ADVERTISEMENT

ಆಸ್ಪತ್ರೆ ಆರಂಭಕ್ಕೆ ಒತ್ತಾಯಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 6:08 IST
Last Updated 21 ಜನವರಿ 2017, 6:08 IST
ಆಸ್ಪತ್ರೆ ಆರಂಭಕ್ಕೆ ಒತ್ತಾಯಿಸಿ ಧರಣಿ
ಆಸ್ಪತ್ರೆ ಆರಂಭಕ್ಕೆ ಒತ್ತಾಯಿಸಿ ಧರಣಿ   

ಸವಣೂರ: ‘ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಇಚ್ಛಾ ಕೊರತೆಯಿಂದಾಗಿ ಹುರಳಿಕುಪ್ಪಿ ಆರೋಗ್ಯ ಕೇಂದ್ರವು ಅನಾಥವಾಗಿದ್ದು, ಈ ಭಾಗದ ಜನರು ಆರೋಗ್ಯ ಸೇವೆಯಿಂದ ವಂಚಿತರಾಗುತ್ತಿದ್ದಾರೆ’ ಎಂದು ಆರೋಪಿಸಿ ಅಖಂಡ ಕರ್ನಾಟಕ ರೈತ ಸಂಘದ ಸದಸ್ಯರು ಗುರುವಾರ ಮಧ್ಯರಾತ್ರಿಯಿಂದ ಅನಿರ್ದಿಷ್ಟಾವಾದಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಧರಣಿ ವಿಷಯ ತಿಳಿದ ಜಿಲ್ಲಾ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಮಹೇಶ ಬಡ್ಡಿ ಅವರು ಶುಕ್ರವಾರ ಪ್ರತಿಭಟನಾಕಾರರನ್ನು ಭೇಟಿ ಮಾಡಿ ಮನವೊಲಿಕೆಗೆ ಯತ್ನಿಸಿದರು. ಆದರೆ, ಪ್ರತಿಭಟನಾಕಾರರು ಜಗ್ಗಲಿಲ್ಲ.

‘ಹುರಳಿಕುಪ್ಪಿ ಭಾಗದ ಜನರ ಹೋರಾಟದ ಫಲವಾಗಿ ಐದು ವರ್ಷಗಳ ಹಿಂದೆ ₹63ಲಕ್ಷ ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಿ
ಸಲಾಗಿದೆ. ಆದರೆ, ಸಿಬ್ಬಂದಿ ಹಾಗೂ ಸೌಲಭ್ಯಗಳಿಲ್ಲದೇ ಅದು ಅನಾಥಗೊಂಡಿದೆ. ಉದ್ಘಾಟನೆಯೂ ಕಂಡಿಲ್ಲ’ ಎಂದು ಪ್ರತಿಭಟನಾಕಾರರು ದೂರಿದರು.

‘ಈ ಆರೋಗ್ಯ ಕೇಂದ್ರ ಪುನರ್ ಆರಂಭಗೊಳ್ಳಬೇಕು. ಈ ಸಂಬಂಧ  ಜಿಲ್ಲಾ ಉಸ್ತುವಾರಿ ಸಚಿವ ಸ್ಥಳಕ್ಕೆ ಬಂದು ಲಿಖಿತ ಹೇಳಿಕೆ ನೀಡಬೇಕು’ ಎಂದು ಧರಣಿ ನಿರತರು ಪಟ್ಟುಹಿಡಿದಿದ್ದಾರೆ.

ಆರೋಗ್ಯಾಧಿಕಾರಿ ಸ್ಪಷ್ಟನೆ:  ಪ್ರತಿಭಟನಾ ನಿರತರನ್ನು ಭೇಟಿ ಮಾಡಿದ ಮಹೇಶ ಬಡ್ಡಿ, ಆಸ್ಪತ್ರೆಯ ಕಟ್ಟಡವನ್ನು ಪರಿಶೀಲಿಸಿ ದರು.

ಬಳಿಕ ಮಾತನಾಡಿದ ಅವರು,‘ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸರ್ಕಾರವೇ ರದ್ದುಗೊಳಿಸಿದೆ. ಇದರಲ್ಲಿ ಅಧಿಕಾರಿಗಳ ಯಾವುದೇ ಹಸ್ತಕ್ಷೇವಿಲ್ಲ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಪ್ರಾಥಮಿಕ ಆರೋಗ್ಯ ಕೇಂದ್ರಪುನಃ ಆರಂಭಿಸುವ ಭರವಸೆ ನೀಡಿದ್ದಾರೆ. ಶೀಘ್ರದಲ್ಲಿ ಆರೋಗ್ಯ ಸೇವೆಯನ್ನು ಕಲ್ಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು’ ಎಂದು ಭರವಸೆ ನೀಡಿದರು.

ಎಲ್ಲವೂ ಹೀಗೆ...: ‘ಆರೋಗ್ಯ ಕೇಂದ್ರಕ್ಕೆ 2 ಎಕರೆ ಜಮೀನು ಒದಗಿಸಿದ್ದೇವೆ. ಸರ್ಕಾರ ಆಸ್ಪತ್ರೆ ಕಟ್ಟಿದೆ. ನಂತರ ಆಸ್ಪತ್ರೆ ರದ್ದಾಗಿದೆ ಎಂದು ಅಧಿಕಾರಿಗಳು ಹೇಳು ತ್ತಿದ್ದಾರೆ. ಲಕ್ಷಾಂತರ ದುಡ್ಡು ಹಾಕಿ ಕಟ್ಟಿ ಸಿದ ಬಳಿಕ ಅದು ರದ್ದಾಗಿದೆ. ಮತ್ತೊಂ ದೆಡೆ, ₹22 ಲಕ್ಷ ವೆಚ್ಚದಲ್ಲಿ ಪಶು ಆಸ್ಪತ್ರೆಗೆ ಮಂಜೂರಾಗಿತ್ತು. ಶಂಕುಸ್ಥಾಪನೆಯಾಗಿ 2 ವರ್ಷ ಕಳೆದರೂ ಕಾಮಗಾರಿ ಆರಂಭಗೊಂಡಿಲ್ಲ’ ಎಂದು ನಾಗಪ್ಪ ತಿಪ್ಪಕ್ಕನವರ ವಿಷಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.