ADVERTISEMENT

ಭೂಗೋಳ ವಿಜ್ಞಾನ ಎಲ್ಲ ವಿಷಯಗಳ ತಾಯಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 6:19 IST
Last Updated 23 ಏಪ್ರಿಲ್ 2017, 6:19 IST

ಹಾನಗಲ್: ‘ಮಾನವ ನಿರ್ಮಿತ ತಂತ್ರಜ್ಞಾನದ ಅವೈಜ್ಞಾನಿಕ ಚಟುವಟಿಕೆಗಳು ಪರಿಸರದ ಅಸಮತೋಲನಕ್ಕೆ ಪ್ರಮುಖ ಕಾರಣ’ ಎಂದು ಮಾಜಿ ಸಚಿವ ಸಿ.ಎಂ.ಉದಾಸಿ ಅಭಿಪ್ರಾಯಪಟ್ಟರು.ಶನಿವಾರ ಸ್ಥಳೀಯ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಕಾಲೇಜಿನ ಭೂಗೋಳಶಾಸ್ತ್ರ ವಿಭಾಗದಿಂದ ಹಮ್ಮಿಕೊಂಡಿದ್ದ ವಿಶ್ವ ಭೂ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜನಸಂಖ್ಯೆ ಹೆಚ್ಚಿದಂತೆ ಜೀವನಾನುಕೂಲಗಳನ್ನು ಒದಗಿಸಿಕೊಳ್ಳಲು ಗ್ರಾಮ, ನಗರಗಳ ವಿಸ್ತರಣೆ, ನೀರಾವರಿಗಾಗಿ ಅಣೆಕಟ್ಟು, ಕೈಗಾರಿಕೆ, ಕಾರ್ಖಾನೆ, ವಿದ್ಯುತ್ ಘಟಕಗಳ ಸ್ಥಾಪನೆಗಾಗಿ ಹೆಚ್ಚು ಪ್ರಮಾಣದ ಅರಣ್ಯ ನಾಶ ನಡೆಯುತ್ತಲೇ ಇದೆ. ಇರದ ಪರಿಣಾಮ ಪ್ರಕೃತಿದತ್ತವಾದ ಭೂವಿನ್ಯಾಸ ವಿರೂಪಗೊಳ್ಳುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಜನತಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ.ಎಸ್.ಬಳ್ಳಾರಿ ಮಾತನಾಡಿ, ‘ಅರಣ್ಯ ನಾಶ ಮತ್ತು ಪರಿಸರದ ಮಾಲಿನ್ಯದಿಂದ ಭೂಮಿಯ ತಾಪಮಾನ ಹೆಚ್ಚಾಗುತ್ತಿದೆ. ಪರಿಸರದಲ್ಲಿಯ ಗಾಳಿ, ಉಷ್ಣತೆ, ತೇವಾಂಶ, ಮಳೆಯಂತಹ ಅಂಶಗಳನ್ನು ಸಮತೋಲನವಾಗಿ ಇಡಲು ಸಸ್ಯಗಳು ಉಪಯುಕ್ತವಾಗಿವೆ’ ಎಂದರು.ಹಂಸಭಾವಿ ಎಂ.ಎ.ಎಸ್.ಸಿ.ಕಾಲೇಜಿನ ಭೂಗೋಳ ಪ್ರಾಧ್ಯಾಪಕ ಡಾ.ಎಸ್.ಎಸ್.ಮಠಪತಿ ಮಾತನಾಡಿ, ‘ಭೂಗೋಳಶಾಸ್ತ್ರ ಎಲ್ಲ ವಿಷಯಗಳ ತಾಯಿಯಂತೆ. ಇದರಲ್ಲಿ ಭೌತಿಕ ಮತ್ತು ಸಾಂಸ್ಕೃತಿಕ ಅಂಶಗಳು ಅಡಕವಾಗಿವೆ’ ಎಂದರು.

ADVERTISEMENT

ಕಾಲೇಜಿನ ಭೂಗೋಳಶಾಸ್ತ್ರ ವಿಭಾ ಗದ ಮುಖ್ಯಸ್ಥ ಡಾ. ಪ್ರಕಾಶ ಹೊಳೇರ ಪ್ರಾಸ್ತಾವಿಕ ಮಾತನಾಡಿ, ಜಾಗತಿಕ ತಾಪಮಾನ ಹೆಚ್ಚಳ, ಓಝೋನ್ ನಾಶದ ಬಗ್ಗೆ ವಿವರಿಸಿದರು.ಪ್ರಾಚಾರ್ಯ ಪ್ರೊ.ಎಸ್.ವಿ.ಸೋಮನಾಥ ಮತ್ತು ಜನತಾ ಶಿಕ್ಷಣ ಸಂಸ್ಥೆ ಸಂಸ್ಥೆಯ ಉಪಾಧ್ಯಕ್ಷ ಪಿ.ವೈ.ಗುಡಗುಡಿ ಮಾತನಾಡಿದರು. ನಿರ್ದೇಶಕರಾದ ಸುರೇಶ ರಾಯ್ಕರ, ಆರ್.ಎಂ.ತಿತ್ತಿ, ಪ್ರಾಧ್ಯಾಪಕರಾದ ಸಿ.ಮಂಜುನಾಥ, ಡಾ.ಎಂ.ಎಚ್.ಹೊಳಿಯಣ್ಣನವರ, ಸೌಭಾಗ್ಯ ಹುರಳಿಕುಪ್ಪಿ ಹಾಜರಿದ್ದರು.ವಿದ್ಯಾರ್ಥಿ ಪವಿತ್ರಾ.ಎ.ಕೆ.ಮತ್ತು ಸುಜ್ಞಾನಿ ಬಬಲಾದಿ ಪ್ರಾರ್ಥಿಸಿದರು. ಚಿದಾನಂದ ಈರಣ್ಣನವರ ಮತ್ತು ಶಿವರಾಜಕುಮಾರ ಗೊಂದಿ ಸ್ವಾಗತಿಸಿದರು.  ಪೂರ್ಣಿಮಾ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.