ADVERTISEMENT

ಮಾನಸಿಕ ಒತ್ತಡ ಶಮನಕ್ಕೆ ಕ್ರೀಡೆ ಸಹಕಾರಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 6:04 IST
Last Updated 16 ಜನವರಿ 2017, 6:04 IST
ಮಾನಸಿಕ ಒತ್ತಡ ಶಮನಕ್ಕೆ ಕ್ರೀಡೆ ಸಹಕಾರಿ
ಮಾನಸಿಕ ಒತ್ತಡ ಶಮನಕ್ಕೆ ಕ್ರೀಡೆ ಸಹಕಾರಿ   

ಅರಸೀಕೆರೆ: ಕ್ರೀಡೆಯಿಂದ ಮಾನಸಿಕ ಒತ್ತಡ ದೂರವಾಗಿ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದು ಬಿಜೆಪಿ ಮುಖಂಡ ಆಕಾಶ್‌ ಹಿರಿಯಪ್ಪ ಹೇಳಿದರು.
ತಾಲ್ಲೂಕಿನ ಮಾಡಾಳು ಗ್ರಾಮದ ಸ್ವರ್ಣಗೌರಿ ಪ್ರೌಢಶಾಲಾ ಆವರಣದಲ್ಲಿ ಸ್ವರ್ಣಗೌರಿ ಗೆಳೆಯರ ಬಳಗ ಮತ್ತು ಗ್ರಾಮಸ್ಥರ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ 2ನೇ ವರ್ಷದ ಕೊಕ್ಕೊ ಟೂರ್ನಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಧನಾತ್ಮಕ ಚಿಂತನೆ ಗಳಿಂದ ಜೀವನೋತ್ಸಾಹ ಬೆಳೆಸಿಕೊಳ್ಳ ಬೇಕು. ಸ್ವಪ್ರಯತ್ನದಿಂದ ಪ್ರತಿಭೆ ಅರಳಿಸುವ ಕೆಲಸ ಆಗಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿ.ಪಂ ಸದಸ್ಯ ಮಾಡಾಳು ಎಂ.ಎಸ್‌.ವಿ.ಸ್ವಾಮಿ, ಕ್ರೀಡೆ ಗಡಿಯ ಹಂಗು ತೊರೆದು ಬಾಂಧವ್ಯ ಬೆಸೆಯುವ ಕೊಂಡಿಯಾಗಿದೆ. ನೈಜ ಕ್ರೀಡಾ ಮನೋ ಭಾವ ದೇಶಪ್ರೇಮದ ಜತೆಗೆ ಇತರ ರೊಂದಿಗೆ ಭಾತೃತ್ವ ಭಾವನೆಯಿಂದಿರಲು ಪ್ರೇರಣೆ ನೀಡುತ್ತದೆ ಎಂದರು.

ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ಅಧ್ಯಕ್ಷ ನಟರಾಜ್‌ ಮಾತನಾಡಿ, ಮಕ್ಕಳು ಓದಿನಷ್ಟೇ ಕ್ರೀಡೆಗೂ ಪ್ರಾಮು ಖ್ಯತೆ ನೀಡಬೇಕು. ಮನಸ್ಸು ಮತ್ತು ದೇಹ ಆರೋಗ್ಯವಾಗಿರಬೇಕಾದರೆ ಕ್ರೀಡೆ ಮುಖ್ಯಎಂದು ಹೇಳಿದರು.

ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಎಂ.ಶಿವದೇವು, ಡಿ.ಎಂ. ಕುರ್ಕೆ ಗ್ರಾಮ ಪಂಚಾಯಿತಿ ಸದಸ್ಯ ನಂಜುಂಡಶೆಟ್ಟಿ, ತಾ.ಪಂ ಮಾಜಿ ಅಧ್ಯಕ್ಷ ಹನುಮೇಗೌಡ, ಬಿಜೆಪಿ ಮುಖಂಡ ಜಗದೀಶ್‌ ಮಾತನಾಡಿದರು. ಮಾಡಾಳು ಗ್ರಾ.ಪಂ ಸದಸ್ಯ ಎಂ.ಡಿ.ರಮೇಶ್‌, ಬಿಜೆಪಿ ಮುಖಂಡರಾದ ಜಯದೇವ್‌, ಪುರುಷೋತ್ತಮ್‌ ಗೆಳೆಯರ ಬಳಗದ ಮುಖಂಡರಾದ ಗೋವಿಂದ್‌, ನಾಗರಾಜ್‌, ಪವನ್‌, ಕೊಟ್ರೇಶ್‌, ರವಿ, ವಿಜಿ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.