ADVERTISEMENT

ತೊಗರಿ ಖರೀದಿ ಗೊಂದಲ ಬಗೆಹರಿಸಿ

ಶಾಸಕ ಬಿ.ಆರ್.ಪಾಟೀಲ ರಾಜ್ಯ ಸರ್ಕಾರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 7:03 IST
Last Updated 16 ಜನವರಿ 2017, 7:03 IST
ತೊಗರಿ ಖರೀದಿ ಗೊಂದಲ ಬಗೆಹರಿಸಿ
ತೊಗರಿ ಖರೀದಿ ಗೊಂದಲ ಬಗೆಹರಿಸಿ   

ಕಲಬುರ್ಗಿ: ‘ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಈ ಬಾರಿ ಬಂಪರ್ ತೊಗರಿ ಇಳುವರಿ ಬಂದಿದೆ. ಆದರೆ, ತೊಗರಿ ಖರೀದಿ ಕೇಂದ್ರಗಳಲ್ಲಿನ ಗೊಂದ ಲದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಈ ಗೊಂದಲ ಬಗೆಹರಿಸಬೇಕು’ ಎಂದು ಶಾಸಕ ಬಿ.ಆರ್.ಪಾಟೀಲ ಆಗ್ರಹಿಸಿದರು.

‘ನಫೆಡ್ ಮತ್ತು ತೊಗರಿ ಮಂಡಳಿಯಿಂದ ಜಿಲ್ಲೆಯಲ್ಲಿ ತೊಗರಿ ಖರೀದಿಸಲಾಗುತ್ತಿದೆ. ಆದರೆ, ನಫೆಡ್ ಸಂಸ್ಥೆಯು ಸ್ವಯಂ ಸೇವಾ ಸಂಸ್ಥೆ (ಎನ್‌ಜಿಒ)ಗಳಿಂದ ತೊಗರಿ ಖರೀದಿ ಮಾಡುತ್ತಿದ್ದು, ಆ ಎನ್‌ಜಿಒಗಳು ತೊಗರಿ ಖರೀದಿಸಿದ ರೈತರಿಗೆ ರಸೀದಿ ಕೊಟ್ಟಿಲ್ಲ. ಎಷ್ಟು ತೊಗರಿ ಖರೀದಿಸಿದ್ದಾರೆ, ಎಷ್ಟು ಹಣ ಕೊಡಬೇಕು ಎಂಬ ಯಾವ ಮಾಹಿತಿಯನ್ನೂ ರೈತರಿಗೆ ನೀಡಿಲ್ಲ. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಬೇಕು’ ಎಂದು ಭಾನುವಾರ ಪತ್ರಿಕಾ ಗೋಷ್ಠಿಯಲ್ಲಿ ಒತ್ತಾಯಿಸಿದರು.

‘ತೊಗರಿ ಖರೀದಿಗೆ ರಾಜ್ಯ ಸರ್ಕಾರ ಮೊದಲ ವರ್ಷ ₹100ಕೋಟಿ, ಎರಡನೇ ವರ್ಷ ₹200ಕೋಟಿ ಆವರ್ತ ನಿಧಿ ಮೀಸಲಿಟ್ಟಿತ್ತು. ಆದರೆ, ಈ ಹಣದಲ್ಲಿ ಒಂದು ರೂಪಾಯಿಯೂ ತೊಗರಿ ಖರೀದಿಗೆ ಬಳಕೆಯಾಗಿಲ್ಲ. ನಫೆಡ್ ತೊಗರಿ ಖರೀದಿಸುತ್ತಿರುವ ಬಗ್ಗೆ ಜಿಲ್ಲಾಧಿಕಾರಿ, ಕೃಷಿ ಇಲಾಖೆ ಮತ್ತು ಎಪಿಎಂಸಿಗೆ ಮಾಹಿತಿ ಇಲ್ಲ. ಹೀಗಾದರೆ ಎನ್‌ಜಿಒ ಹೆಸರಿನಲ್ಲಿ ಯಾರೋ ಬಂದು ತೊಗರಿ ಖರೀದಿ ಮಾಡಿಕೊಂಡು ಹೋದರೆ ಹೇಗೆ’ ಎಂದು ಪ್ರಶ್ನಿಸಿದರು.

‘ಕೇಂದ್ರ ಸರ್ಕಾರ 20 ಲಕ್ಷ ಮೆಟ್ರಿಕ್ ಟನ್ (200 ಲಕ್ಷ ಕ್ವಿಂಟಲ್) ದ್ವಿದಳ ಧಾನ್ಯಗಳನ್ನು ಆಮದು ಮಾಡಿ ಕೊಂಡಿದೆ. ಈ ವರ್ಷ ಇಳುವರಿ ಹೆಚ್ಚಾ ಗಿದ್ದರಿಂದ ಮತ್ತು ಆಮ ದಿನಿಂದಾಗಿ ತೊಗರಿ ಬೆಲೆ ಕುಸಿದಿದೆ. ವ್ಯಾಪಾರಿಗಳು ರೈತರಿಂದ ₹4,500ರಂತೆ ಕ್ವಿಂಟಲ್ ತೊಗರಿ ಖರೀದಿ ಮಾಡಿ, ಖರೀದಿ ಕೇಂದ್ರದಲ್ಲಿ ₹5,500 ಮಾರಾಟ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿಯೇ ನಾನು ಮಾದ ನಹಿಪ್ಪರ ಗಾದಲ್ಲಿನ ತೊಗರಿ ಕೇಂದ್ರವನ್ನು ಮುಚ್ಚುವಂತೆ ಒತ್ತಾಯಿಸಿದ್ದೆ’ ಎಂದು ಸ್ಪಷ್ಟಪಡಿಸಿದರು. ಗಣೇಶ ಪಾಟೀಲ, ರಾಜ ಶೇಖರ ಯಂಕಂಚಿ, ರಾಜಶೇಖರ ಬುದ್ಧಿ ವಂತ, ಉಸ್ಮಾನ್ ಡಾಂಗೆ, ಬಸವರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.