ADVERTISEMENT

ರೈತರಿಗೆ ಸಿಂಪರಣಾ ಉಪಕರಣ ಮಾಹಿತಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2017, 7:07 IST
Last Updated 4 ಸೆಪ್ಟೆಂಬರ್ 2017, 7:07 IST

ಹಾಸನ: ತಾಲ್ಲೂಕಿನ ಕಾರೇಕೆರೆ ಕೃಷಿ ಮಹಾವಿದ್ಯಾಲಯ ವತಿಯಿಂದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಇತ್ತೀಚೆಗೆ ಸಿಂಪರಣಾ ಉಪಕರಣಗಳ ಬಗ್ಗೆ ಮಾಹಿತಿ ಕಾರ್ಯಾಗಾರ ಆಯೋಜಿಸಲಾಗಿತ್ತು.

ವಿದ್ಯಾರ್ಥಿ ಸುಶ್ಮಿತಾ ಮಾತನಾಡಿ, ವಿವಿಧ ಬೆಳೆಗಳಾದ ರಾಗಿ, ಜೋಳ, ಶುಂಠಿ ಹಾಗೂ ವಿವಿಧ ಜಾತಿಯ ಹಣ್ಣಿನ ಮರಗಳಿಗೆ ಮಾತ್ರವಲ್ಲದೆ ತೆಂಗಿನ ಮರಗಳಿಗೆ ಹಲವು ಬಗೆಯ ಸಿಂಪರಣಾ ಉಪಕರಣಗಳು ಮತ್ತು ಧೂಳೀಕರಣಗಳನ್ನು ಬಳಸಬಹುದು. ಉಪಕರಣಗ ಬಳಸಿ ಕಡಿಮೆ ಸಮಯ ಮತ್ತು ವೆಚ್ಚದಲ್ಲಿ ಹೆಚ್ಚಿನ ಬೆಳೆಗಳಿಗೆ ಸಿಂಪಡಿಸಬಹುದು. ಕೂಲಿಗಳ ಖರ್ಚು ಕಡಿಮೆ ಮಾಡಬಹುದು ಎಂದು ಸಲಹೆ ನೀಡಿದರು.

ಕೈ ಚಾಲಿತ ಸಿಂಪರಕ ಬಳಸಿ ಚಿಕ್ಕ ಗಿಡ, ಕೈ ತೋಟಗಳಲ್ಲಿ ರೋಗ ಮತ್ತು ಕೀಟಗಳನ್ನು ಸುಲಭವಾಗಿ ನಿರ್ವಹಣೆ ಮಾಡಲು ಸಾಧ್ಯ. ಹಣ್ಣಿನ ಬೆಳೆಗಳಿಗೆ, ಹೆಚ್ಚು ಅಂತರದ ಬೆಳೆಗಳಿಗೆ ಟ್ರ್ಯಾಕ್ಟರ್‌ ಸಿಂಪರಕ ಬಳಸಬಹುದು. ರೈತರಿಗೆ ಸಹಾಯಕವಾಗಿ ಸರ್ಕಾರದ ವತಿಯಿಂದ ಕೃಷಿ ಇಲಾಖೆ ಹಾಗೂ ರೈತ ಸಂಪರ್ಕ ಕೇಂದ್ರಗಳ ಮೂಲಕ ವಿವಿಧ ಉಪಕರಣಗಳನ್ನು ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.