ADVERTISEMENT

‘ಧರ್ಮ ದಿಕ್ಸೂಚಿ ಇದ್ದರೆ ದಾರಿ ತಪ್ಪಲ್ಲ’

ವೈದಿಕ ಸಂಸ್ಕಾರ ಶಿಬಿರ ಸಮಾರೋಪ ಸಮಾರಂಭ

​ಪ್ರಜಾವಾಣಿ ವಾರ್ತೆ
Published 26 ಮೇ 2018, 10:39 IST
Last Updated 26 ಮೇ 2018, 10:39 IST

ಕಲಬುರರ್ಗಿ: ‘ದೈವತ್ವಕ್ಕೆ ಕರೆದೊಯ್ಯುವುದು ಧರ್ಮದ ಮೂಲ ಗುರಿಯಾಗಿದೆ’ ಎಂದು ಹೊನ್ನಕಿರಣಗಿಯ ಚಂದ್ರಗುಂಡ ಶಿವಾಚಾರ್ಯರು ನುಡಿದರು.

ನಗರದ ಗೋದುತಾಯಿ ಕಾಲೊನಿ ಪಂಚಲಿಂಗೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಆಯೋಜಿಸಿದ್ದ ಕರಿಬಸವೇಶ್ವರ ಗುರುಕುಲ ವೈದಿಕ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

‘ಸೂರ್ಯನು ಭೂಮಿಗಿಂತ ಎಷ್ಟು ದೊಡ್ಡವನಾಗಿದ್ದಾನೆ. ದೂರದಲ್ಲಿ ಇರುವುದರಿಂದ ಸಣ್ಣವನಾಗಿ ಕಾಣುತ್ತಾನೆ. ದೇವರು ನಮಗಿಂತ ಎಷ್ಟು ದೊಡ್ಡವನು ಆದರೆ, ನಾವು ಅವನಿಂದ ದೂರ ಇರುವುದರಿಂದ ನೈಜ ಸ್ವರೂಪವನ್ನು ತಿಳಿಯಲಾಗದು. ಧರ್ಮಾಚರಣೆಗಳು ಭಿನ್ನವಾದರೂ ಸೇರುವ ಗುರಿ ಒಂದೇ ಆಗಿದೆ’ ಎಂದರು.

ADVERTISEMENT

ಸ್ವಧರ್ಮ ಅನುಷ್ಠಾನ, ಪರಧರ್ಮ ಸಹಿಷ್ಣತೆ ಬಾಳಿನ ಎರಡು ಕಣ್ಣುಗಳಾಗಬೇಕು. ಧರ್ಮ ದಿಕ್ಸೂಚಿ ಇಟ್ಟುಕೊಂಡು ನಡೆದರೆ ದಾರಿ ತಪ್ಪುವುದಿಲ್ಲ ಎಂದು ಹೇಳಿದರು.

ಜಿಲ್ಲಾ ಪಂಚಾಯತಿ ಸದಸ್ಯ ಅರುಣಕುಮಾರ ಪಾಟೀಲ್ ಧರ್ಮಸಭೆ ಉದ್ಘಾಟಿಸಿ ಮಾತನಾಡಿ, ‘ವೈದಿಕ ಸಂಸ್ಕಾರ ಶಿಬಿರಗಳನ್ನು ಮಾಡುವುದರಿಂದ ಜನರಲ್ಲಿ ಧರ್ಮ ಪ್ರಜ್ಞೆ ಮೂಡುತ್ತದೆ. ವಿದ್ಯಾರ್ಥಿಗಳಿಗೆ ವೈದಿಕ ಸಂಸ್ಕಾರ ಕೊಡುವುದರಿಂದ ಧರ್ಮ ಸಂಸ್ಕತಿ ಗಟ್ಟಿಗೊಳ್ಳುತ್ತದೆ’ ಎಂದರು.

ಪಂಡಿತ ಶಿವಕವಿ ಜೋಗುರ ಮಾತನಾಡಿ, ‘ಅಗಸ್ತ್ಯ ಮಹಾಋಷಿ ವ್ಯಾಸ, ಸಾನಂದ, ದುರ್ವಾಸ, ದಧಿಚೀ, ದಲಿತ ಋಷಿಗಳಿಗೆ ಧರ್ಮ ಬೋಧಿಸಿರುವ ಕೀರ್ತಿ ಪಂಚಪೀಠಗಳ ಆಚಾರ್ಯರಿಗೆ ಸಲ್ಲುತ್ತದೆ. ಹೊನ್ನಕಿರಣಗಿಯ ಶ್ರೀಗಳು 110 ವಿದ್ಯಾರ್ಥಿಗಳಿಗೆ ಸಂಸ್ಕಾರ ಶಿಬಿರ ನಡೆಸುತ್ತಿರುವ ಕಾರ್ಯದಿಂದ ಸಮಾಜ ಸುಧಾರಣೆಯಾಗಲಿದೆ’ ಎಂದು ಹೇಳಿದರು.

ಶರಣ ಸಂಸ್ಥಾನದ ಲಿಂಗರಾಜಪ್ಪ ಅಪ್ಪಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ ಧರ್ಮ ಸಂಸ್ಕಾರ ಶಿಬಿರಗಳಲ್ಲಿ ಹೆಣ್ಣು ಮಕ್ಕಳಿಗೆ ಪಾಲ್ಗೊಳ್ಳುವ ಅವಕಾಶ ಕೊಡಬೇಕು. ಮುಂದಿನ ದಿನಗಳಲ್ಲಿ ವೈದಿಕ ಸಂಸ್ಕಾರ ಶಿಬಿರದ ಜೊತೆಗೆ ಕಂಪ್ಯೂಟರ್ ಕಲಿಸುವ ಶಿಬಿರವನ್ನು ನಡೆಸಬೇಕು’ ಎಂದರು.

ಪಾಳಾದ ಗುರುಮೂರ್ತಿ ಶಿವಾಚಾರ್ಯರು, ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರು, ಓಂಕಾರ ಬೇನೂರಿನ ಸಿದ್ಧರೇಣುಕಾ ಶಿವಾಚಾರ್ಯರು, ಮಹಾಗಾಂವದ ಗುರುಲಿಂಗ ಶಿವಾಚಾರ್ಯರು, ಸ್ಟೇಷನ್‌ ಬಬಲಾದದ ರೇವಣಸಿದ್ದ ಶಿವಾಚಾರ್ಯರು, ಮಲ್ಲಿಕಾರ್ಜುನ ಟೆಂಗಳಿ ಶಾಸ್ತ್ರಿಗಳು, ಮಲ್ಲಿಕಾರ್ಜುನ ಎಸ್. ಪಾಟೀಲ್, ಶಾಂತವೀರ ತುಪ್ಪದ, ಡಾ. ಮಲ್ಲಿಕಾರ್ಜುನ ಪಾಟೀಲ್, ಶಿವಶಂಕರ ಗಚ್ಚಿನಮಠ, ವೀರಯ್ಯಶಾಸ್ತ್ರಿ ಮಲಕೂಡ, ಬಸವರಾಜ ಪುರಾಣಿಕ, ಅಣ್ಣಾರಾವ ಕಲಗುರ್ತಿ, ವಿಶ್ವರಾಧ್ಯ ನಾಮಕಲ್, ಕೇಶವರಾವ ಪಾಟೀಲ್, ಜಾನಪ್ಪಗೌಡ ಪಾಟೀಲ್, ಶರಣಬಸಪ್ಪ ಬಗಲಿ, ಸಿದ್ರಾಮಪ್ಪ ಆಲಗೂಡಕರ ಇದ್ದರು. ವೇದಘೋಷ ಜರುಗಿತು. ಸಿದ್ದಮಲ್ಲಯ್ಯ ಹಿರೇಮಠ ಸ್ವಾಗತಿಸಿದರು. ನಾಗಲಿಂಗಯ್ಯ ಮಠಪತಿ ನಿರೂಪಿಸಿದರು. ‘ದೈವತ್ವಕ್ಕೆ ಕರೆದೊಯ್ಯುವುದು ಧರ್ಮದ ಮೂಲ ಗುರಿಯಾಗಿದೆ’ ಎಂದು ಹೊನ್ನಕಿರಣಗಿಯ ಚಂದ್ರಗುಂಡ ಶಿವಾಚಾರ್ಯರು ನುಡಿದರು.

ನಗರದ ಗೋದುತಾಯಿ ಕಾಲೊನಿ ಪಂಚಲಿಂಗೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಆಯೋಜಿಸಿದ್ದ ಕರಿಬಸವೇಶ್ವರ ಗುರುಕುಲ ವೈದಿಕ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

‘ಸೂರ್ಯನು ಭೂಮಿಗಿಂತ ಎಷ್ಟು ದೊಡ್ಡವನಾಗಿದ್ದಾನೆ. ದೂರದಲ್ಲಿ ಇರುವುದರಿಂದ ಸಣ್ಣವನಾಗಿ ಕಾಣುತ್ತಾನೆ. ದೇವರು ನಮಗಿಂತ ಎಷ್ಟು ದೊಡ್ಡವನು ಆದರೆ, ನಾವು ಅವನಿಂದ ದೂರ ಇರುವುದರಿಂದ ನೈಜ ಸ್ವರೂಪವನ್ನು ತಿಳಿಯಲಾಗದು. ಧರ್ಮಾಚರಣೆಗಳು ಭಿನ್ನವಾದರೂ ಸೇರುವ ಗುರಿ ಒಂದೇ ಆಗಿದೆ’ ಎಂದರು.

ಸ್ವಧರ್ಮ ಅನುಷ್ಠಾನ, ಪರಧರ್ಮ ಸಹಿಷ್ಣತೆ ಬಾಳಿನ ಎರಡು ಕಣ್ಣುಗಳಾಗಬೇಕು. ಧರ್ಮ ದಿಕ್ಸೂಚಿ ಇಟ್ಟುಕೊಂಡು ನಡೆದರೆ ದಾರಿ ತಪ್ಪುವುದಿಲ್ಲ ಎಂದು ಹೇಳಿದರು.

