ADVERTISEMENT

ಸೇವೆಯೇ ಬ್ಯಾಂಕ್‌ನ ಮೂಲ ಮಂತ್ರ

​ಪ್ರಜಾವಾಣಿ ವಾರ್ತೆ
Published 27 ಮೇ 2017, 9:18 IST
Last Updated 27 ಮೇ 2017, 9:18 IST

ಬ್ಯಾಡಗಿ: ‘ಬ್ಯಾಂಕ್‌ ಸಿಬ್ಬಂದಿ ತನ್ನ ಗ್ರಾಹಕರೊಂದಿಗೆ ಗೌರವ ಹಾಗೂ ಸೌಜನ್ಯದಿಂದ ನಡೆದುಕೊಂಡು, ಉತ್ತಮ ಸೇವೆ ನೀಡಬೇಕು. ಆಗ ಮಾತ್ರ ಬ್ಯಾಂಕ್‌ ಅಭಿವೃದ್ಧಿ ಸಾಧ್ಯ’ ಎಂದು ಗಜಾನನ ಅರ್ಬನ್‌ ಕೋ–ಆಪರೇಟಿವ್ ಬ್ಯಾಂಕ್‌ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸುರೇಶಗೌಡ ಪಾಟೀಲ ಹೇಳಿದರು.

33 ವರ್ಷಗಳ ಸೇವೆಯ ಬಳಿಕ ನಿವೃತ್ತಗೊಂಡ ಬ್ಯಾಂಕ್‌ ವ್ಯವಸ್ಥಾಪಕ ಸಿ.ಬಿ.ಪಾಟೀಲ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ಪಟ್ಟಣದಲ್ಲಿ ಹಲವು ರಾಷ್ಟ್ರೀಕೃತ ಬ್ಯಾಂಕ್‌ಗಳಿದ್ದರೂ, ನಮ್ಮ ಬ್ಯಾಂಕ್‌ ಗ್ರಾಹಕರಿಗೆ ಉತ್ತಮ ಸೇವೆ ಹಾಗೂ ಪಾರದರ್ಶಕ ವ್ಯವಹಾರದ ಮೂಲಕ ಶತಮಾನದ ಹೊಸ್ತಿಲಲ್ಲಿದೆ. ಗರಿಷ್ಠ ಮುಖ ಬೆಲೆಯ ನೋಟು ಅಮಾನ್ಯೀಕರಣದ ಬಳಿ ನೆಪ್ತ್‌ ಹಾಗೂ ಆರ್‌ಟಿಜಿಎಸ್‌ ಮೂಲಕ ನಗದು ರಹಿತ ವಹಿವಾಟಿಗೆ ಹೆಚ್ಚು ಆದ್ಯತೆ ನೀಡಲಾಗಿದೆ’ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿ.ಬಿ.ಪಾಟೀಲ, ‘ಆಡಳಿತ ಮಂಡಳಿಯ ಸಹಕಾರದಿಂದ ಬ್ಯಾಂಕ್‌ನ ಒಟ್ಟು ಅನುತ್ಪಾದಕ ಆಸ್ತಿಯ ಪ್ರಮಾಣ ಸೊನ್ನೆಗೆ ಇಳಿಸಲು ಸಾಧ್ಯವಾಗಿದೆ. ಬ್ಯಾಂಕ್‌ 2015–16ನೇ ಹಣಕಾಸು ವರ್ಷದಲ್ಲಿ ₹40.14 ಲಕ್ಷ ಲಾಭ ಗಳಿಸಿದೆ’ ಎಂದರು.

ADVERTISEMENT

ಈ ವೇಳೆ ನಿವೃತ್ತ ಪ್ರಾಚಾರ್ಯ ಎಸ್‌.ಬಿ.ತವರದ, ಡಾ.ಎಸ್‌.ಎನ್‌. ನಿಡಗುಂದಿ, ಮಹಾಂತೇಶ ಆಲದಗೇರಿ ನಿರ್ದೇಶಕರಾದ ಸತೀಶ ಪಾಟೀಲ, ಬಸಪ್ಪ ಮಾಳೇನಹಳ್ಳಿ, ವಿವೇಕಾನಂದ ಬೆಟಗೇರಿ, ಅಂಬಾಲಾಲ ಜೈನ, ಸಾವಿತ್ರಾ ಪಾಟೀಲ, ಮನೋಹರ ಅರ್ಕಾಚಾರಿ, ಚನ್ನಬಸನಗೌಡ ಪಾಟೀಲ, ಎಫ್‌.ಎಂ. ಮುಳಗುಂದ, ಮಂಜುನಾಥ ಗದಗಕರ ಉಪಸ್ಥಿತರಿದ್ದರು. ದೀಪಾ ಪ್ಯಾಟಿ ಪ್ರಾರ್ಥಿಸಿದರು.  ವನಜಾಕ್ಷಿ ಪಾಟೀಲ ನಿರೂಪಿಸಿದರು. ಮಲ್ಲಿಕಾರ್ಜುನ ಪ್ಯಾಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.