ADVERTISEMENT

ಅಭಿವೃದ್ಧಿಗೆ ₹3 ಸಾವಿರ ಕೋಟಿ ಅನುದಾನ

ಅಲ್ಲೂರ್‌(ಕೆ) ಗ್ರಾಮದಲ್ಲಿ ₹ 37 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 5:43 IST
Last Updated 18 ಫೆಬ್ರುವರಿ 2017, 5:43 IST
ಚಿತ್ತಾಪುರ: ಮತಕ್ಷೇತ್ರದ ವ್ಯಾಪ್ತಿಯಲ್ಲಿ ಕುಡಿಯುವ ನೀರು, ವಿದ್ಯುತ್‌, ರಸ್ತೆ, ಶಾಲೆ ಮತ್ತು ವಸತಿ ನಿಲಯಗಳ ಕಟ್ಟಡ, ಆಸ್ಪತ್ರೆ ಕಟ್ಟಡ, ಪೊಲೀಸ್‌ ವಸತಿ ಕಟ್ಟಡ, ಪ್ರವಾಸಿ ಮಂದಿರ, ಶೌಚಾಲಯ ಸೌಲಭ್ಯ ಒದಗಿಸಲು ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಶಿವರುದ್ರ ಭೀಣಿ ತಿಳಿಸಿದರು. 
 
ತಾಲ್ಲೂಕಿನ ಅಲ್ಲೂರ್‌(ಕೆ) ಗ್ರಾಮ ದಲ್ಲಿ ಶುಕ್ರವಾರ ಅಲ್ಲೂರ್‌(ಕೆ)–ಸಾತ ನೂರ ಕ್ರಾಸ್‌ವರೆಗೆ ₹ 25 ಲಕ್ಷ ವೆಚ್ಚ ಹಾಗೂ ₹ 12 ಲಕ್ಷ ವೆಚ್ಚದ ಅಲ್ಲೂರ್‌(ಕೆ)–ಭಂಕಲಗಾ (ಚಿತ್ತಾಪುರ ಹಣಾದಿ) ರಸ್ತೆ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. 
 
ಯಾತ್ರಿಕ ನಿವಾಸ ಕಟ್ಟಡ, ಸಮುದಾಯ ಭವನ, ಸೇರಿದಂತೆ ವಿವಿಧ ಇಲಾಖೆಗಳ ವಿವಿಧ ಯೋಜನೆಗಳಡಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕ್ಷೇತ್ರದ ಶಾಸಕ ಹಾಗೂ ಸಚಿವ ಪ್ರಿಯಾಂಕ್‌ ಎಂ.ಖರ್ಗೆ ಅವರು ಈವರೆಗೆ ಒಟ್ಟು ₹ 3 ಸಾವಿರ ಕೋಟಿ ಅನುದಾನ ಸೌಲಭ್ಯ ಒದಗಿಸಿದ್ದಾರೆ ಎಂದು ಅವರು ತಿಳಿಸಿದರು. ಅವರು, ಪ್ರಿಯಾಂಕ್‌ ಅವರು ಕೈಗೊಂಡಿರುವ ಕ್ಷೇತ್ರದ ಅಭಿವೃದ್ಧಿಗೆ ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಸಹಕಾರ ನೀಡಿ ಭಾಗಿಯಾಗಬೇಕು ಎಂದು ಅವರು ಹೇಳಿದರು.
 
ಪ್ರಿಯಾಂಕ್‌ ಅವರ ಜನಪರ ಕಳಕಳಿ, ಅಭಿವೃದ್ಧಿಯ ಹಂಬಲ, ಜನರಿಗೆ ಮೂಲಸೌಲಭ್ಯ ತಲುಪಿಸಬೇಕು ಎನ್ನುವ ಛಲದಿಂದಾಗಿ ದಿಗ್ಗಾಂವ ಜಿ.ಪಂ ಕ್ಷೇತ್ರದ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸೌಲಭ್ಯ ಕಲ್ಪಿಸಲು ₹ 2 ಕೋಟಿ ಅನುದಾನ ಸೌಲಭ್ಯ ದೊರೆತಿದೆ. ಅಧಿಕಾರಿಗಳು ಗುಣ ಮಟ್ಟದ ಕಾಮಗಾರಿಗೆ ಆದ್ಯತೆ ನೀಡ ಬೇಕು. ಶೀಘ್ರದಲ್ಲಿ ಟೆಂಡರ್‌ ಪ್ರಕ್ರಿಯೆ ಮುಗಿಸಿ ಕಾಮಗಾರಿಗೆ ಚಾಲನೆ ನೀಡಲಾ ಗುವುದು ಎಂದು  ಹೇಳಿದರು.
 
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ ಮಾತನಾಡಿ, ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಜನರಿಗೆ ಅವಶ್ಯವಿರುವ ಅಭಿವೃದ್ಧಿ ಮತ್ತು ಮೂಲಸೌಲಭ್ಯ ಕಲ್ಪಿಸುವ ಕೆಲಸಗಳು ನಡೆಯುತ್ತಿವೆ. ಅಭಿವೃದ್ಧಿಯೆ ಗುರಿಯಾ ಗಿಸಿಕೊಂಡು ಶ್ರಮಿಸುತ್ತಿರುವ ಸಚಿವ ಪ್ರಿಯಾಂಕ್‌ ಅವರ ವೇಗಕ್ಕೆ ತಕ್ಕಂತೆ ಅಧಿಕಾರಿಗಳು ಕೆಲಸ ಮಾಡ ಬೇಕು ಎಂದು ಅವರು ತಿಳಿಸಿದರು. 
 
ಪಂಚಾಯತ್‌ರಾಜ್‌ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿ ಯರ್‌ ಶ್ರೀಧರ್‌, ಸಹಾಯಕ ಎಂಜಿನಿಯರ್‌ ಸದ್ರುದ್ದಿನ್‌, ಮುಖಂಡ ರಾದ ನಾಗಣ್ಣಗೌಡ ಪಾಟೀಲ್‌, ವೆಂಕ ಟೇಶ ಕುಲ್ಕರ್ಣಿ, ಚನ್ನಪ್ಪಗೌಡ, ದೇವಿಂ ದ್ರಪ್ಪ ಗುರೆ, ಸೋಮಶೇಖರ ವಾರದ, ದುರ್ಗಪ್ಪ, ಮಹಾದೇವ ತಳವಾರ, ರಾಘವೇಂದ್ರ ಗುತ್ತೇದಾರ್‌, ಮಹಾ ದೇವ ಕೊನಗೇರಿ, ರಾಮಣ್ಣ ಇದ್ದರು.
 
* ಅಲ್ಲೂರ್‌(ಕೆ) ಗ್ರಾಮದ ಹದಗೆಟ್ಟ ರಸ್ತೆಯ ಸುಧಾರಣೆ, ಪುರಾತನ ಹಣಾದಿ ರಸ್ತೆ ನಿರ್ಮಾಣ ದಿಂದ ವಾಹನ ಸಂಚಾರ, ಸಾರ್ವಜನಿಕ ಪ್ರಯಾಣಿಕರಿಗೆ  ಅನುಕೂಲವಾಗಲಿದೆ.
-ನಾಗಣ್ಣಗೌಡ ಪಾಟೀಲ, ಅಲ್ದೂರ್‌ (ಕೆ) ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.