ADVERTISEMENT

‘ಅನುಭವ ಬಳಸಿ, ಅಭಿವೃದ್ಧಿ ಮಾಡಿ’

ರಾಣೆಬೆನ್ನೂರು, ಬ್ಯಾಡಗಿಯ ವಿವಿಧ ಕಾರ್ಯಕ್ರಗಳ ಪಾಲ್ಗೊಂಡ ಸಿ.ಎಂ. ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2017, 6:34 IST
Last Updated 20 ಫೆಬ್ರುವರಿ 2017, 6:34 IST
‘ಅನುಭವ ಬಳಸಿ, ಅಭಿವೃದ್ಧಿ ಮಾಡಿ’
‘ಅನುಭವ ಬಳಸಿ, ಅಭಿವೃದ್ಧಿ ಮಾಡಿ’   

ಹಾವೇರಿ: ‘ನಿಮ್ಮ ಅನುಭವ ಬಳಸಿಕೊಂಡು ಮಿಲ್‌ ಅಭಿವೃದ್ಧಿ ಮಾಡಿ. ಧ್ಯೇಯವನ್ನು ಈಡೇರಿಸಿ. ಸರ್ಕಾರ ನೆರವು ನೀಡಲು ಸದಾ ಸಿದ್ಧವಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಭಾನುವಾರ ‘ಉಣ್ಣೆ ನೂಲು ಮತ್ತು ಬ್ಲ್ಯಾಂಕೆಟ್ ತಯಾರಿಕ ಘಟಕ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರದ ಉದ್ಘಾಟನೆ ಹಾಗೂ ಕುರಬರ ಕುರಿ ಉಣ್ಣೆಯ ಔದ್ಯೋಗಿಕ ಬೆಳವಣಿಗೆಯ ಸಹಕಾರಿ ಸಂಘದ ವಜ್ರಮಹೋತ್ಸವ’ ಸಮಾರಂಭ  ಅವರು ಮಾತನಾಡಿದರು.

‘ಕುರಿ ಉದ್ಯಮ ಉತ್ತೇಜನಕ್ಕೆ ಹಾಲು ಒಕ್ಕೂಟದ ಮಾದರಿಯಲ್ಲಿ ಕುರಿ ಮತ್ತು ಉಣ್ಣೆ ಉತ್ಪಾದಕರ ಮಹಾಮಂಡಳ ರಚಿಸಲಾಗಿದೆ’ ಎಂದ ಅವರು, ‘ಆಧುನಿಕ ತಂತ್ರಜ್ಞಾನವನ್ನು ಬಳಸಿ ಕುರಿ ಉದ್ಯಮ ಬೆಳಸಬೇಕು’ ಎಂದರು.

‘ಕುರಿ ಹಾಗೂ ಮೇಕೆಗಳ ವೈಜ್ಞಾನಿಕ ಸಾಕಾಣಿಕೆ, ಕುರಿಗಳಿಗೆ ವೈಜ್ಞಾನಿಕ ಬೆಲೆ ನಿಗದಿ, ಸಮರ್ಪಕ ತೂಕದ ವ್ಯವಸ್ಥೆ ಜಾರಿ ಹಾಗೂ ಕುರಿ ಮಾಂಸ ಸಂಸ್ಕರಣೆ, ಮಾರುಕಟ್ಟೆ ವ್ಯವಸ್ಥೆ, ಹೊರ ದೇಶಗಳಿಗೆ ಮಾಂಸ ರಫ್ತು, ಉಣ್ಣೆ, ಗುಣಮಟ್ಟದ ಕಂಬಳಿ, ಉಲನ್ ರಗ್ಗುಗಳ ತಯಾರಿಕೆ ಮೂಲಕ ಕುರಿಗಾರರ ಆರ್ಥಿಕ ಸ್ವಾವಲಂ ಬನೆಗೆ ನೆರವು ನೀಡಲು ಸರ್ಕಾರ ಎಲ್ಲ ಕ್ರಮ ಕೈಗೊಂಡಿದೆ’ ಎಂದರು.

‘ಆದರೆ, ಕಸಾಯಿಖಾನೆ ಮಾಡದೇ ಮಾಂಸ ರಫ್ತು ಮಾಡಲು ಸಾಧ್ಯವಿಲ್ಲ. ಈ ‘ಕಸಾಯಿಖಾನೆ’ಗೂ ವಿರೋಧ ಮಾಡುವವರು ಕೆಲವರು ಇದ್ದಾರೆ’ ಎಂದರು.
‘ಕುರುಬರು ಸೇರಿದಂತೆ ಎಲ್ಲ ಜಾತಿಯವರು ಆಡು, ಕುರಿಗಳನ್ನು ಸಾಕು ತ್ತಾರೆ. ಆದರೆ, ಕಂಬಳಿ ತಯಾರಿಸುವುದು ಕುರುಬರು ಮಾತ್ರ. ಕುರಿ ಮೇಯಿಸುವ ಸರ್ಕಾರಿ ಭೂಮಿಯನ್ನು ಕಾಯ್ದಿರಿಸುವ ಬಗ್ಗೆ ಅಧಿಕಾರಿಗಳಿಗ ಸೂಚನೆ ನೀಡಿದ್ದೇನೆ. ಕುರಿಗಾರರಿಗೆ ಗುರತಿನ ಚೀಟಿ ನೀಡಲಾಗುವುದು’ ಎಂದರು.

