ADVERTISEMENT

‘ಈ ವರ್ಷದಲ್ಲೇ ಯೋಜನೆ ಪೂರ್ಣಗೊಳ್ಳಲಿ’

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2017, 13:15 IST
Last Updated 15 ಫೆಬ್ರುವರಿ 2017, 13:15 IST

ಹಾನಗಲ್: ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯ ಒದಗಿಸುವ ತಾಲ್ಲೂಕು ಪಂಚಾಯ್ತಿ ಅಭಿವೃದ್ಧಿ ಅನುದಾನದ ₹1 ಕೋಟಿ ಮೊತ್ತದ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯು ಮಂಗಳವಾರ ಇಲ್ಲಿನ ಸಾಮರ್ಥ್ಯಸೌಧದಲ್ಲಿ ನಡೆಯಿತು.

‘₹1 ಕೋಟಿ ಅನುದಾನದಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಒಟ್ಟು 71 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳ ಲಾಗಿದೆ. ಎಲ್ಲ ಕಾಮಗಾರಿಗಳ ಉಸ್ತು ವಾರಿ ಜಿಲ್ಲಾ ಪಂಚಾಯ್ತಿ ಇಲಾಖೆ ವಹಿ ಸಿಕೊಂಡಿದೆ’ ಎಂದು ಜಿಲ್ಲಾ ಪಂಚಾಯ್ತಿ ಎಂಜಿನಿಯರ್‌ ಎಂ.ಆರ್.ಸೊಪ್ಪಿಮಠ ಸಭೆಗೆ ತಿಳಿಸಿದರು.

‘ಆರ್ಥಿಕ ವರ್ಷದ ಒಳಗಾಗಿ ಹಾಕಿಕೊಂಡ ಯೋಜನೆಗಳು ಪೂರ್ಣಗೊಳ್ಳಬೇಕು, ಅನುದಾನವು ಸಂಪೂರ್ಣವಾಗಿ ಸದ್ಭಳಕೆಯಾಗಬೇಕು. ತರಾತುರಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಕೈತೊಳೆದುಕೊಳ್ಳುವ ವ್ಯವಸ್ಥೆ ಬೇಡ’ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶಿವಬಸಪ್ಪ ಪೂಜಾರ ಸೂಚಿಸಿದರು.

‘ನಿಗದಿತ ಸಮಯದಲ್ಲಿ ಗುಣ ಮಟ್ಟದ ಕಾಮಗಾರಿಗಳು ಪೂರ್ಣಗೊಳ್ಳ ಬೇಕು, ಅಧಿಕಾರಿಗಳ ನಿರ್ಲಕ್ಷದಿಂದ ಅನುದಾನ ವಾಪಸ್‌ ಹೋಗುವಂತಾ ಗಬಾರದು. ಈ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು’ ಎಂದು ಶಿವ ಬಸಪ್ಪ ಪೂಜಾರ ಆದೇಶಿಸಿದರು.

‘ಗುಣಮಟ್ಟ ಕಾಯ್ದುಕೊಂಡು ಆಧ್ಯತೆ ಮೇರೆಗೆ ಕಾಮಗಾರಿಗಳನ್ನು ಕೈಗೊಳ್ಳ ಲಾಗಿದೆ. ಈಗಾಗಲೇ ಎಲ್ಲ 71 ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ಕೆಲವು ಕಾಮಗಾರಿಗಳನ್ನು ಬದಲಾಯಿಸಿ ಬೇರೆ ಕೆಲಸಗಳಿಗೆ ಚಾಲನೆ ನೀಡಲಾ ಗುತ್ತಿದೆ. ಶಾಲಾ ಕೊಠಡಿಗಳು ಮತ್ತು ಅಂಗನವಾಡಿ ಕಟ್ಟಡಗಳ ದುರಸ್ತಿ, ರಸ್ತೆ ಸುಧಾರಣೆಯಂತಹ ಕಾಮಗಾರಿಗಳಿಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆ’ ಎಂದು ಎಂಜನಿಯರ್‌ ಎಂ.ಆರ್‌.ಸೊಪ್ಪಿಮಠ ವರದಿ ಒಪ್ಪಿಸಿದರು.

ಸಭೆಯಲ್ಲಿ ತಾಲ್ಲೂಕು ಪಂಚಾಯ್ತಿ ಸದಸ್ಯ ರಾಮಣ್ಣ ಶೇಷಗಿರಿ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿ ಕಾರಿ ಎನ್‌.ಎ.ಪುಟ್ಟಪ್ಪನವರ, ವ್ಯವ ಸ್ಥಾಪಕ ಜಿ.ಬಿ.ಹರಮಗಟ್ಟಿ, ಜಿಲ್ಲಾ ಪಂಚಾಯ್ತಿ ಎಂಜಿನಿಯರ್‌ಗಳಾದ ಎನ್‌. ಎಂ. ಪಾಟೀಲ, ಯಶೋಧರ.ವಿ, ಪಾಂಡುರಂಗಪ್ಪ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.