ADVERTISEMENT

‘ಶಿಕ್ಷಣ ಮಾರಾಟದ ಸರಕಲ್ಲ’

ವಿದ್ಯಾನಂದಿನಿ ಗ್ರಂಥಾಲಯದ ಉದ್ಘಾಟನಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2015, 9:34 IST
Last Updated 1 ಆಗಸ್ಟ್ 2015, 9:34 IST

ನರೇಗಲ್: ‘ಶಿಕ್ಷಣ ಮಾರಾಟದ ಸರಕಾಗಬಾರದು. ಎಲ್ಲರಿಗೂ ಸಮಾನ ಶಿಕ್ಷಣ ಸಿಕ್ಕರೆ ಅದಕ್ಕೆ ಅರ್ಥಬರುತ್ತದೆ’ ಎಂದು ರವೀಂದ್ರನಾಥ ದೊಡ್ಡಮೇಟಿ ಹೇಳಿದರು.

ಸಮೀಪದ ಜಕ್ಕಲಿ ಗ್ರಾಮದ ಚಾವಡಿಯಲ್ಲಿ ಇತ್ತೀಚೆಗೆ ನಡೆದ ಜಕ್ಕಲಿ ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ಸ್ಥಾಪಿಸಲಾದ ವಿದ್ಯಾನಂದಿನಿ ಗ್ರಂಥಾಲಯದ ಉದ್ಘಾಟನಾ ಸಮಾ ರಂಭದಲ್ಲಿ ಅವರು ಮಾತನಾಡಿದರು. ‘ವಿದ್ಯಾರ್ಥಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗುತ್ತಿರುವವರಿಗೆ ಗ್ರಂಥಾಲಯ ಉಪಯೋಗವಾಗಲಿದೆ’ ಎಂದರು.

ಧಾರವಾಡ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ನೀಲಕಂಠಪ್ಪ ಅಸೂಟಿ ಮಾತನಾಡಿ, ‘ಗ್ರಾಮೀಣ ಭಾಗದ ವಿದ್ಯಾ ರ್ಥಿಗಳಿಗೆ ಗ್ರಂಥಾಲಯ ಸೌಲಭ್ಯ ಕಲ್ಪಿಸುತ್ತಿ ರುವುದು ಶ್ಲಾಘನೀಯ’ ಎಂದರು. ಮಾಜಿ ಶಾಸಕ ಜ್ಞಾನದೇವ ದೊಡ್ಡಮೇಟಿ ಮಾತನಾಡಿದರು.

ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಅಶೋಕಪ್ಪ ಯಾವಗಲ್ಲ, ರೋಣ ಹಾಲು ಒಕ್ಕೂಟದ ವಿಸ್ಥರಣಾಧಿಕಾರಿ ಡಿ.ಸಿ. ಆಸಿ, ವಿಭಾಗೀಯ ಅಧಿಕಾರಿ ಬಿ.ಜಿ. ಹಿರೇ ಮಠ, ಬಾಳಪ್ಪ ಹಿರೇಮನಿ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಮೌಲಾನಬಿ ಗಡಾದ, ಗ್ರಾಮ ಪಂಚಾಯ್ತಿ ಸದಸ್ಯ ಪ್ರಕಾಶ ವಾಲಿ, ಬಿ.ಎಸ್. ಗೌಡರ, ಜಂಭಣ್ಣ ಪಲ್ಲೇದ, ಪಿ.ಕೆ. ಪಲ್ಲೇದ ಇದ್ದರು. ವಿದ್ಯಾಧರ ಶಿರಗುಂಪಿ ಸ್ವಾಗತಿಸಿ ದರು. ಬಸವರಾಜ ರೇವಣಕಿ ನಿರೂಪಿಸಿದರು. ಲಿಂಗರಾಜ ಮುಗಳಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.