ಕುಡಿವ ನೀರು: ‘ಕುರಿ ಮತ್ತು ಜಾನು ವಾರುಗಳಿಗೂ ಕುಡಿಯವ ನೀರನ್ನು ಜಿಲ್ಲಾಡಳಿತ ಪೂರೈಕೆ ಮಾಡಬೇಕು. ಕುಡಿ ಯುವ ನೀರಿಗೆ ಎಷ್ಟೇ ಖರ್ಚಾದರೂ ಸರ್ಕಾರ ನೀಡಲು ಸಿದ್ಧವಿದೆ. ಈ ಬಾರಿ ಮಲೆನಾಡು, ಕರಾವಳಿಯಲ್ಲೂ ಕುಡಿ ಯುವ ನೀರಿಗೆ ತತ್ವಾರ ಬಂದಿದೆ. ನೀರು, ಮೇವು ಮತ್ತು ಉದ್ಯೋಗಕ್ಕೆ ಜಿಲ್ಲಾ ಆಡಳಿತಗಳು ಪ್ರಮುಖ ಆದ್ಯತೆ ನೀಡಬೇಕು’ ಎಂದರು. 

‘ಗರಿಷ್ಠ ಮುಖಬೆಲೆಯ ನೋಟು ರದ್ದತಿಯಿಂದ 125 ಬಡವರು ಸತ್ತಿದ್ದಾರೆಯೇ ಹೊರತು, ಯಾವುದೇ ಶ್ರೀಮಂತ, ಕಪ್ಪುಕುಳ, ಭ್ರಷ್ಟಾಚಾರಿಗಳಿಗೆ ಸಮಸ್ಯೆ ಆಗಿಲ್ಲ’ ಎಂದರು.

ನುಡಿದಂತೆ ನಡೆದ ಸರ್ಕಾರ: ಬ್ಯಾಡಗಿ ಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗ ಚಾಲನೆ ನೀಡಿ ಮಾತನಾಡಿದ ಅವರು, ‘ನಮ್ಮ ಸರ್ಕಾರವು ನುಡಿದಂತೆ ನಡೆ ಯುತ್ತಿದೆ. ನೀಡಿದ 165 ಭರವಸೆಗಳ ಪೈಕಿ 125ನ್ನು ಈಡೇರಿಸಿದೆ. ಆದರೆ,  ಹಿಂಗಾರು ಮತ್ತು ಮುಂಗಾರು ಬರ, ಕಲಬುರ್ಗಿ–ಬೀದರ್‌ನಲ್ಲಿ ಉಂಟಾದ ಪ್ರವಾಹ, ಕುಡಿಯವ ನೀರಿಗೆ ಸೇರಿದಂತೆ ಬಡಜನರ ಸಂಕಷ್ಟಕ್ಕಾಗಿ ರಾಜ್ಯ ಸರ್ಕಾರ ಕೇಳಿದಷ್ಟು ದುಡ್ಡನ್ನು ಕೇಂದ್ರ ಕೊಟ್ಟಿಲ್ಲ. ಕೇಂದ್ರ ದುಡ್ಡು ಬಿಡುಗಡೆ ಮಾಡದಿದ್ದರೂ, ‘ರಾಜ್ಯ ಸರ್ಕಾರ ದುಡ್ಡು ಖರ್ಚು ಮಾಡುತ್ತಿಲ್ಲಾ’ ಎಂದು ರಾಜ್ಯ ಬಿಜೆಪಿ ನಾಯಕರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ’ ಎಂದರು.

‘ರೈತರ ಸಾಲದ ಅರ್ಧ ಮನ್ನಾ ಮಾಡಿ. ಉಳಿದರ್ಧ ನಾವು ಮಾಡು ತ್ತೇವೆ’ ಎಂದು ಕೇಂದ್ರಕ್ಕೆ ಮನವಿ ಮಾಡಿ ದ್ದೇನೆ. ಆದರೆ, ಉತ್ತರವಿಲ್ಲ. ಅಲ್ಲದೇ, ರೈತರಿಗೆ ನೀಡುವ ಹಣವನ್ನು ಒಂದೇ ಕಂತಿನಲ್ಲಿ ನೀಡಬೇಕು. ಒಂದೇ ಬಾರಿಗೆ ರೈತರ ಖಾತೆ ಜಮಾ ಮಾಡಲು ಸಾಧ್ಯ’ ಎಂದೂ ತಿಳಿಸಿದ್ದೇನೆ’ ಎಂದ ಅವರ, ‘ಈ ಸರ್ಕಾರವು ₹24 ಸಾವಿರ ಕೋಟಿ ಹಣವನ್ನು ದಲಿತರ ಅಭಿವೃದ್ಧಿ ಗಾಗಿ ಖರ್ಚು ಮಾಡಿದೆ’ ಎಂದರು.

‘ಅಸುಂಡಿ ಕೆರೆ ತುಂಬಿಸಲಾಗು ವುದು. ಮುದೇನೂರ ಬಳಿ ತುಂಗಭದ್ರಾ ನದಿಗೆ ಬ್ಯಾರೇಜ್ ನಿರ್ಮಿಸ ಲಾಗುವುದು. ಹಾವೇರಿ ವೈದ್ಯಕೀಯ ಕಾಲೇಜು ಆರಂ ಭಕ್ಕೆ ಅಗತ್ಯ ಅನುದಾನ, ಬ್ಯಾಡಗಿ ಪಟ್ಟಣ ಅಭಿವೃದ್ಧಿಗೆ ಪುರಸಭೆಗೆ ಅನುದಾನ ನೀಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.