ್ಲಿಂ ಜಾಗೃತ ವೇದಿಕೆ ಅಧ್ಯಕ್ಷ  ಫರೀದಅಹ್ಮದ್‌  ಸುಂಕದ ಮಾತನಾಡಿ, ನಗರದಲ್ಲಿ ಸಮಾಜ ಸಂಘಟನೆಯ ಒಗ್ಗಟ್ಟಿಗೆ ಚಾಲನೆ ನೀಡ­ಬೇಕು ಎಂಬ ಉದ್ದೇಶದಿಂದ ಈ ಕಾರ್ಯ­ಕ್ರಮವನ್ನು ಹಮ್ಮಿಕೊಳ್ಳ­ಲಾ ಗಿದೆ. ಸಮಾಜವನ್ನು ಒಡೆದು ಆಳುವ ನೀತಿ ಅಳಿಸಬೇಕು ಎಂದು ಹೇಳಿದರು.

ಧರ್ಮಗುರು ಬಸೀರ್‌ ಅಹ್ಮದ್‌ ಖಾಜಿ, ಸಮಾಜದ ಮುಖಂಡ  ಮೊಹ್ಮದ ತಾಜುದ್ದೀನ್ ಹುಮನಾ ಬಾದಿ, ಹಿರಿಯ ವಕೀಲ  ಕೆ.ಎಂ.ಕೊಪ್ಪಳ ಮಾತನಾಡಿದರು. ಮೊಕ್ಬಲ್ ಶಿರಹಟ್ಟಿ, ಮೌಲಾಸಾಬ ಮಾನ್ವಿ, ರಫೀಕ್ ಶಿರಹಟ್ಟಿ, ಇಸೂಫ್ ಇಟಗಿ, ಮಕಾಂ ದಾರ, ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಬನ್ನೂರ, ಎನ್.ಕೆ. ಕೊರ್ಲಹಳ್ಳಿ, ಆರ್. ಆರ್. ಅಣ್ಣಿಗೇರಿ, ತೌಸೀಫ್ ನರಗುಂದ ಹಾಜರಿದ್ದರು.

ಜಾವೇದ್‌ ಅಹ್ಮದ್‌  ಸುಂಕದ ಸ್ವಾಗತಿಸಿದರು. ಶಿರಾಜ್ ಅಹ್ಮದ್‌ ಖಾಜಿ ಪ್ರಾಸ್ತಾವಿಕವಾಗಿ ಮಾತ ನಾಡಿ­ದರು. ನಿಸಾರ್‌ಅಹ್ಮದ್‌ ಖಾಜಿ ನಿರೂಪಿ­ಸಿದರು. ಎಂ.ಐ. ಮುಲ್ಲಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT