ADVERTISEMENT

15 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆ!

ಮಂಜುನಾಥ ಆರಪಲ್ಲಿ
Published 5 ಸೆಪ್ಟೆಂಬರ್ 2017, 5:17 IST
Last Updated 5 ಸೆಪ್ಟೆಂಬರ್ 2017, 5:17 IST

ಶಿರಹಟ್ಟಿ: ಮಳೆಗಾಲದಲ್ಲಿಯೂ ಕುಡಿವ ನೀರಿಗೆ ಬರ. ತುಂಗಭದ್ರೆ ಮೈದುಂಬಿ ಹರಿಯುತ್ತಿದ್ದರೂ ಅದನ್ನು ಸಮ ರ್ಪಕವಾಗಿ ಪೂರೈಕೆ ಮಾಡದ ಅವ್ಯವಸ್ಥೆ. ಇವೆಲ್ಲವುಗಳ ಮಧ್ಯೆ 15 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡುವುದಾಗಿ ಪಂಚಾಯ್ತಿಂದ ಘೋಷಣೆ. ಒಟ್ಟಾರೆ ಸಮುದ್ರ ನೆಂಟಸ್ಥಿಕೆ. ಉಪ್ಪಿಗೆ ಬರ ಎನ್ನುವಂತಾಗಿದೆ ಪಟ್ಟಣದ ಜನತೆ ಸ್ಥಿತಿ.

ಪಟ್ಟಣದಿಂದ 40 ಕಿ.ಮೀ ದೂರ ದಲ್ಲಿರುವ ಹೊಳೆ ಇಟಗಿ ಗ್ರಾಮದಿಂದ ಬೆಳ್ಳಟ್ಟಿ ಮಾರ್ಗವಾಗಿ ಶಿರಹಟ್ಟಿ ಮತ್ತು ಮುಳಗುಂದ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆಯಿಂದ ಅನ್ಯಾಯವಾಗುತ್ತಿರುವುದು ಶಿರಹಟ್ಟಿ ಜನತೆಗೆ ಮಾತ್ರ ಎಂಬುವುದು ವಾಸ್ತವ.

ಬರಗಾಲದಿಂದ ಬೋರವೆಲ್‌ನ ಅಂತರ್ಜಲ ಮಟ್ಟ ಕಡಿಮೆ ಆಗಿ ಪೂರೈಕೆ ಆಗದೇ ಇರಬಹುದು. ಶಿರಹಟ್ಟಿ ಪಟ್ಟಣ ಪಂಚಾಯ್ತಿ ಕೇವಲ ಬೋರವೆಲ್‌ ಮೇಲೆ ಅವಲಂಬನೆ ಆಗದೇ ನದಿ ನೀರು ಪೂರೈಕೆ ಯೋಜನೆಗೆ ಒಳಪಟ್ಟಿದೆ ಎಂಬುವುದು ಸ್ಪಷ್ಟ.

ADVERTISEMENT

ಏಳು ದಿನಗಳಿ ಗೊಮ್ಮೆ ನೀರು ಬಿಡುವ ವ್ಯವಸ್ಥೆ ಹೊಂದಿ ರುವ ಪಂಚಾಯ್ತಿ ಆಡಳಿತ ಈಗೀಗ ನೀರು ಪೂರೈಕೆಯಲ್ಲಿನ ಕೆಲ ಸಮಸ್ಯೆ ಮುಂದಿಟ್ಟುಕೊಂಡು 15 ದಿನಗಳಿ ಗೊಮ್ಮೆ ನೀರು ಬಿಡುವುದಾಗಿ ಡಂಗುರ ಸಾರಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಹೊಳೆ ಇಟಗಿ ಗ್ರಾಮದಲ್ಲಿರುವ ಮುಖ್ಯ ನೀರು ಪೂರೈಕೆ ವಿದ್ಯುತ್‌ ಘಟಕ ದಲ್ಲಿನ 5 ಪ್ಯೂಜ್‌ ನಷ್ಟಕ್ಕೆ ಒಳಗಾದ ಪರಿ ಣಾಮ ನೀರು ಪೂರೈಕೆ ತಟಸ್ಥಗೊಂಡಿದೆ ಎಂಬುವುದು ಪ್ರಮುಖ ಕಾರಣ. ಎರಡು ಪ್ಯೂಜ್‌ಗಳು ನಮ್ಮಲ್ಲಿ ಇದ್ದು ಇನ್ನು ಒಂದು ಪ್ಯೂಜ್‌ ಅವಶ್ಯಕತೆ ಇದೆ. ಅದಕ್ಕಾಗಿ ಹೊರರಾಜ್ಯದಿಂದ ಆರ್ಡರ್‌ ಮಾಡಿ ಐದು ದಿನಗಳಾಗಿದ್ದು, ಶೀಘ್ರವೇ ಬರಲಿವೆ ಎನ್ನುತ್ತಾರೆ ಮುಳಗುಂದ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಅಗಡಿ.

3.3 ಕೆ.ವಿ. ಪ್ಯೂಜ್‌ಗಳು ನಮ್ಮ ರಾಜ್ಯದಲ್ಲಿ ದೊರೆಯುವುದಿಲ್ಲ. 11 ಕೆ.ವಿ. ಮಾತ್ರ ದೊರೆಯಲಿದ್ದು, ಅಗತ್ಯ ಇರುವ ಪ್ಯೂಜ್‌ಗಳನ್ನು ಆದಷ್ಟು ಬೇಗನೆ ಕೊಂಡುಕೊಳ್ಳುವ ವ್ಯವಸ್ಥೆ ಮಾಡಲಾಗು ತ್ತಿದೆ. ಎರಡು ಮೂರು ದಿನದಲ್ಲಿ ಎಲ್ಲ ಸಮಸ ಸರಿಹೋಗಲಿದೆ ಎಂದು ಭರವಸೆ ನೀಡಿದರು.

ಜನತೆಗೆ ಅಗತ್ಯವಿರುವ ಹಾಗೂ ಮೂಲ ಸೌಲಭ್ಯವಾದ ನೀರು ಪೂರೈಕೆ ಮಾಡುವ ಘಟಕದಲ್ಲಿ ಪ್ಯೂಜ್‌ಗಳನ್ನು ಸಂಗ್ರಹ ಮಾಡಿದ್ದೇ ಆದರೆ ಅವ್ಯವಸ್ಥೆಗೆ ಅವಕಾಶವೇ ಇರುವುದಿಲ್ಲ. ಪೂರ್ವ ತಯಾರಿ ಇಲ್ಲದೆ ನಿರ್ವಹಣೆ ಮಾಡುವ ಪದ್ಧತಿ ತೀರಾ ಕೆಟ್ಟದ್ದು. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಮುತುವರ್ಜಿ ವಹಿಸಿಕೊಳ್ಳಬೇಕು ಎಂಬು ವುದು ಸಾರ್ವಜನಿಕರ ಅಭಿಪ್ರಾಯ.

ಎಲ್ಲಕ್ಕೂ ಮುಖ್ಯವಾಗಿ ಸ್ಥಳೀಯ ಪಟ್ಟಣ ಪಂಚಾಯ್ತಿ ಕಾರ್ಯಾಲಯದಲ್ಲಿ ಎಲ್ಲವು ಸರಿ ಇಲ್ಲ ಎಂಬುವುದು ಸ್ಪಷ್ಟ. ಆಡಳಿತ ಪಕ್ಷ ಹಾಗೂ ಮುಖ್ಯಾಧಿಕಾರಿ ಗಳ ನಡುವಿನ ಹೊಂದಾಣಿಕೆ ಕೊರತೆ ಅಭಿವೃದ್ದಿ ಕುಂಟಿತವಾಗಲು ಪ್ರಮುಖ ಕಾರಣ.

ಎಣ್ಣೆ ಶೀಗೆಕಾಯಿ ಸಂಬಂಧ ಹೊಂದಿರುವ ಆಡಳಿತ ಪಕ್ಷದ ಸದಸ್ಯರು ಹಾಗೂ ಮುಖ್ಯಾಧಿಕಾರಿ ನಡುವಿನ ಶೀತಲ ಸಮರ ಜನರ ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ದೊರಕದಿರುವು ದಕ್ಕೆ ಪ್ರಮುಖ ಕಾರಣ ಎಂದು ಹೆಸರು ಹೇಳಲಿಚ್ಚಿಸಿದ ಸದಸ್ಯರ ಅನಿಸಿಕೆ.

ಆರೋಪ ಪ್ರತ್ಯಾರೋಪಗಳಲ್ಲಿ ಸಮಯ ವ್ಯರ್ಥ ಮಾಡದೇ ಜನರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡು ವತ್ತ ಅಭಿವೃದ್ದಿ ಇಚ್ಚಾಶಕ್ತಿ ಹೊಂದಿರುವ ಜನಪ್ರತಿನಿಧಿಗಳು ಗಮನಹರಿಸಬೇಕಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.