ADVERTISEMENT

ಆರೋಗ್ಯ ತಪಾಸಣೆಗೆ ಬಂದ 3,200 ಮಂದಿ

ಆಯ್ಕೆಯಾದವರು ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಗೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2017, 11:03 IST
Last Updated 11 ಜುಲೈ 2017, 11:03 IST

ಕೊಣನೂರು: ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾಲಯ ಕೇಂದ್ರ, ಮೈಸೂರಿನ ಬಿಜಿಎಸ್ ಅಪೊಲೊ ಆಸ್ಪತ್ರೆ, ವಾಸವಿ ಕ್ಲಬ್, ಆರ್ಯವೈಶ್ಯ ಮಂಡಳಿಯಿಂದ ಪಟ್ಟಣದ ಬೆಳಗೋಡು ವಿಶಾಲಾಕ್ಷಮ್ಮ ಮುತ್ಯಾಲಶೆಟ್ಟಿ ಕಲ್ಯಾಣಮಂಟಪದಲ್ಲಿ ಈಚೆಗೆ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ತಪಾಸಣೆ ಮಾಡಲಾಯಿತು. ಸುತ್ತಲಿನ ಗ್ರಾಮಗಳ ಮತ್ತು ಪಟ್ಟಣದ 3,200 ಮಂದಿ ಪಾಲ್ಗೊಂಡರು.

ತಪಾಸಣೆಯ ನಂತರ ಅಗತ್ಯವಿದ್ದವರಿಗೆ ಸ್ಕ್ಯಾನಿಂಗ್, ಇ.ಸಿ.ಜಿ. ಎಕೋ-ಸ್ಕ್ಯಾನಿಂಗ್, ರಕ್ತ, ಮೂತ್ರ ಪರೀಕ್ಷೆಗಳನ್ನು ಮಾಡಲಾಯಿತು. ಔಷಧ, ಮಾತ್ರೆಗಳನ್ನು ಉಚಿತವಾಗಿ ನೀಡಲಾಯಿತು. ಆರೋಗ್ಯ ಶಿಬಿರವನ್ನು ಗ್ರಾ.ಪಂ. ಅಧ್ಯಕ್ಷ ಕೆರೆಕೋಡಿ ರಮೇಶ್ ಉಧ್ಘಾಟಿಸಿದರು. 

ADVERTISEMENT

ವಾಸವಿ ಕ್ಲಬ್ ಕೆಸಿಜಿಎಫ್ ಮಂಜುನಾಥ ಮಾತನಾಡಿದರು. ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಅಮರನಾಥ್, ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ವೈದ್ಯರು ಮಾತನಾಡಿದರು. ವಾಸವಿ ಕ್ಲಬ್ ಅಧ್ಯಕ್ಷ ಸುಬ್ರಹ್ಮಣ್ಯ, ಆರ್ಯವೈಶ್ಯ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಬಿ.ಎಸ್ ಸುಬ್ರಹ್ಮಣ್ಯ, ವಾಸವಿ ಕ್ಲಬ್ ಮಾಜಿ ಅಧ್ಯಕ್ಷ ಕೃಷ್ಣಕಮಾರ್್ ಇದ್ದರು.

ವಿವಿಧ ಕಾಯಿಲೆಗಳಿಗೆ ಸಂಬಂಧಿಸಿ 94 ಮಂದಿಯನ್ನು ಚಿಕಿತ್ಸೆಗಾಗಿ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. 80 ಮಂದಿಗೆ ಎಕೋ ಸ್ಕ್ಯಾನಿಂಗ್, 450 ಮಂದಿಗೆ ಇ.ಸಿ.ಜಿ ಮತ್ತು 350 ಜನರಿಗೆ ಉಚಿತವಾಗಿ ಸ್ಕ್ಯಾನಿಂಗ್ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.