ADVERTISEMENT

ನ್ಯಾ. ನಾಗಮೋಹನದಾಸ್ ವರದಿ ಶಿಫಾರಸ್ಸಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2018, 10:21 IST
Last Updated 16 ಮಾರ್ಚ್ 2018, 10:21 IST
ನಾಗಮೋಹನದಾಸ್ ವರದಿ ಶಿಫಾರಸ್ಸಿಗಾಗಿ ವಿಶ್ವಬಸವ ಚೈತನ್ಯ ಸಮಿತಿ ಪದಾಧಿಕಾರಿಗಳು ರಾಣೆಬೆನ್ನೂರ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು
ನಾಗಮೋಹನದಾಸ್ ವರದಿ ಶಿಫಾರಸ್ಸಿಗಾಗಿ ವಿಶ್ವಬಸವ ಚೈತನ್ಯ ಸಮಿತಿ ಪದಾಧಿಕಾರಿಗಳು ರಾಣೆಬೆನ್ನೂರ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು   

ರಾಣೆಬೆನ್ನೂರು: ‘ಲಿಂಗಾಯತ ಸತಂತ್ರ ಧರ್ಮ ಸಂವಿಧಾನಿಕ ಮಾನ್ಯತೆಗಾಗಿ ನಾಗಮೋಹನದಾಸ್ ವರದಿಯನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಶಿಫಾರಸ್ಸಿಗೆ ಕೂಡಲೆ ಕಳುಹಿಸಬೇಕು’ ಎಂದು ಒತ್ತಾಯಿಸಿ ವಿಶ್ವಬಸವ ಚೈತನ್ಯ ಸಮಿತಿ ಪದಾಧಿಕಾರಿಗಳು ತಹಶೀಲ್ದಾರ್‌ ಗಿರೀಶಬಾಬು ಅವರಿಗೆ ಮನವಿ ಸಲ್ಲಿಸಿದರು.

ಸಮಿತಿ ಅಧ್ಯಕ್ಷ ಯು.ಎಂ.ಗುರುಲಿಂಗಪ್ಪಗೌಡ್ರ ಮಾತನಾಡಿ, ‘ರಾಜ್ಯದಾದ್ಯಂತ ಲಿಂಗಾಯತ ಸ್ವತಂತ್ರ ಧರ್ಮ ಸ್ಥಾಪನೆಗಾಗಿ ಅನೇಕ ವಾದ ವಿವಾದಗಳು ಹಾಗೂ ಚರ್ಚೆಗಳು ಎಲ್ಲ ಹಂತದಲ್ಲಿ ನಡೆದಿವೆ. ಸತಂತ್ರ ಧರ್ಮ ಸಂವಿಧಾನಿಕ ಮಾನ್ಯತೆಗಾಗಿ ನಾಗಮೋಹನದಾಸ್ ಸಮಿತಿ ನೀಡಿರುವ ವರದಿ ಸ್ಪಷ್ಟ ಮತ್ತು ಸತ್ಯವಾಗಿದೆ. ಆದ್ದರಿಂದ, ಅದನ್ನು ರಾಜ್ಯ ಸರ್ಕಾರ ಕೂಡಲೆ ಅನುಮೋದಿಸಿ ಕೇಂದ್ರ ಸರ್ಕಾರದ ಶಿಫಾರಸ್ಸಿಗೆ ಕಳುಹಿಸಬೇಕು’ ಎಂದು ಒತ್ತಾಯಿಸಿದರು.

‘ಲಿಂಗಾಯತ ಸ್ವತಂತ್ರ ಧರ್ಮ ಆಗಬೇಕೆನ್ನುವುದು ಎಲ್ಲರ ಕೂಗು. ಆದರೆ ಸರ್ಕಾರ ದ್ವಂದ್ವ ನೀತಿಯನ್ನು ತಾಳದೇ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು’ ಎಂದರು.

ADVERTISEMENT

ಕಾರ್ಯಾಧ್ಯಕ್ಷ ಎಂ.ಎಫ್.ಕುಸಗೂರ, ಎಂ.ಎಸ್.ಚನ್ನಗೌಡ್ರ, ಕುಮಾರ ಮಡಿವಾಳರ, ಎನ್.ಎಸ್.ಕೋಡಿಹಳ್ಳಿ, ಎಸ್.ಬಿ. ಪಾಟೀಲ, ಎಂ.ಆರ್.ಸಾಲಿ, ಎಂ.ಬಿ.ಗೌಡಪ್ಪಗೌಡ್ರ, ಎಸ್.ಎನ್.ಕುಸಗೂರ, ಎನ್.ಬಿ.ಸುಂಕಾಪುರ, ಐ.ಪಿ.ಕುಳೇನೂರ, ಎಸ್.ಬಿ.ದಿಂಡದಹಳ್ಳಿ, ಶಶಿಕಾಂತ ಕರೂರ, ಬಸವಣ್ಣೆಪ್ಪ ನಲವಾಗಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.