ADVERTISEMENT

ಚಿನ್ನದ ಪದಕ ವಿಜೇತ ರಮೇಶಗೆ ಅದ್ಧೂರಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2017, 9:41 IST
Last Updated 29 ಡಿಸೆಂಬರ್ 2017, 9:41 IST

ಬ್ಯಾಡಗಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಗುರುವಾರ ಒಟ್ಟು 51,635 ಚೀಲ (15,490 ಕ್ವಿಂಟಲ್‌) ಮೆಣಸಿನಕಾಯಿ ಆವಕವಾಗಿದೆ. ಕಳೆದ ವಾರ ಒಟ್ಟು 43,202ಚೀಲ (12,960ಕ್ವಿಂಟಲ್‌) ಮೆಣಸಿನಕಾಯಿ ಆವಕವಾಗಿತ್ತು. ಬ್ಯಾಡಗಿ ಕಡ್ಡಿ, ಡಬ್ಬಿ ಹಾಗೂ ಗುಂಟೂರ ತಳಿ ಮೆಣಸಿನಕಾಯಿ ಕನಿಷ್ಠ ದರದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಡಬ್ಬಿ ಗರಿಷ್ಠ ದರದಲ್ಲಿ ₹ 1,000 ಏರಿಕೆ ಕಂಡು ಬಂದಿದೆ.

ಇಂದಿನ ಟೆಂಡರ್‌ ಪ್ರಕ್ರಿಯೆಯಲ್ಲಿ ಒಟ್ಟು 230 ವರ್ತಕರು ಪಾಲ್ಗೊಂಡು, ಒಟ್ಟು 82,362 ಬಾರಿ ದರವನ್ನು ಕೋಟ್‌ ಮಾಡಿದ್ದಾರೆ. ಗುಣಮಟ್ಟದ ಕೊರತೆ ಇರುವ 195 ಲಾಟ್‌ಗಳಿಗೆ ಟೆಂಡರ್‌ ನಿರಾಕರಿಸಲಾಗಿದೆ ಎಂದು ಮಾರುಕಟ್ಟೆಯ ಮೂಲಗಳು ‘ಪ್ರಜಾವಾಣಿ‘ಗೆ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT