ADVERTISEMENT

5ರಂದು ‘ಪ್ರಜಾವಾಣಿ ಕ್ವಿಜ್’ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 2 ಜನವರಿ 2017, 10:47 IST
Last Updated 2 ಜನವರಿ 2017, 10:47 IST

ಹಾಸನ: ‘ಪ್ರಜಾವಾಣಿ’ ಕ್ವಿಜ್‌ ಚಾಂಪಿಯನ್‌ಷಿಪ್‌ಗಾಗಿ ರಾಜ್ಯದ 10 ನಗರಗಳಲ್ಲಿ 2017ರ ಜನವರಿ 4ರಿಂದ 21ರವರೆಗೆ ಸ್ಪರ್ಧೆ ನಡೆಯ ಲಿದೆ. ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಹಾಸನದ ಸಾಲಗಾಮೆ ರಸ್ತೆಯ ಹಾಸನಾಂಬ ಕಲಾಕ್ಷೇತ್ರದಲ್ಲಿ 2017ರ ಜನವರಿ 5ರಂದು ಬೆಳಿಗ್ಗೆ 8.30ಕ್ಕೆ ಸ್ಪರ್ಧೆ ನಡೆಯಲಿದೆ.

10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ನಡೆಯುವ ಈ ಸ್ಪರ್ಧೆಯಲ್ಲಿ ಆಸಕ್ತ ವಿದ್ಯಾರ್ಥಿಗಳು ಭಾಗವಹಿಸಲು ಮುಕ್ತ ಅವಕಾಶವಿದೆ. ಒಂದು ಶಾಲೆಯಿಂದ ತಲಾ ಇಬ್ಬರಂತೆ ಗರಿಷ್ಠ ಮೂರು ತಂಡಗಳು ಪಾಲ್ಗೊಳ್ಳಬಹುದು. ಹಾಸನದಲ್ಲಿ ನಡೆಯುವುದು ವಿಭಾಗಮಟ್ಟದ ಸ್ಪರ್ಧೆ. ಇಲ್ಲಿ ವಿಜೇತವಾಗುವ ತಂಡ ಬೆಂಗಳೂರಿನ ಅಂತಿಮ ಸುತ್ತಿಗೆ ಆಯ್ಕೆಯಾಗುತ್ತದೆ.

ಅಂತಿಮ ಸುತ್ತು ಜನವರಿ 21ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಜಿಲ್ಲೆಯ ವಿದ್ಯಾರ್ಥಿಗಳು 91644 77733  (ಯತೀಶ್) ಅಥವಾ 08712–268007 (ಮೈಸೂರು ಕಚೇರಿ) ಸಂಪರ್ಕಿಸಬಹುದು. ಇಮೇಲ್‌: circ.mysore@ deccanherald.co.in.  ಸ್ಥಳದಲ್ಲೂ ಹೆಸರು ನೋಂದಾಯಿಸಿಕೊಳ್ಳಬಹುದು

ಅಂತಿಮ ಸುತ್ತಿನಲ್ಲಿ ವಿಜೇತ ತಂಡಗಳಿಗೆ ನೀಡುವ ಬಹುಮಾನ:

* 1ನೇ ಬಹುಮಾನ ₹ 50 ಸಾವಿರ
* 2ನೇ ಬಹುಮಾನ ₹ 30 ಸಾವಿರ
* 3ನೇ ಬಹುಮಾನ ₹ 10 ಸಾವಿರ
* 4ನೇ ಬಹುಮಾನ ₹ 6 ಸಾವಿರ
* 5ನೇ ಬಹುಮಾನ ₹ 4 ಸಾವಿರ
* ವಿಭಾಗೀಯಮಟ್ಟದಲ್ಲಿ ಆಯ್ಕೆಯಾದವರಿಗೂ ನಗದು ಬಹುಮಾನ ನೀಡಲಾಗುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT