ADVERTISEMENT

‘ಧರ್ಮ–ವಿಜ್ಞಾನ ಒಂದೇ ನಾಣ್ಯದ ಎರಡು ಮುಖ’

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 6:44 IST
Last Updated 20 ಮಾರ್ಚ್ 2017, 6:44 IST

ರಾಣೆಬೆನ್ನೂರು: ‘ಆಧುನಿಕ ಯುಗದಲ್ಲಿ ಮಾನವ ಜನಾಂಗದ ಸಾರ್ಥಕ ಬದುಕಿಗೆ ವಿಜ್ಞಾನದ ಅಗತ್ಯವಿದೆ. ಪ್ರತಿಯೊಬ್ಬರ ಬದುಕಿನಲ್ಲಿ ಧರ್ಮ ಮತ್ತು ವಿಜ್ಞಾನವು ಹಾಸು ಹೊಕ್ಕಾಗಿದ್ದು, ಇವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ’ ಎಂದು ನಿವೃತ್ತ ಮುಖ್ಯ ಎಂಜಿನಿಯರ್‌ ಡಿ.ಸಿ.ಕುಲಕರ್ಣಿ ಹೇಳಿದರು.

ನಗರದ ಎಸ್‌ಜೆಎಂವಿ ಕಾಲೇಜಿನಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯ ವೇದಿಕೆ ಇತ್ತೀಚೆಗೆ ಏರ್ಪಡಿಸಿದ್ದ ‘ಮಾನವ ಜನಾಂಗದ ಸಾರ್ಥಕ ಬದುಕಿಗೆ ವಿಜ್ಞಾನದ ಅವಶ್ಯಕತೆ’ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಧರ್ಮ ಮತ್ತು ವಿಜ್ಞಾನದ ನಡುವೆ ಅವಿನಾಭಾವ ಸಂಬಂಧವಿದೆ. ಧರ್ಮವು ನಂಬಿಕೆಗೆ ಅರ್ಹವಾದರೆ, ವಿಜ್ಞಾನವು ಸತ್ಯಾಸತ್ಯತೆ ಒರೆ ಹಚ್ಚಿ ಪ್ರಯೋಗಶೀಲತೆ ಕಡೆಗೆ ನಮ್ಮನ್ನು ಕೊಂಡೊಯ್ಯುತ್ತದೆ’ ಎಂದರು.     

ಪ್ರಾಚಾರ್ಯ ಎಸ್.ಎಂ.ಜಿಡ್ಡಿ ಮಾತನಾಡಿ, ‘ಪ್ರಸ್ತುತ ಸನ್ನಿವೇಶದಲ್ಲಿ ವಿಜ್ಞಾನವು ಧರ್ಮದ ತಳಹದಿಯ ಮೇಲೆ ನಿಂತಿದೆ’ ಎಂದರು. 
ಜಿಲ್ಲಾ ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷ ಜೆ.ಎಂ.ಮಠದ ಮಾತನಾಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.