ADVERTISEMENT

‘ಕೇಂದ್ರ ಸರ್ಕಾರದ ಯೋಜನೆಗಳ ಜಾರಿಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ’

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2017, 12:50 IST
Last Updated 6 ಮಾರ್ಚ್ 2017, 12:50 IST
ತಿಳವಳ್ಳಿ: ‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ’ ಎಂದು ಸಂಸದ ಶಿವಕುಮಾರ ಉದಾಸಿ ದೂರಿದರು.
 
ಇಲ್ಲಿಯ ಸರ್ಕಾರಿ ಆಸ್ಪತ್ರೆಯ ಬಳಿ ₹5 ಲಕ್ಷ ವೆಚ್ಚದಲ್ಲಿ ಸಂಸದರ ಪ್ರದೇಶಾ ಭಿವೃದ್ಧಿ ಯೋಜನೆಯಡಿ ನಿರ್ಮಿಸಿದ ಹೊಸ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
 
‘ಪ್ರಧಾನ ಮಂತ್ರಿ ಮುದ್ರಾ ಯೋಜನೆ ಯಡಿ ಪ್ರತಿಯೊಬ್ಬರಿಗೂ ಸಾಲ ಸೌಲಭ್ಯ ವನ್ನು ನೀಡಲಾಗುತ್ತಿದ್ದು, ಹಾವೇರಿ ಜಿಲ್ಲೆಯಲ್ಲಿ ₹240 ಕೋಟಿ ಮಂಜೂ ರಾಗಿದ್ದು, 22 ಸಾವಿರ ಜನರು ಫಲಾ ನುಭವಿಗಳಾಗಿದ್ದಾರೆ. ದೀನ ದಯಾಳ ಉಪಾಧ್ಯಾಯ ಯೋಜನೆಯಡಿ ವಿದ್ಯು ದ್ದೀಕರಣಕ್ಕಾಗಿ ಹಾವೇರಿ ಜಿಲ್ಲೆಗೆ ₹45.75 ಕೋಟಿ ಹಾಗೂ ಗದಗ ಜಿಲ್ಲೆಗೆ ₹29 ಕೋಟಿ ಮಂಜೂರಾಗಿದೆ’ ಎಂದರು.
 
‘ಕೇಂದ್ರ ಸರ್ಕಾರದ ಆಹಾರ ಭದ್ರತೆ ಕಾಯ್ದೆಯಡಿ ಒಂದು ಕೆಜಿಗೆ ₹32 ಕೊಟ್ಟು ಖರೀದಿಸಿ, ₹29 ಸಬ್ಸಿಡಿ ಭರಿಸಿ ₹3 ಯಂತೆ ರಾಜ್ಯಗಳಿಗೆ ಹಂಚಿಕೆ ಮಾಡುತ್ತದೆ. ಆದರೆ, ಅದನ್ನೆಲ್ಲ ಬಿಟ್ಟು ರಾಜ್ಯ ಸರ್ಕಾರ ಉಚಿತ ಆಹಾರ ಧಾನ್ಯ ನೀಡುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಿದೆ’ ಎಂದು ಟೀಕಿಸಿದರು.
 
ಮಾಜಿ ಸಚಿವ ಸಿ.ಎಂ.ಉದಾಸಿ ಮಾತನಾಡಿ, ‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿವೆ. ರಾಜ್ಯದಲ್ಲಿ ಭೀಕರ ಬರ ಎದುರಾಗಿದೆ. ರೈತರಿಗೆ ಪರಿಹಾರವನ್ನು ನೀಡದ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ ಎಂದು ದೂರುವುದೇ ಕೆಲಸ ಮಾಡಿಕೊಂಡಿದೆ’ ಎಂದು ಜರಿದರು.
 
ಎಪಿಎಂಸಿ ಅಧ್ಯಕ್ಷ ಶಿವಯೋಗಿ ವಡೆಯರ, ಉಪಾಧ್ಯಕ್ಷ ರಾಮಣ್ಣ ಮಾದಾಪೂರ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮೀಬಾಯಿ ಪಾಟೀಲ್, ಉಪಾಧ್ಯಕ್ಷೆ ಸರಸ್ವತಿ ಜಾಡರ, ಗಣೇಶಪ್ಪ ಕೋಟಿಹಳ್ಳಿ, ನಿಂಗಪ್ಪ ಗೊಬ್ಬೆರ, ಶಿವ ಲಿಂಗಪ್ಪ ತಲ್ಲೂರ, ಶಿವಾನಂದ ಕೋಡಿ ಹಳ್ಳಿ, ರತ್ನಮ್ಮ ಗುಡ್ಡದಮತ್ತಿಹಳ್ಳಿ,  ರೆಹಮಾನಸಾಬ್ ಸವಣೂರ, ಹನು ಮಂತಪ್ಪ ಶಿರಾಳಕೊಪ್ಪ. ಬಸವರಾಜ ನರೇಂದ್ರ, ಐ.ಟಿ ಬುಡ್ಡನವರ ಇದ್ದರು.
 
* ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜನೋಪಯೋಗಿ ಯೋಜನೆಗಳನ್ನು ಜಾರಿಗೆ ತರುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ
-ಶಿವಕುಮಾರ ಉದಾಸಿ, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.