ADVERTISEMENT

ಇಂದ್ರಧ್ವಜ ಆರಾಧನಾ ಮಹೋತ್ಸವಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2017, 6:40 IST
Last Updated 6 ನವೆಂಬರ್ 2017, 6:40 IST

ಶ್ರವಣಬೆಳಗೊಳ: ಶ್ರವಣಬೆಳಗೊಳದಲ್ಲಿ ಇಂದ್ರಧ್ವಜ ಮಹಾಮಂಡಲ ಆರಾಧನಾ ಮಹೋತ್ಸವದ ಅಂಗವಾಗಿ ಭಾನುವಾರ ವಿಶ್ವಶಾಂತಿಗಾಗಿ ಹೋಮ, ಹವನ ನಡೆಸಲಾಯಿತು. ಚಾವುಂಡರಾಯ ಮಂಟಪದಲ್ಲಿ ಕಾರ್ತಿಕ ಮಾಸದ ಅಷ್ಟಾಹ್ನಿಕ ಮಹಾಪರ್ವದ ಸಂದರ್ಭದಲ್ಲಿ ಅ.21ರಿಂದ ಆರಂಭವಾಗಿ ಭಾನುವಾರದವರೆಗೆ 15 ದಿನ ನಡೆಯಿತು.

458 ಜಿನಾಲಯಗಳ ಆರಾಧನೆ ನೆರವೇರಿಸಲಾಯಿತು. ಬೆಳಿಗ್ಗೆಯಿಂದಲೇ ಪೂಜಾ ವಿಧಿ, ವಿಧಾನಗಳು ಚಾರುಕೀರ್ತಿಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ನೆರವೇರಿದವು. ನಂತರ ಪ್ರಮುಖ ಬೀದಿಯಲ್ಲಿ ಜಾನಪದ ಕಲಾತಂಡದೊಂದಿಗೆ ಮೆರವಣಿಗೆ ನಡೆಯಿತು.

ವರ್ಧಮಾನಸಾಗರ ಮಹಾರಾಜರು ಸೇರಿ ಅನೇಕ ಮುನಿಗಳು, ಆರ್ಯಿಕಾ ಮಾತಾಜಿಗಳು ಸಾನ್ನಿಧ್ಯ ವಹಿಸಿದ್ದರು. ಕಳೆದ 15 ದಿನಗಳಿಂದ ನಡೆಯುತ್ತಿದ್ದ ಇಂದ್ರಧ್ವಜ ಮಹಾಮಂಡಲ ಆರಾಧನಾ ಮಹೋತ್ಸವಕ್ಕೆ ಭಾನುವಾರ ತೆರೆ ಬಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.