ಜಿಲ್ಲಾ ಪಂಚಾಯತಿ ಸದಸ್ಯ ಅರುಣಕುಮಾರ ಪಾಟೀಲ್ ಧರ್ಮಸಭೆ ಉದ್ಘಾಟಿಸಿ ಮಾತನಾಡಿ, ‘ವೈದಿಕ ಸಂಸ್ಕಾರ ಶಿಬಿರಗಳನ್ನು ಮಾಡುವುದರಿಂದ ಜನರಲ್ಲಿ ಧರ್ಮ ಪ್ರಜ್ಞೆ ಮೂಡುತ್ತದೆ. ವಿದ್ಯಾರ್ಥಿಗಳಿಗೆ ವೈದಿಕ ಸಂಸ್ಕಾರ ಕೊಡುವುದರಿಂದ ಧರ್ಮ ಸಂಸ್ಕತಿ ಗಟ್ಟಿಗೊಳ್ಳುತ್ತದೆ’ ಎಂದರು.

ಪಂಡಿತ ಶಿವಕವಿ ಜೋಗುರ ಮಾತನಾಡಿ, ‘ಅಗಸ್ತ್ಯ ಮಹಾಋಷಿ ವ್ಯಾಸ, ಸಾನಂದ, ದುರ್ವಾಸ, ದಧಿಚೀ, ದಲಿತ ಋಷಿಗಳಿಗೆ ಧರ್ಮ ಬೋಧಿಸಿರುವ ಕೀರ್ತಿ ಪಂಚಪೀಠಗಳ ಆಚಾರ್ಯರಿಗೆ ಸಲ್ಲುತ್ತದೆ. ಹೊನ್ನಕಿರಣಗಿಯ ಶ್ರೀಗಳು 110 ವಿದ್ಯಾರ್ಥಿಗಳಿಗೆ ಸಂಸ್ಕಾರ ಶಿಬಿರ ನಡೆಸುತ್ತಿರುವ ಕಾರ್ಯದಿಂದ ಸಮಾಜ ಸುಧಾರಣೆಯಾಗಲಿದೆ’ ಎಂದು ಹೇಳಿದರು.

ಶರಣ ಸಂಸ್ಥಾನದ ಲಿಂಗರಾಜಪ್ಪ ಅಪ್ಪಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ ಧರ್ಮ ಸಂಸ್ಕಾರ ಶಿಬಿರಗಳಲ್ಲಿ ಹೆಣ್ಣು ಮಕ್ಕಳಿಗೆ ಪಾಲ್ಗೊಳ್ಳುವ ಅವಕಾಶ ಕೊಡಬೇಕು. ಮುಂದಿನ ದಿನಗಳಲ್ಲಿ ವೈದಿಕ ಸಂಸ್ಕಾರ ಶಿಬಿರದ ಜೊತೆಗೆ ಕಂಪ್ಯೂಟರ್ ಕಲಿಸುವ ಶಿಬಿರವನ್ನು ನಡೆಸಬೇಕು’ ಎಂದರು.

ಪಾಳಾದ ಗುರುಮೂರ್ತಿ ಶಿವಾಚಾರ್ಯರು, ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರು, ಓಂಕಾರ ಬೇನೂರಿನ ಸಿದ್ಧರೇಣುಕಾ ಶಿವಾಚಾರ್ಯರು, ಮಹಾಗಾಂವದ ಗುರುಲಿಂಗ ಶಿವಾಚಾರ್ಯರು, ಸ್ಟೇಷನ್‌ ಬಬಲಾದದ ರೇವಣಸಿದ್ದ ಶಿವಾಚಾರ್ಯರು, ಮಲ್ಲಿಕಾರ್ಜುನ ಟೆಂಗಳಿ ಶಾಸ್ತ್ರಿಗಳು, ಮಲ್ಲಿಕಾರ್ಜುನ ಎಸ್. ಪಾಟೀಲ್, ಶಾಂತವೀರ ತುಪ್ಪದ, ಡಾ. ಮಲ್ಲಿಕಾರ್ಜುನ ಪಾಟೀಲ್,

ಶಿವಶಂಕರ ಗಚ್ಚಿನಮಠ, ವೀರಯ್ಯಶಾಸ್ತ್ರಿ ಮಲಕೂಡ, ಬಸವರಾಜ ಪುರಾಣಿಕ, ಅಣ್ಣಾರಾವ ಕಲಗುರ್ತಿ, ವಿಶ್ವರಾಧ್ಯ ನಾಮಕಲ್, ಕೇಶವರಾವ ಪಾಟೀಲ್, ಜಾನಪ್ಪಗೌಡ ಪಾಟೀಲ್, ಶರಣಬಸಪ್ಪ ಬಗಲಿ, ಸಿದ್ರಾಮಪ್ಪ ಆಲಗೂಡಕರ ಇದ್ದರು. ವೇದಘೋಷ ಜರುಗಿತು. ಸಿದ್ದಮಲ್ಲಯ್ಯ ಹಿರೇಮಠ ಸ್ವಾಗತಿಸಿದರು. ನಾಗಲಿಂಗಯ್ಯ ಮಠಪತಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.