ADVERTISEMENT

ಹುಚ್ಚು ನಾಯಿ ದಾಳಿ: 24 ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2017, 7:19 IST
Last Updated 1 ಸೆಪ್ಟೆಂಬರ್ 2017, 7:19 IST

ಬೇಲೂರು: ಪಟ್ಟಣದಲ್ಲಿ ಹುಚ್ಚು ನಾಯಿಯೊಂದು ಮಕ್ಕಳು ಹಾಗೂ ಜನರನ್ನು ಮನಬಂದಂತೆ ಕಡಿದಿದ್ದು, 24 ಮಂದಿ ಗಾಯಗೊಂಡಿದ್ದಾರೆ. ಬುಧವಾರ ಸಂಜೆಯಿಂದ ನಾಯಿಯ ಆರ್ಭಟ ಆರಂಭವಾಗಿ ಗುರುವಾರ ಬೆಳಿಗ್ಗೆಯೂ ಮುಂದುವರಿದಿತ್ತು. ಗುರುವಾರ ಬೆಳಿಗ್ಗೆ 5ಕ್ಕೂ ಹೆಚ್ಚು ಜನರಿಗೆ ಕಡಿಯಿತು.

ಬುಧವಾರ ಸಂಜೆ 17ಕ್ಕೂ ಹೆಚ್ಚು ಜನರನ್ನು ಕಡಿದಿದ್ದ ಬಿಳಿ ಬಣ್ಣದ ಹುಚ್ಚು ನಾಯಿ, ಗುರುವಾರ ಬೆಳಿಗ್ಗೆ ವಾಯುವಿಹಾರಕ್ಕೆ ಬಂದಿದ್ದ ಜನರ ಮೇಲೆ ದಾಳಿ ನಡೆಸಿತು.
5ಕ್ಕೂ ಹೆಚ್ಚು ಮಂದಿಯನ್ನು ಗಾಯಗೊಳಿಸಿತು. ಪುರಸಭೆ ಸಿಬ್ಬಂದಿ ನಾಯಿ ಹಿಡಿಯಲು ಯತ್ನಿಸಿದಾಗ ಅವರ ಮೇಲೂ ಎರಗಿತು. ಇದರಿಂದ ಸಿಬ್ಬಂದಿಗಳಾದ ನಾಗರಾಜ, ಮಹೇಂದ್ರ ಗಾಯಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT