ADVERTISEMENT

ಮರ ಕಡಿಯಲು ಅನುಮತಿ ನೀಡಿದರೂ ತೊಂದರೆ: ಆರೋಪ

​ಪ್ರಜಾವಾಣಿ ವಾರ್ತೆ
Published 22 ಜೂನ್ 2017, 7:44 IST
Last Updated 22 ಜೂನ್ 2017, 7:44 IST

ಹಾಸನ: ‘ಅರಕಲಗೂಡು ತಾಲ್ಲೂಕಿನ ದೇವರಹಳ್ಳಿಯ ಸರ್ವೆ ನಂ. 6ರ 4 ಎಕರೆಯನ್ನು ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯ ಅಣ್ಣೇಗೌಡರ ಹೆಸರಿಗೂ, ಉಳಿದ 20 ಗುಂಟೆಯನ್ನು ಸರ್ಕಾರಿ ಜಾಗವೆಂದು ಆದೇಶ ನೀಡಿದ್ದರೂ, ಪ್ರತಿವಾದಿಗಳು ವಿನಾಕರಣ ತೊಂದರೆ ಕೊಡುತ್ತಿದ್ದಾರೆ’ ಎಂದು ಗ್ರಾಮಸ್ಥ ಹಿರೇಗೌಡ ಆರೋಪಿಸಿದರು.

‘ತಾಲ್ಲೂಕಿನ ಜೆಎಂಎಫ್‌ಸಿ ನ್ಯಾಯಾಲಯ 2015 ಏಪ್ರಿಲ್‌ 27ರಲ್ಲಿ ದೇವರಹಳ್ಳಿಯ ಸರ್ವೆ ನಂ. 6ರ 4 ಎಕರೆ ನಮಗೆ ನೀಡಿದೆ. ಅಲ್ಲಿನ ವಿವಿಧ ಜಾತಿ ಮರಗಳನ್ನು ಕಡಿಯಲು ಸಕಲೇಶಪುರ ಉಪ ವಿಭಾಗಾಧಿಕಾರಿ ಮತ್ತು ತಾಲ್ಲೂಕು ಉಪ ವಲಯದ ಅರಣ್ಯಾಧಿಕಾರಿ ಅವರಿಂದ ಸ್ಪಷ್ಟ ದಾಖಲೆ ಪಡೆದಿದ್ದರೂ  ಅಣ್ಣೇಗೌಡ ಕುಟುಂಬದವರು
ತೊಂದರೆ ಕೊಡುತ್ತಿದ್ದಾರೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿದರು.

‘2016 ಮಾರ್ಚ್‌ 10ರಂದು ಕಂದಾಯ ನಿರೀಕ್ಷಕರು ಸರ್ವೆ ನಂ. 6ರಲ್ಲಿ  4.27 ಎಕರೆ ಜಾಗವನ್ನು ಅಳತೆ ಮಾಡಿ ಒತ್ತುವರಿ ಮಾಡಿದ್ದ 27 ಗುಂಟೆಯನ್ನು  ಬ್ಲಾಕ್‌ ನಂಬರ್‌ 11ರಲ್ಲಿ ಸರ್ಕಾರಿ ಜಾಗವೆಂದು ಗುರುತಿಸಿದ್ದಾರೆ.

ADVERTISEMENT

ಈ ಹಿಂದೆ ಕಂದಾಯ ಇಲಾಖೆ ಅಧಿಕಾರಿಯಿಂದ ಜಮೀನಿನ ಗಡಿ ಗುರುತಿಸಿ  ಹಾಕಿದ್ದ ಕಲ್ಲುಗಳನ್ನು ಕಿತ್ತು ಹಾಕಿದ್ದಾರೆ.  ಬೆಲೆಬಾಳುವ ನೀಲಗಿರಿ ಮರಗಳನ್ನು ಲಪಟಾಯಿಸುವ ಉರುದ್ದೇಶದಿಂದ ಜಗಳ ತೆಗೆದು ಠಾಣೆಯಲ್ಲಿ  ಪ್ರಕರಣ ದಾಖಲಿಸುತ್ತಾರೆ’ ಎಂದು ದೂರಿದರು. ಪತ್ರಿಕಾಗೋಷ್ಠಿಯಲ್ಲಿ ಅಣ್ಣೇಗೌಡ, ಜವರಮ್ಮ, ಹಿರೇಗೌಡ, ಮಂಜುನಾಥ್‌ ರಾಮು, ಚಂದ್ರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.