ADVERTISEMENT

‘ಉದ್ಯಮಶೀಲತೆಗೆ ಆದ್ಯತೆ ನೀಡಲಿ’

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 9:37 IST
Last Updated 20 ಏಪ್ರಿಲ್ 2017, 9:37 IST

ಶಿಗ್ಗಾವಿ: ಯುವಕರು ತಮ್ಮ ಸ್ವಂತ ಏಳ್ಗೆ ಜೊತೆಗೆ ದೇಶದ ಆರ್ಥಿಕ ಗುಣಮಟ್ಟ ಹೆಚ್ಚುಸುವುದು ಅವಶ್ಯವಿದ್ದು, ಹೀಗಾಗಿ ಪ್ರಜ್ಞಾವಂತರು, ಜ್ಞಾನವಂತರು ಹೆಚ್ಚು, ಹೆಚ್ಚಾಗಿ ಉದ್ಯಮಶೀಲತೆಗೆ ಆದ್ಯತೆ ನೀಡಬೇಕು ಎಂದುಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಡಾ.ಎಸ್‌.ಎಚ್‌. ವೀರಣ್ಣ  ಹೇಳಿದರು. ಪಟ್ಟಣದ ರಂಭಾಪುರಿ ಪದವಿ ಕಾಲೇಜಿನಲ್ಲಿ ನಡೆದ ಬಿ.ಎ, ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ವಿಶೇಷ ಉದ್ಯಮಶೀಲತೆ ಮೂರು ದಿನಗಳ ಶಿಬಿರವನ್ನು ಉದ್ಘಾ­ಟಿಸಿ ಅವರು ಮಾತನಾಡಿ, ದೇಶ ಎದು­ರಿಸುತ್ತಿರುವ ಸಾಮಾಜಿಕ ಸಮಸ್ಯೆಗಳಲ್ಲಿ ಪ್ರಮುಖವಾದ ಬಡತನ, ನಿರುದ್ಯೋಗ ನಿರ್ಮೂಲನೆಗೆ ಉದ್ಯಮಶೀಲತೆ ಕೈಗೊಳ್ಳುವುದು ಅಗತ್ಯವಾಗಿದೆ ಎಂದರು.

ಉದ್ಯಮಶೀಲರಾಗುವ ಮೂಲಕ ಜಗತ್ತಿನ ಆರ್ಥಿಕ ಪ್ರಬಲತೆ ಹೊಂದಿರುವ ಇತರ ದೇಶಗಳ ಸರಿಸಾಟಿಗಾಗಿ ನಮ್ಮ ದೇಶದ ಆರ್ಥಿಕ ಸುಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಹೋರಾಟ ನಮ್ಮದಾಗ­ಬೇಕಾಗಿದೆ. ಹೀಗಾಗಿ ಪ್ರತಿಯೊಬ್ಬರು ವ್ಯವಹಾರಿಕ ಭಾಷೆ, ವ್ಯವಹಾರಿಕ ಜ್ಞಾನ ಪಡೆಯುವುದು ಅಗತ್ಯವಾಗಿದೆ. ಓದು, ಬರಹ ಬಾರದ ಸಾಕಷ್ಟು ವ್ಯಕ್ತಿ ಇಂದು ವಿವಿಧ ರಾಜ್ಯಗಳ ಜೊತೆಗೆ ವ್ಯವಹರಿಸುವ ಮೂಲಕ ಆರ್ಥಿಕ ಸ್ಥಿತಿ ಹೆಚ್ಚಿಸಿಕೊಂಡ ಉದಾಹರಣೆಗಳಿವೆ ಎಂದರು.

ಧಾರವಾಡ ಜಿಲ್ಲಾ ಜಿಲ್ಲಾ ಕೈಗಾರಿಕಾ ಕೇಂದ್ರ ನಿರ್ದೇಶಕ ಸಿ.ಎಚ್‌.ಅಂಗಡಿ ಮಾತನಾಡಿದರು. ಸಿಡಾಕ್ ಸಂಸ್ಥೆ ತರ­ಬೇತುದಾರ ಜಿ.ಎಸ್‌.ತಿರ್ಲಾಪುರ ವಿದ್ಯಾ­ರ್ಥಿಗಳೊಂದಿಗೆ ಸಂವಾದ ನಡೆಸಿದರು. ರಂಭಾಪುರಿ ಶಿಕ್ಷಣ ಸಂಸ್ಥೆ ಆಡಳಿ­ತಾಧಿಕಾರಿ ವಿ.ಎಸ್. ಕಂಬಾಳಿಮಠ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಉದ್ಯೋಗ ಘಟಕದ ಅಧಿಕಾರಿ ಡಾ.ಬಿ.ಎಸ್. ನರೇಗಲ್  ಪ್ರಾಸ್ತಾವಿ­ಕವಾಗಿ ಮಾತನಾಡಿದರು. ಪ್ರಾಚಾರ್ಯ ಸಿ.ಎಚ್.ತಾವರ­ಗೊಂದಿ ಸ್ವಾಗತಿಸಿದರು, .ವಿದ್ಯಾ ಹಿರೇಮಠ ನಿರೂಪಿಸಿದರು, ಬೈಲಪ್ಪ­ನವರ ವಂದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.