ADVERTISEMENT

ವಾರಿಯರ್ಸ್‌,ಟೈಗರ್ಸ್‌, ಪವರ್‌ಗೆ ಜಯ

ಪ್ರೊ ಕಬಡ್ಡಿ ಟೂರ್ನಿ: ಹಿಂದೂಸ್ತಾನ್‌ ಸ್ಪೊರ್ಟ್ ಕ್ಲಬ್ ಹಾಗೂ ಜಿಲ್ಲಾ ಅಮೆಚೂರ್ ಕ್ರೀಡಾಕೂಟ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2017, 6:30 IST
Last Updated 3 ಫೆಬ್ರುವರಿ 2017, 6:30 IST
ವಾರಿಯರ್ಸ್‌,ಟೈಗರ್ಸ್‌, ಪವರ್‌ಗೆ ಜಯ
ವಾರಿಯರ್ಸ್‌,ಟೈಗರ್ಸ್‌, ಪವರ್‌ಗೆ ಜಯ   

ರಾಣೆಬೆನ್ನೂರು: ಎನ್‌ಬಿಕೆ ಭಗತಸಿಂಗ್ ವಾರಿಯರ್‍ಸ್, ಅರುಣೋದಯ ಟೈಗರ್‍ಸ್ ಹಾಗೂ ಗ್ರೀನ್ ಪವರ್ ತಂಡಗಳು ರೌಂಡ ರಾಬಿನ್ ಲೀಗ್‌ನಲ್ಲಿ ಮೊದಲ ಸುತ್ತಿನ ಪಂದ್ಯಗಳಲ್ಲಿ ಗೆದ್ದು, ಐದು ಅಂಕಗಳೊಂದಿಗೆ ಮುನ್ನಡೆ ಸಾಧಿಸಿವೆ.

ಇಲ್ಲಿಯ ನಗರಸಭೆ ಕ್ರೀಡಾಂಗಣದಲ್ಲಿ ಚೌಡೇಶ್ವರಿ ಜಾತ್ರೆ ಅಂಗವಾಗಿ ಹಿಂದೂಸ್ತಾನ್‌ ಸ್ಪೊರ್ಟ್ ಕ್ಲಬ್ ಹಾಗೂ ಜಿಲ್ಲಾ ಅಮೆಚೂರ್ ಆಶ್ರಯದಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟದ ಪ್ರೊ ಕಬಡ್ಡಿ ಪ್ರಿಮಿಯರ್ ಲೀಗ್‌ನ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಎನ್‌ಬಿಕೆ ಭಗತಸಿಂಗ್ ವಾರಿಯರ್‍ಸ್ 36–21ರಿಂದ ಚನ್ನಮ್ಮ ಪ್ಯಾಂಥರ್‍ಸ್ ವಿರುದ್ಧ ಜಯಿಸಿತು.

ಆರಂಭದಿಂದಲೂ ಆಕ್ರಮಣಾಕಾರಿ ಆಟವನ್ನು ಪ್ರದರ್ಶಿಸಿದ ವಾರಿಯರ್ಸ್‌ ತಂಡವು ಮೊದಲಾರ್ಧದಲ್ಲಿ 16–11ರಿಂದ ಮುನ್ನಡೆ ಪಡೆದಿತ್ತು.
ವಾರಿಯರ್‍ಸ್ ಪರ ಅಂಜು ನಾಯ್ಕ್ ಉತ್ತಮ ಆಟವನ್ನು ಪ್ರದರ್ಶಿಸಿ 4 ಅಂಕ ಪಡೆದರು. ಇವರಿಗೆ ಸಾಥ್ ನೀಡಿದ ಸಂತೋಷ್ ಕ್ಯಾಚಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದರು. ಪ್ಯಾಂಥರ್ಸ್ ಪರವಾಗಿ ಮೂರ್ತಿ ಹಾಗೂ ಅಶೋಕ ಅವರ ಹೋರಾಟಕ್ಕೆ ಫಲ ಸಿಗಲಿಲ್ಲ.

ಎರಡನೇ ಪಂದ್ಯದಲ್ಲಿ ಅರುಣೋದಯ ಟೈಗರ್‍ಸ್ 31–15 ಪಾಯಿಂಟ್‌ಗಳಿಂದ ರಾಣೆಬೆನ್ನೂರು ಬುಲ್ಸ್ ವಿರುದ್ಧ ಜಯಸಿತು. ಮೊದಲಾರ್ಧದಲ್ಲಿ ಸಮ ಬಲದ ಹೋರಾಟ ಕಂಡು ಬಂತು. ಆದರೆ, ಕೊನೆ ಕ್ಷಣದಲ್ಲಿ ಟೈಗರ್ಸ್‌ ತಂಡವು ಒಂದು ಮುನ್ನಡೆ ಕಾಯ್ದುಕೊಂಡು 9–8ರಿಂದ ವಿರಾಮಕ್ಕೆ ಹೋಯಿತು. ದ್ವಿತಿಯಾರ್ಧದಲ್ಲಿ ಕ್ಯಾಚಿಂಗ್ ಮತ್ತು ರೈಡಿಂಗ್‌ನಲ್ಲಿ ಮಿಂಚಿ, ಗೆಲುವು ತನ್ನದಾಗಿಸಿಕೊಂಡಿತು.

ಬುಲ್ಸ್ ಪರ ಜುಲ್ಫಿಕರ್ ಹಾಗೂ ಸಾದಿಕ್ ನಡೆಸಿದ ಹೋರಾಟ ಫಲ ನೀಡಲಿಲ್ಲ. ಟೈಗರ್‍ಸ್ ತಂಡದ ಪರ ನಾಗರಾಜ ಸಿದ್ಧಿ ಹಾಗೂ ಚೇತನ ಸುವರ್ಣ ಉತ್ತಮ ಪ್ರದರ್ಶನ ತೋರಿದರು. ಕೊನೆಯ ಪಂದ್ಯದಲ್ಲಿ ಗ್ರೀನ್ ಪವರ ತಂಡವು 41–18ರಿಂದ   ಓಂ ಸಾಯಿ ಸ್ಟಾರ್‍ಸ್ ವಿರುದ್ಧ 23 ಪಾಯಿಂಟ್ ಅಂತರದ ಗೆಲುವು ಸಾಧಿಸಿತು. ಮೊದಲಾರ್ಧದಿಂದಲೇ ರೈಡಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಪವರ ತಂಡವು ಸಚಿನ್ ಸಾಯಿ ಸ್ಟಾರ್‍ಸ್‌ನ ಮೇಲೆ 4 ಲೋನಾ ಪಾಯಿಂಟ್ ಪಡೆಯುವಲ್ಲಿ ಯಶಸ್ವಿಯಾದರು.

ಸೂಪರ್ ಟ್ಯಾಕಲ್‌ನಲ್ಲಿ ವಿಫಲವಾದ ಸಾಯಿ ಸ್ಟಾರ್‍ಸ್ ಆಟಗಾರರು ಪಂದ್ಯದ ಮೇಲೆ ಹಿಡಿದ ಸಾಧಿಸಲು ಸಾಧ್ಯವಾ ಗಲಿಲ್ಲ, ಅನುಭವಿ ಆಟಗಾರರನ್ನು ಹೊಂದಿದ್ದ ಗ್ರೀನ್‌ ಪವರ್ ಯಾವುದೇ ಹಂತದಲ್ಲಿಯೂ ಸಾಯಿ ಸ್ಟಾರ್‍ಸ್ ಆಟಗಾರರಿಗೆ ಪಾಯಿಂಟ್ ಪಡೆಯಲು ಬಿಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.