ADVERTISEMENT

ಪ್ರತಿಧ್ವನಿಸಿದ ಕುಡಿವ ನೀರಿನ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 6:15 IST
Last Updated 23 ಏಪ್ರಿಲ್ 2017, 6:15 IST

ಬ್ಯಾಡಗಿ: ‘ಸಾಲ ಮರುಪಾವತಿಸುವಂತೆ ಕಿರುಕುಳ ಹೆಚ್ಚುತ್ತಿದೆ’, ‘ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ’, ‘ಮರಳು ದೊರೆ ಯುತ್ತಿಲ್ಲ...’ ಇವು ತಾಲ್ಲೂಕಿನ ಶಿಡೇ ನೂರ (ಶಿವಾಜಿ ನಗರ ತಾಂಡಾ) ಗ್ರಾಮ ದಲ್ಲಿ ತಾಲ್ಲೂಕು ಆಡಳಿತ ಶನಿವಾರ ಏರ್ಪ ಡಿಸಿದ್ದ ಮಾಸಿಕ ಜನಸ್ಪಂದನ ಕಾರ್ಯ ಕ್ರಮದಲ್ಲಿ ಪ್ರತಿಧ್ವನಿಸಿದ ಸಮಸ್ಯೆಗಳು.

‘ಕಳೆದ 3 ವರ್ಷದಿಂದ ಬರ ಎದು ರಾಗಿದೆ. ಜೀವನ ನಡೆಸುವುದೇ ದುಸ್ತರ ವಾಗಿದೆ. ಆದರೆ ಸಾಲ ತುಂಬುವಂತೆ ಪಿಕೆಪಿಎಸ್‌ನಿಂದ  ಒತ್ತಡ ಹೆಚ್ಚಿದೆ’ ಎಂದು ಅಜ್ಜಪ್ಪ ಗಜ್ಜರಿ ಹಾಗೂ ಮಹಾಂ ತೇಶ ಮಠದ ಅಳಲು ತೋಡಿಕೊಂಡರು.ಇದಕ್ಕೆ ಸ್ಪಂದಿಸಿದ ತಹಶೀಲ್ದಾರ್ ಶಿವಶಂಕರ ನಾಯಕ, ‘ಕೂಡಲೇ ಕಾರ್ಯ ದರ್ಶಿಯೊಂದಿಗೆ ಮಾತನಾಡುವೆ’ ಭರವಸೆ ನೀಡಿದರು.

‘ಶಿವಾಜಿನಗರ ಕಂದಾಯ ಗ್ರಾಮ ದಲ್ಲಿ ನೂರಾರು ಕುಟುಂಬಗಳಿಗೆ ಶುದ್ಧ ನೀರು ಸಿಗುತ್ತಿಲ್ಲ. ಗ್ರಾಮದ ಕೊಳವೆಯಲ್ಲಿ ಗಡಸು ನೀರಿದೆ. ಇದರಿಂದ ಜನರು ಹಲವು ಸಮಸ್ಯೆಗಳಿಗೆ ತುತ್ತಾಗಿದ್ದಾರೆ. ಗ್ರಾಮದಲ್ಲಿಯೇ ಒಂದು ಶುದ್ಧ ನೀರಿನ ಘಟಕ ಅಳವಡಿಸಬೇಕು’ ಎಂದು ಸ್ಥಳೀಯರು ಒಕ್ಕೋರಲಿನಿಂದ ಮನವಿ ಮಾಡಿದರು.‘ಪ್ರಸಕ್ತ ಸಾಲಿನಲ್ಲಿ 24 ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದೆ. ಆದರೆ ಮನೆ ನಿರ್ಮಾಣಕ್ಕೆ ಮರಳು ಸಿಗುತ್ತಿಲ್ಲ. ಇದರಿಂದ ಕಾಮಗಾರಿ ಸ್ಥಗಿತಗೊಂಡಿದೆ. ಮರಳು ದೊರೆಯು ವಂತೆ ಕ್ರಮ ಕೈಕೊಳ್ಳಬೇಕು’ ಎಂದು ಮಲ್ಲೇಶಪ್ಪ ಒತ್ತಾಯಿಸಿದರು.

ADVERTISEMENT

‘ಕೆರೆಗಳು ಬರಿದಾಗಿದ್ದು ನರೇಗಾ ಯೋಜನೆಯಡಿ ಹೂಳೆತ್ತುವ ಕಾರ್ಯ ಆರಂಭಿಸಬೇಕು’ ಎಂದು ತಿರಕಪ್ಪ ಎಂಬುವರು ತಾಲ್ಲೂಕು ಆಡಳಿತದ ಗಮನ ಸೆಳೆದರು.ಸಭೆಯಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಸವಿತಾ ಸುತ್ತಕೋಟಿ, ಕಾರ್ಯ ನಿರ್ವಾಹಕ ಅಧಿಕಾರಿ ಬಸವರಾಜ ಅಯ್ಯಣ್ಣನವರ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಇಂದಿರಾ ಬಂಡಿವಡ್ಡರ, ಉಪಾ ಧ್ಯಕ್ಷ ಪರಮೇಶಪ್ಪ ತೆವರಿ, ಸಿಡಿಪಿಓ ಸಿ.ಉಮಾ, ಗ್ರಾಮ ಲೆಕ್ಕಾಧಿಕಾರಿ ಕೆ.ಎನ್‌.ಹುಚ್ಚೇರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಮಹಿಳೆ ವಶಕ್ಕೆ: ಚರಂಡಿ ಮೇಲೆ ನಿರ್ಮಿ ಸಿದ್ದ ಕಾಂಪೌಂಡ್ ತೆರವುಗೊಳಿಸಲು ಮನವಿ ಸಲ್ಲಿಸಿದ್ದರಿಂದ ಸ್ಥಳ ಪರಿಶೀಲಿಸಿದ ಪಂಚಾಯ್ತಿ ಅಧಿಕಾರಿಗಳು ಒತ್ತುವರಿ ತೆರವಿಗೆ ಸೂಚಿಸಿದ್ದರು. ಇದರಿಂದ ಆಕ್ರೋಶಗೊಂಡ ಮಹಿಳೆ ತಹಶೀಲ್ದಾರ್ ಅವರನ್ನು ಏಕವಚನದಲ್ಲಿ ನಿಂದಿಸಿ ಘಟನೆ ನಡೆಯಿತು. ಬಳಿಕ ಆ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದರು ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.