ADVERTISEMENT

ಸರ್ಕಾರದ ಅವನತಿಗೆ ಕ್ಷಣಗಣನೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 7:13 IST
Last Updated 20 ಏಪ್ರಿಲ್ 2017, 7:13 IST

ಹಾಸನ: ಸ್ವಜನ ಪಕ್ಷಪಾತ, ಜಾತಿ ರಾಜಕಾರಣದಿಂದಲೇ ರಾಜ್ಯವನ್ನು ಅಧೋಗತಿಯತ್ತ ಕೊಂಡೊಯ್ಯುತ್ತಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರದ ಅವನತಿಗೆ ಕ್ಷಣಗಣನೆ ಪ್ರಾರಂಭವಾಗಿದೆ ಎಂದು ಸಂಸದ ಪಿ.ಸಿ.ಮೋಹನ್‌ ಹೇಳಿದರು.ನಗರದ ಗುರುರಾಜ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಗರಿಷ್ಠ ಮೌಲ್ಯದ ನೋಟುಗಳ ಅಮಾನ್ಯಕೀರಣವನ್ನು ಭ್ರಷ್ಟಾಚಾರ ಎಂದು ಆರೋಪ ಮಾಡಿದ ಪ್ರತಿಪಕ್ಷಗಳಿಗೆ ಪಂಚರಾಜ್ಯ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ದೇಶದ ಅಭಿವೃದ್ಧಿಗೆ ಮೋದಿ ಅವರಂತಹ ನಾಯಕ ಬೇಕಿತ್ತು. 2022ರ ವೇಳೆಗೆ ಭಾರತ ವಿಶ್ವ ಗುರು ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

‘ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌’ ಬಿಜೆಪಿಯ ಮೂಲ ಮಂತ್ರವಾಗಿದೆ. ಆದರೆ ಕಾಂಗ್ರೆಸ್‌ಗೆ ತಮ್ಮ ಕುಟುಂಬ ಬಿಟ್ಟು ಬೇರೆ ಯಾರು ಅಭಿವೃದ್ಧಿ ಸಾಧಿಸುವುದು ಬೇಡವಾಗಿದೆ. ಆಧಾರ ರಹಿತ ಆರೋಪ ಮಾಡುತ್ತಾ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ADVERTISEMENT

ಜಿಲ್ಲಾ ಘಟಕದ ಅಧ್ಯಕ್ಷ ಯೋಗಾ ರಮೇಶ್‌, ಮೈಸೂರು ವಿಭಾಗದ ಪ್ರಭಾರಿ ನಾಗೇಂದ್ರ, ಸಹ  ಪ್ರಭಾರಿ ಫಣೇಶ್‌, ರಾಜ್ಯ ಪರಿಷತ್‌ ಸದಸ್ಯ ಗಣೇಶ್‌, ಸತ್ಯಮಂಗಲ ಗ್ರಾಮ ಪಂಚಾಯಿತಿ ಸದಸ್ಯ ಪ್ರದೀಪ್‌ , ಕಿಟ್ಟಿ, ನಗರಸಭೆ ಸದಸ್ಯ ಎಚ್‌.ಎಂ.ಸುರೇಶ್‌ ಕುಮಾರ್, ನಗರಾಧ್ಯಕ್ಷ ಶೋಭನ್‌ ಬಾಬು, ರೈತ ಮೋರ್ಚಾದ ರಾಜ್ಯ ಕಾರ್ಯದರ್ಶಿ ರೇಣುಕುಮಾರ್‌, ಮುಖಂಡ ಬಿ.ವಿ.ಕರೀಗೌಡ, ರಾಜಣ್ಣ, ಪರ್ವತಯ್ಯ, ಸುಶೀಲಾ ಅಣ್ಣಪ್ಪ, ಶ್ವೇತಾ ವೇಣುಗೋಪಾಲ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.