ADVERTISEMENT

ಬೂಸ್ಟ್‌ ಹಿಡಿದ ಗೋವಿನಜೋಳ ತಿಂದ 32 ಕುರಿಗಳ ಸಾವು

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2017, 7:02 IST
Last Updated 10 ನವೆಂಬರ್ 2017, 7:02 IST

ಶಿಗ್ಗಾವಿ: ತಾಲ್ಲೂಕಿನ ಹೋತನಹಳ್ಳಿ, ಹುಲಿಕಟ್ಟಿ ನಡುವಿನ ಹೊಲವೊಂದರಲ್ಲಿ ಬೂಸ್ಟ್‌ ಹಿಡಿದ ಗೋವಿನಜೋಳ ತಿಂದ ಸುಮಾರು 32 ಕುರಿಗಳು ಮೃತಪಟ್ಟಿವೆ. ಬುಧವಾರ ರಾತ್ರಿ 13 ಕುರಿಗಳು, ಗುರುವಾರ ಬೆಳಿಗ್ಗೆ 19 ಕುರಿಗಳು ಮೃತಪಟ್ಟಿವೆ ಎನ್ನಲಾಗಿದೆ.

ಕುರಿಗಳು ಹುಲಿಕಟ್ಟಿ ಗ್ರಾಮದ ಸಿದ್ದಬೀರಪ್ಪ ಗಡ್ಡೆ, ಹೋತನಹಳ್ಳಿ ಗ್ರಾಮದ ಬೀರಪ್ಪ ನಡಗಟ್ಟಿ, ಮಂಜು ಹುಲಗಣ್ಣವರ, ದುಂಡಸಿ ಮಕಾನಭಾಷಾ ಕಬನೂರ, ಖುರ್ಸಾಪುರ ಗ್ರಾಮದ ಬೀರಪ್ಪ, ಹುರಳಿಕುಪ್ಪಿ ಗ್ರಾಮದ ಗದಿಗೆಪ್ಪ ಗುಡ್ಡಣ್ಣವರ, ರಾಯಪ್ಪ ಹುಲಗಣ್ಣವರ, ಶಿವರಾಯಪ್ಪ ಹುಲಣ್ಣವರ ಅವರಿಗೆ ಸೇರಿವೆ.

ಹೊಲದಲ್ಲಿ ಕೊಳೆತು ಬಿದ್ದಿದ್ದ ಗೋವಿನಜೋಳ ಬೂಸ್ಟ್‌ ಹಿಡಿದ ಕಾರಣ ವಿಷವಾಗಿದ್ದು, ಅದನ್ನು ತಿಂದಿರುವ ಕಾರಣ ಕುರಿಗಳು ಮೃತಪಟ್ಟಿವೆ ಎಂದು ಬಂಕಾಪುರದ ಪಶುವೈದ್ಯಾಧಿಕಾರಿ ಆನಂದ ಪಾಲೇಕರ್‌ ತಿಳಿಸಿದ್ದಾರೆ.

ADVERTISEMENT

ಪರಿಹಾರಕ್ಕೆ ಆಗ್ರಹ: ಹಾನಿಗೆ ಒಳಗಾದ ಕುರಿಗಾರರಿಗೆ ಸರ್ಕಾರ ತಕ್ಷಣ ಪರಿಹಾರಧನ ವಿತರಣೆ ಮಾಡಬೇಕು ಎಂದು ರೈತ ಹೋರಾಟ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಗಂಗಾಧರ ಗಡ್ಡೆ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.