ADVERTISEMENT

ಚರಂಡಿಯಲ್ಲಿ ಕುಡಿಯುವ ನೀರಿನ ಪೈಪ್‌

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2017, 7:02 IST
Last Updated 11 ಸೆಪ್ಟೆಂಬರ್ 2017, 7:02 IST
ವಾಡಿ ಸಮೀಪದ ಹಲಕರ್ಟಿ ಗ್ರಾಮದ ನೇತಾಜಿ ಬಡಾವಣೆಯ ಮುಖ್ಯರಸ್ತೆ ಬದಿಯ ನಳದ ಪೈಪುಗಳು ಚರಂಡಿ ನೀರಿನಲ್ಲಿ ಬಿದ್ದಿರುವುದು
ವಾಡಿ ಸಮೀಪದ ಹಲಕರ್ಟಿ ಗ್ರಾಮದ ನೇತಾಜಿ ಬಡಾವಣೆಯ ಮುಖ್ಯರಸ್ತೆ ಬದಿಯ ನಳದ ಪೈಪುಗಳು ಚರಂಡಿ ನೀರಿನಲ್ಲಿ ಬಿದ್ದಿರುವುದು   

ವಾಡಿ: ಸಮೀಪದ ಹಲಕರ್ಟಿ ಗ್ರಾಮದಲ್ಲಿ ಅಳವಡಿಸಲಾಗಿರುವ ಕುಡಿಯುವ ನೀರಿನ ಪೈಪುಗಳು ಚರಂಡಿಯೊಳಗೆ ಬಿದ್ದಿದ್ದು, ಗ್ರಾಮಸ್ಥರಲ್ಲಿ ರೋಗ ಭೀತಿ ಸೃಷ್ಟಿಯಾಗಿದೆ. ಸ್ಥಳೀಯ ಪಂಚಾಯಿತಿ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

2ನೇ ವಾರ್ಡ್‌ನ ನೇತಾಜಿ ನಗರದಿಂದ ಮುಖ್ಯಬೀದಿಯವರೆಗೆ ಅಳವಡಿಸಲಾಗಿರುವ ಸಾರ್ವಜನಿಕ ನಳದ ಪೈಪುಗಳು, ಚರಂಡಿಯ ಕೊಳಚೆ ನೀರಿನಲ್ಲಿ ಮುಳುಗಿವೆ. ಇದರಿಂದಾಗಿ ಕೊಳಚೆ ನೀರು, ಪೈಪುಗಳಲ್ಲಿ ಸೇರಿ ಸಾರ್ವಜನಿಕರು ಕೊಳಚೆಯುಕ್ತ ಮಲಿನ ನೀರು ಸೇವಿಸುವಂತಾಗಿದೆ.

‘ಗ್ರಾಮದಲ್ಲಿ ಈಗಾಗಲೇ ಮಲಿನ ವಾತಾವರಣ ಇದೆ. ಕುಡಿಯಲು ನೀರಿನ ಪೈಪ್‌ ಕೊಳಚೆ ನೀರಿನಲ್ಲಿ ಬಿದ್ದು, ಹಲವು ದಿನಗಳಾಗಿವೆ. ಇದರಿಂದ ಸಾರ್ವಜನಿಕರು ಮಲೀನಯುಕ್ತ ಕೊಳಚೆ ನೀರು ಸೇವಿಸುತ್ತಿದ್ದಾರೆ. ಸ್ಥಳೀಯ ಪಂಚಾಯಿತಿ ಕನಿಷ್ಠ ಶುದ್ಧ ಕುಡಿಯುವ ನೀರು ಒದಗಿಸುತ್ತಿಲ್ಲ’ ಎನ್ನುತ್ತಾರೆ ಗ್ರಾಮಸ್ಥ ಮಲ್ಲಿನಾಥ ಹುಂಡೆಕಲ್.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.