ADVERTISEMENT

ಸರ್ವಜ್ಞ ಪ್ರಾಧಿಕಾರ ರಚನೆಗೆ ಒತ್ತಾಯ

ತ್ರಿಪದಿ ಕವಿಯ ಜಯಂತಿ, ಕುಂಬಾರ ಜನಾಂಗದ ಅಭಿವೃದ್ಧಿಗೆ ಸಂಪೂರ್ಣ ಸಹಕಾರದ ಭರವಸೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2017, 5:10 IST
Last Updated 21 ಫೆಬ್ರುವರಿ 2017, 5:10 IST
ಹಾವೇರಿ: ‘ತ್ರಿಪದಿ ಕವಿ ಸರ್ವಜ್ಞ ಹೆಸರಿನ ಪ್ರಾಧಿಕಾರ ರಚನೆಗೆ ಈ ಬಾರಿಯ ಬಜೆಟ್‌ನಲ್ಲಿ ₹10 ಕೋಟಿ ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮನವಿ ಮಾಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.
 
ನಗರದ ಡಿ.ದೇವರಾಜ ಅರಸು ಭವನದಲ್ಲಿ ಜಿಲ್ಲಾ ಪಂಚಾಯ್ತಿ, ಜಿಲ್ಲಾಡಳಿತ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕುಂಬಾರ ಸಂಘವು ಸೋಮವಾರ ಹಮ್ಮಿಕೊಂಡ ‘ತ್ರಿಪದಿ ಕವಿ ಸರ್ವಜ್ಞ ಜಯಂತಿ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
 
‘ಜಿಲ್ಲೆಯ ಹೆಮ್ಮೆಯ ಕವಿ ಸರ್ವಜ್ಞರ ಪ್ರಾಧಿಕಾರ ರಚನೆ ಕುರಿತು ಶಾಸಕ ಯು.ಬಿ.ಬಣಕಾರ, ಮಾಜಿ ಶಾಸಕ ಬಿ.ಸಿ.ಪಾಟೀಲ್‌ ಜೊತೆಗೂಡಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ಸರ್ವಜ್ಞ ಪ್ರಾಧಿಕಾರಕ್ಕೆ ಸರ್ಕಾರವೇ ಠೇವಣಿ ಇಡಬೇಕು. ಆ ಠೇವಣಿಯ ಬಡ್ಡಿಯಲ್ಲಿ ಪ್ರಾಧಿಕಾರದ ಸಿಬ್ಬಂದಿಗೆ ಸಂಬಳ ರೂಪದಲ್ಲಿ ನೀಡುವ ವ್ಯವಸ್ಥೆ ಮಾಡಬೇಕು’ ಎಂದರು.
 
‘ನಗರದ ಕುಂಬಾರ ಗುಂಡಿಯ ಜನ ಖಾಸಗಿ ಜಾಗವನ್ನು ತೊರೆಯಲು ಸಿದ್ಧರಾದರೆ, ನಾಗೇಂದ್ರಮಟ್ಟಿ ಅಥವಾ ಭೂ ವೀರಾಪುರದಲ್ಲಿ ಎರಡು ತಿಂಗಳ ಒಳಗಾಗಿ ನಿವೇಶನ ಹಾಗೂ ಜಿ– ಪ್ಲಸ್‌ ಮನೆಗಳನ್ನು ನೀಡುವ ವ್ಯವಸ್ಥೆ ಮಾಡಲಾಗುವುದು’ ಎಂದರು.
 
ಮಂಜಪ್ಪ ಕುಂಬಾರ ಮಾತನಾಡಿ, ‘6ನೇ ಶತಮಾನದಲ್ಲಿ ಪ್ರಾರಂಭವಾದ ತ್ರಿಪದಿ ಸಾಹಿತ್ಯ 14ನೇ ಶತಮಾನದಲ್ಲಿ ಅತ್ಯಂತ ಉನ್ನತ ಸ್ಥಿತಿಗೆ ತಲುಪಿಸಿದವರೇ ತ್ರಿಪದಿ ಕವಿ ಸರ್ವಜ್ಞ. ಅವರು ಯಾವುದೇ ಜಾತಿ, ಜನಾಂಗಕ್ಕೆ ಸೀಮಿತವಾಗಿಲ್ಲ. ಅವರು ವಿಶ್ವ ಮಾನವರು. 12ನೇ ಶತಮಾನದಲ್ಲಿದ್ದ ಜಾತೀಯತೆ, ಮೌಢ್ಯಾ ಚರಣೆಗಳನ್ನು ವಿರೋಧಿಸಿದ ಶರಣರ ಹಾದಿಯನ್ನೇ ಸರ್ವಜ್ಞರು ಮುಂದು ವರಿಸಿದ್ದರು’ ಎಂದರು.
 
‘ಸರ್ವಜ್ಞ ರಚಿಸಿದ ತ್ರಿಪದಿಗಳನ್ನು ನಿಖರವಾಗಿ ಗುರುತಿಸುವ ಕಾರ್ಯ ಆಗಬೇಕಿದೆ. ಸರ್ವಜ್ಞ ರಚಿಸಿದ ತ್ರಿಪದಿ ಗಳಲ್ಲಿ 40 ಮಾತ್ರೆಗಳ ಬರುತ್ತವೆ’ ಎಂದರು.
 
‘ಪ್ರತಿಯೊಬ್ಬರು ಒಂದು ಜಾತಿಯಲ್ಲಿ ಜನಿಸಿರಲೇ ಬೇಕು. ಆದರೆ, ಎಲ್ಲ ಜಾತಿ, ಸಮುದಾಯಗಳನ್ನು ಮೀರಿ ಬೆಳೆಯು ವವನೇ ಮಹಾತ್ಮ. ಇಡೀ ಜಗತ್ತಿಗೆ ಬೆಳಕು ನೀಡಿದ ಸರ್ವಜ್ಞನನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸುವುದು ಸಮಂ ಜಸವಲ್ಲ’ ಎಂದರು.
 
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತ ನಾಡಿ, ‘ನಗರಾಭಿವೃದ್ಧಿ ಪ್ರಾಧಿಕಾರದಿಂದ ಕುಂಬಾರ ಜನಾಂಗಕ್ಕೆ 10 ಗುಂಟೆ ಜಾಗ ಮೀಸಲಿಡಲಾಗುವುದು’ ಎಂದರು.
 
ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಮಾತನಾಡಿ, ‘ತ್ರಿಪದಿ ಕವಿ ಸರ್ವಜ್ಞನ ಬಗ್ಗೆ ಇಂದಿನ ಪಠ್ಯಪುಸ್ತಕಗಳಲ್ಲಿ ಅಳವಡಿಸುವುದು ತುಂಬ ಅವಶ್ಯಕವಾಗಿದೆ. ತ್ರಿಪದಿಗಳನ್ನು ಸರಳ ರೂಪಕ್ಕೆ ತಂದು ಜನಸಾಮಾನ್ಯರಿಗೆ ತಿಳಿಯುವಂತೆ ಮಾಡಬೇಕಾಗಿದೆ’ ಎಂದರು.
 
ಉಪವಿಭಾಗಾಧಿಕಾರಿ ಬಸವರಾಜ ಸೋಮಣ್ಣನವರ, ತಹಶೀಲ್ದಾರ್‌ ಜೆ.ಬಿ. ಮಜ್ಜಗಿ, ನಗರಸಭೆ ಅಧ್ಯಕ್ಷೆ ಪಾರ್ವತೆಮ್ಮ ಹಲಗಣ್ಣನವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ, ರೇವಣಪ್ಪ ಚತ್ರಸಾಲಿ ಇದ್ದರು.
 
***
ತ್ರಿಪದಿ ಕವಿ ಸರ್ವಜ್ಞ ಯಾವುದೇ ಜಾತಿ, ಜನಾಂಗಕ್ಕೆ ಸೀಮಿತವಾಗದೇ, ಇಡೀ ವಿಶ್ವಕ್ಕೆ ಬೇಕಾದವರು 
-ರುದ್ರಪ್ಪ ಲಮಾಣಿ,
ಜಿಲ್ಲಾ ಉಸ್ತುವಾರಿ ಸಚಿವ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.