ADVERTISEMENT

ಕ್ಯಾನ್ಸರ್: 612 ಮಹಿಳೆಯರ ತಪಾಸಣೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 6:48 IST
Last Updated 16 ಫೆಬ್ರುವರಿ 2017, 6:48 IST
ಜೇವರ್ಗಿ: ‘ಕ್ಯಾನ್ಸರ್ ಮಾರಕ ರೋಗವಾಗಿದೆ. ರೋಗ ಹರಡುವ ಮೊದಲೇ ಮಹಿಳೆಯರು ‘ಪ್ಯಾಪ್ಸ್ ಸ್ಮಾರ್’ ಪರೀಕ್ಷೆ ಮಾಡಿಸಿಕೊಳ್ಳಬೇಕು’ ಎಂದು ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಕೇರ್ ಇಂಡಿಯಾ ಆಸ್ಪತ್ರೆಯ ಕ್ಯಾನ್ಸರ್ ತಜ್ಞೆ ಡಾ.ಕಾಮೇಶ್ವರಿದೇವಿ ಹೇಳಿದರು.
 
ಬುಧವಾರ ತಾಲ್ಲೂಕಿನ ಜೇರಟಗಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ಧರ್ಮಸಿಂಗ್ ಫೌಂಡೇಶನ್ ಜೇವರ್ಗಿ, ಕಿದ್ವಾಯಿ ಕ್ಯಾನ್ಸರ್ ಕೇರ್ ಇಂಡಿಯಾ ಆಸ್ಪತ್ರೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಮಹಿಳೆಯ ರಿಗಾಗಿ ಉಚಿತ ಕ್ಯಾನ್ಸರ್ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. 
 
ಮಹಿಳೆಯರಲ್ಲಿ ಗರ್ಭಕೋಶದ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಪತ್ತೆ ಹಚ್ಚುವ ಕಾರ್ಯಕ್ರಮ ಇದಾಗಿದೆ. ಶಿಬಿರದಲ್ಲಿ ಮಹಿಳೆಯರಿಗೆ ಉಚಿತವಾಗಿ ‘ಪ್ಯಾಪ್ಸ್ ಸ್ಮಾರ್’ ಪರೀಕ್ಷೆ ಮಾಡಲಾಗುವುದು. ಈ ಪರೀಕ್ಷೆ ನಂತರ ಸೋಂಕುಗಳು ಹಾಗೂ ಕ್ಯಾನ್ಸರ್ ಕಾಯಿಲೆ ಪ್ರಾಥಮಿಕ ಹಂತದಲ್ಲಿ ಕಂಡು ಹಿಡಿದು ಸೂಕ್ತ ಚಿಕಿತ್ಸೆ ನೀಡಲಾಗು ವುದು. ತಾಲ್ಲೂಕಿನ ಜನತೆ ಉಚಿತ ಕ್ಯಾನ್ಸರ್ ತಪಾಸಣೆ ಶಿಬಿರದ ಸದುಪ ಯೋಗ ಪಡಿಸಿಕೊಳ್ಳಬೇಕು ಎಂದು ಡಾ.ಕಾಮೇಶ್ವರಿ ದೇವಿ ತಿಳಿಸಿದರು.
 
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿದ್ದು ಪಾಟೀಲ ಮಾತನಾಡಿ, ಉಚಿತ ಕ್ಯಾನ್ಸರ್ ತಪಾಸಣೆ ಶಿಬಿರದಲ್ಲಿ  ನಡೆಸಲಾಗಿದೆ. 7 ಜನರಿಗೆ ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಕಳುಹಿಸಲಾಗಿದೆ. ಇಬ್ಬರಲ್ಲಿ ಕ್ಯಾನ್ಸರ್ ರೋಗ ಪತ್ತೆಯಾಗಿದೆ. ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೆ ಶಸ್ತ್ರಚಿಕಿತ್ಸೆಗೆ ಕಳಿಸಲಾಗುವುದು ಎಂದರು. 
 
ಜೇರಟಗಿ ವಿರಕ್ತಮಠದ ಪೀಠಾಧಿ ಪತಿ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಾ.ಕಾಮೇಶ್ವರಿ ದೇವಿ, ಡಾ.ನೇಹಾ, ಡಾ.ಶಿವಾಂಗಿನಿ ಕುಲಕರ್ಣಿ, ಡಾ.ಗೋವಿಂದ ಉಪ್ಪಾರ, ಡಾ. ಸಂದೀಪ ಸಿಂಗ್, ಡಾ.ರೇಶ್ಮಾ, ಡಾ. ಮೀನಾ ಮಹಿಳೆಯರ ಆರೋಗ್ಯ ತಪಾಸಣೆ ನಡೆಸಿದರು.
 
ಜೇವರ್ಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಉಪಾಧ್ಯಕ್ಷ ಅಣ್ಣಾರಾವ ನಿಷ್ಠಿ ದೇಶಮುಖ, ಕುಮಾರ ಗೌಡ, ದತ್ತಪ್ಪ ರಂಜಣಗಿ, ಬಾಬು ನಾರಾಯಣಪುರ, ಶರಣಗೌಡ ಬೇಲೂರ್, ಮಲ್ಲಿಕಾರ್ಜುನ ಬೂದಿಹಾಳ ಸೇರಿದಂತೆ ಜೇರಟಗಿ ಸುತ್ತಲಿನ ಗ್ರಾಮ ಸ್ಥರು, ಮಹಿಳೆಯರು ಉಚಿತ ಕ್ಯಾನ್ಸರ್ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.