ADVERTISEMENT

ಗಂಗರಕಾಲದ ತಾಮ್ರ ಶಾಸನಗಳು ಪತ್ತೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2017, 7:20 IST
Last Updated 2 ಸೆಪ್ಟೆಂಬರ್ 2017, 7:20 IST
ಚನ್ನರಾಯಪಟ್ಟಣ ತಾಲ್ಲೂಕಿನ ಹಳೇಬೆಳಗೊಳದಲ್ಲಿ ಜೈನಬಸದಿಯ ಜೀರ್ಣೋದ್ಧಾರ ಕಾಮಗಾರಿ ಕೈಗೊಳ್ಳುವಾಗ ಗಂಗರ ಕಾಲದ ತಾಮ್ರದ ಶಾಸನಗಳು ಶುಕ್ರವಾರ ಪತ್ತೆಯಾಗಿವೆ
ಚನ್ನರಾಯಪಟ್ಟಣ ತಾಲ್ಲೂಕಿನ ಹಳೇಬೆಳಗೊಳದಲ್ಲಿ ಜೈನಬಸದಿಯ ಜೀರ್ಣೋದ್ಧಾರ ಕಾಮಗಾರಿ ಕೈಗೊಳ್ಳುವಾಗ ಗಂಗರ ಕಾಲದ ತಾಮ್ರದ ಶಾಸನಗಳು ಶುಕ್ರವಾರ ಪತ್ತೆಯಾಗಿವೆ   

ಚನ್ನರಾಯಪಟ್ಟಣ: ತಾಲ್ಲೂಕಿನ ಹಳೇಬೆಳಗೊಳದಲ್ಲಿ ಜೈನಬಸದಿಯ ಜೀರ್ಣೋದ್ಧಾರ ಕಾಮಗಾರಿ ಕೈಗೊಳ್ಳುವಾಗ ಗಂಗರ ಕಾಲದ ತಾಮ್ರದ ಶಾಸನಗಳು ಶುಕ್ರವಾರ ಪತ್ತೆಯಾಗಿವೆ.

‘ತಾಮ್ರ ಶಾಸನಗಳು ಪ್ರಾಚೀನ ಕನ್ನಡ ಲಿಪಿ ಹೊಂದಿವೆ. 15 ಕಟ್ಟುಗಳಿವೆ. ಅದರಲ್ಲಿ 105 ತಾಮ್ರದ ಹಾಳೆಗಳಿವೆ’ ಎಂದು ಸ್ಥಳಕ್ಕೆ ಭೇಟಿ ನೀಡಿದ ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ ಎನ್‌.ಎಲ್‌.ಗೌಡ ತಿಳಿಸಿದರು.

‘ಇವು 8ರಿಂದ 10ನೇ ಶತಮಾನಕ್ಕೆ ಸೇರಿವೆ. ಇದರ ಮೇಲೆ ಆನೆಯ ಗುರುತು ಇರುವುದರಿಂದ ಗಂಗ ಅರಸರ ಕಾಲದ್ದು ಎನ್ನಬಹುದು. ಉತ್ಸವ, ಜಾತ್ರೆ, ಹಬ್ಬದ ಸಂದರ್ಭದಲ್ಲಿ ಬಸದಿಗಳಿಗೆ ಇವುಗಳನ್ನು ದಾನ ನೀಡಲಾಗಿದೆ’ ಎಂದರು.

ADVERTISEMENT

‘ರಾಸಾಯನಿಕ ಕ್ರಿಯೆಯಿಂದಾಗಿ ಶಾಸನಗಳು ಹಸಿರು ಬಣ್ಣಕ್ಕೆ ತಿರುಗಿವೆ. ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಲಾಗುವುದು. ಲಿಪಿಯ ಬಗ್ಗೆ ಅಧ್ಯಯನ ಮಾಡಿ ಎರಡು ತಿಂಗಳಲ್ಲಿ ನಿಖರ ಮಾಹಿತಿ ಪಡೆಯಲಾಗುವುದು’ ಎಂದು ಹೇಳಿದರು. ತಹಶೀಲ್ದಾರ್‌ ಸೋಮಶೇಖರ್‌ ಸಹ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.